Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ

Wednesday, 06.12.2017, 5:40 PM       No Comments

ನವದೆಹಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಕೊನೆಯ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಭಾರತ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿಯನ್ನು ಜಯಿಸಿದೆ.

ಮೊದಲ ಇನ್ನಿಂಗ್ಸ್​ ಆಡಿದ ಭಾರತ 7 ವಿಕೆಟ್​ ಕಳೆದುಕೊಂಡು 536 ರನ್​ಗೆ ಡಿಕ್ಲೇರ್ ಪಡೆದುಕೊಂಡಿತ್ತು. ಗುರಿ ಬೆನ್ನತ್ತಿದ್ದ ಶ್ರೀಲಂಕಾ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 373 ರನ್​ ಗಳಿಸಿ 163 ರನ್​ಗಳ ಹಿನ್ನಡೆಯನ್ನು ಅನುಭವಿಸಿತ್ತು.

ದ್ವಿತೀಯ ಇನ್ನಿಂಗ್ಸ್​ನಲ್ಲಿ ಭಾರತ 5 ವಿಕೆಟ್​ ನಷ್ಟಕ್ಕೆ 246 ರನ್​ಗೆ ಡಿಕ್ಲೇರ್ ಘೋಷಿಸಿ ಪ್ರವಾಸಿ ಲಂಕಾ ಗೆಲುವಿಗೆ 410 ರನ್​ಗಳ ಗುರಿ ನೀಡಿತ್ತು. ಭಾರತದ ಪರ 2ನೇ ಇನ್ನಿಂಗ್ಸ್ ನಲ್ಲಿ ಶಿಖರ್ ಧವನ್ 67, ಮುರಳಿ ವಿಜಯ್ 9, ಅಜಿಂಕ್ಯಾ ರಹಾನೆ 10, ಚೆತೇಶ್ವರ್ ಪೂಜಾರ 49, ವಿರಾಟ್ ಕೊಹ್ಲಿ 50, ಔಟಾಗದೇ ರೋಹಿತ್ ಶರ್ಮಾ 50 ಮತ್ತು ರವೀಂದ್ರ ಜಡೇಜಾ 4 ರನ್ ಗಳ ಕಾಣಿಕೆ ನೀಡಿದ್ದರು.

4ನೇ ದಿನದಾಟದಂತ್ಯಕ್ಕೆ 2ನೇ ಇನ್ನಿಂಗ್ಸ್​ ಆರಂಭಿಸಿದ ಶ್ರೀಲಂಕಾ ಆರಂಭದಲ್ಲೇ ಮೂರು ವಿಕೆಟ್​ ಕಳೆದುಕೊಂಡು ​31 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಕರುಣರತ್ನೆ 13, ಸಮರ ವಿಕ್ರಮ 5 ರನ್ ಹಾಗೂ ಲಕ್ಮಲ್​ ಸೊನ್ನೆಗೆ ಔಟಾಗಿದ್ದರು. ಉಳಿದಂತೆ ಮ್ಯಾಥ್ಯೂಸ್ 0* ಹಾಗೂ ಧನಂಜಯ ಡಿಸಿಲ್ವಾ 13* ರನ್​ ಗಳಿಸಿ ಅಜೇಯರಾಗಿ ಉಳಿದಿದ್ದರು.

ಕೊನೆಯ ದಿನ ಆಟ ಮುಂದುವರಿಸಿದ ಶ್ರೀಲಂಕಾ ಸೋಲಿನ ದಡದಲ್ಲಿದ್ದ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದಾರೆ. 5 ನೇ ದಿನ ಉತ್ತಮ ಪ್ರದರ್ಶನ ನೀಡಿದ ಧನಂಜಯ ಡಿಸಿಲ್ವಾ 119 ರನ್​ ಗಳಿಸಿ ಗಾಯದಿಂದ ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಮ್ಯಾಥ್ಯೂಸ್ 1 ಗಳಿಸಿದರೆ, ನಾಯಕ ದಿನೇಶ್ ಚಾಂಡಿಮಲ್​ 36 ಗಳಿಸಿ ಔಟಾದರು. ಉಳಿದಂತೆ ರೋಶೇನ್​ ಸಿಲ್ವಾ 74 ಹಾಗೂ ನಿರೋಷನ್​ ಡಿಕ್ವೆಲ್ಲಾ 44 ರನ್​ ಗಳಿಸಿ ಅಜೇಯರಾಗಿ ಉಳಿದರು. ​

ಭಾರತದ ಪರ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಅಶ್ವಿನ್​ ತಲಾ ಒಂದು ವಿಕೆಟ್ ಕಬಳಿಸಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top