Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಟಿ20 ತ್ರಿಕೋನ ಸರಣಿ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ

Monday, 12.03.2018, 11:59 PM       1 Comment

ಕೊಲಂಬೋ: ನಿದಹಾಸ್​ ಟ್ರೋಫಿ ಟಿ20 ಕ್ರಿಕೆಟ್​ ಟೂರ್ನಿಯ ಮೂರನೇ ಲೀಗ್​ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಶ್ರೀಲಂಕಾ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಟಾಸ್​ ಗೆದ್ದ ಭಾರತ ಮೊದಲು ಫೀಲ್ಡಿಂಗ್​ ಆರಿಸಿಕೊಂಡಿತು. ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ ನಿಗದಿತ 19 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿ ಭಾರತಕ್ಕೆ 153 ರನ್​ ಗುರಿ ನೀಡಿತು. ಭಾರತ ತಂಡ 17.3 ಓವರ್​ಗಳಲ್ಲಿ ಕೇವಲ 4 ವಿಕೆಟ್​ ಕಳೆದುಕೊಂಡು 153 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಭಾರತದ ಪರ ಮನೀಶ್​ ಪಾಂಡೆ (42*) ಮತ್ತು ದಿನೇಶ್​ ಕಾರ್ತಿಕ್​ (39*) ಆಕರ್ಷಕ ಆಟವಾಡಿದರು. ಉಳಿದಂತೆ ಸುರೇಶ್​ ರೈನಾ (27), ಕೆ.ಎಲ್​. ರಾಹುಲ್​ (18), ರೋಹಿತ್​ ಶರ್ಮಾ (11) ಮತ್ತು ಶಿಖರ್​ ಧವನ್​ (8) ರನ್​ ಗಳಿಸಿದರು.

ಇದಕ್ಕೂ ಮುನ್ನ ಶಾರ್ದೂಲ್​ ಠಾಕೂರ್​ (27 ಕ್ಕೆ 4) ಪ್ರಭಾವಿ ಬೌಲಿಂಗ್​ ದಾಳಿ ನಡೆಸಿ ಶ್ರೀಲಂಕಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ನೆರವಾದರು. (ಏಜೆನ್ಸೀಸ್​)

One thought on “ಟಿ20 ತ್ರಿಕೋನ ಸರಣಿ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ

Leave a Reply

Your email address will not be published. Required fields are marked *

Back To Top