Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ರೋಹಿತ್ ಸೆಂಚುರಿ, ಭಾರತಕ್ಕೆ ಐತಿಹಾಸಿಕ ವಿಕ್ಟರಿ

Wednesday, 14.02.2018, 3:02 AM       No Comments

ಪೋರ್ಟ್ ಎಲಿಜಬೆತ್​: ದಕ್ಷಿಣ ಆಫ್ರಿಕಾ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿಗಾಗಿ ಭಾರತದ ಸುದೀರ್ಘ 26 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಪೋರ್ಟ್ ಎಲಿಜಬೆತ್​ನಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡವನ್ನು 73 ರನ್ ಗಳಿಂದ ಬಗ್ಗುಬಡಿಯುವ ಮೂಲಕ ಕಾಮನಬಿಲ್ಲಿನ ನಾಡಿನಲ್ಲಿ ಐತಿಹಾಸಿಕ ಸರಣಿ ವಿಕ್ರಮ ಸಾಧಿಸಿದೆ. 1992-93ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಸರಣಿ ಆಡಿದ್ದ ಭಾರತ ಈವರೆಗೂ ಆಡಿದ ಐದೂ ಸರಣಿಯಲ್ಲಿ ಸೋಲಿನ ಕಹಿಯನ್ನೇ ಕಂಡಿತ್ತು. ಹಾಲಿ ಪ್ರವಾಸದ ಟೆಸ್ಟ್ ಸರಣಿಯಲ್ಲೂ ಸೋಲು ಕಂಡಿದ್ದ ಭಾರತ ತಂಡ ಇನ್ನೊಂದು ಏಕದಿನ ಬಾಕಿ ಇರುವಂತೆ 4-1 ರಿಂದ ಸರಣಿ ಗೆಲ್ಲುವ ಮೂಲಕ ಹೊಸ ಭಾಷ್ಯ ಬರೆದಿದೆ.

ಸೇಂಟ್ ಜಾರ್ಜ್ಸ್ ಪಾರ್ಕ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಏಡೆನ್ ಮಾರ್ಕ್ರಮ್ ಭಾರತ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊನೆಗೂ ಬ್ಯಾಟಿಂಗ್ ಲಯ ಕಂಡುಕೊಂಡ ರೋಹಿತ್ ಶರ್ಮ (115 ರನ್, 126 ಎಸೆತ, 11 ಬೌಂಡರಿ, 4 ಸಿಕ್ಸರ್) ಶತಕದ ನಿರ್ವಹಣೆಯ ನೆರವಿನಿಂದ ಭಾರತ ತಂಡ 7 ವಿಕೆಟ್​ಗೆ 274 ರನ್ ಪೇರಿಸಿತು. 40 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿದ್ದ ಭಾರತ ತಂಡ ಕೊನೆಯ 10 ಓವರ್​ಗಳಲ್ಲಿ ದಕ್ಷಿಣ ಆಫ್ರಿಕಾದ ಶಿಸ್ತಿನ ದಾಳಿ ಎದುರು ರನ್ ಗಳಿಸಲು ಒದ್ದಾಡಿದ್ದರಿಂದ 300ಕ್ಕಿಂತ ಅಧಿಕ ರನ್ ಪೇರಿಸುವ ಅವಕಾಶದಿಂದ ವಂಚಿತವಾಯಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, ಅನುಭವಿ ಆಟಗಾರರ ವೈಫಲ್ಯದಿಂದಾಗಿ 42.2 ಓವರ್​ಗಳಲ್ಲಿ 201 ರನ್​ಗೆ ಆಲೌಟ್ ಆಗಿ ಸೋಲು ಕಂಡಿತು

# ಭಾರತ ತಂಡ ಗೆದ್ದ ಸತತ 9ನೇ ದ್ವಿಪಕ್ಷೀಯ ಸರಣಿ ಇದಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ಸತತ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ವಿಶ್ವದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಲ್ಲಿದೆ. 1980 ರಿಂದ 1988ರವರೆಗೆ ಆಡಿದ 14 ಸರಣಿಗಳಲ್ಲಿ ವಿಂಡೀಸ್ ಗೆಲುವು ಸಾಧಿಸಿತ್ತು. ಭಾರತ ತಂಡ 2016ರ ಜೂನ್​ನಿಂದ ಆರಂಭವಾಗಿ ಭಾರತ 9 ಸರಣಿಗಳಲ್ಲಿ ಜಯ ಕಂಡಿದೆ. ನಂತರದ ಸ್ಥಾನದಲ್ಲಿ 8 ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡವಿದೆ.

# ಹಾಲಿ ಸರಣಿಯಲ್ಲಿ ಭಾರತದ ಸ್ಪಿನ್ನರ್​ಗಳು 28 ವಿಕೆಟ್ ಪಡೆದಿದ್ದಾರೆ. ವಿದೇಶದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ಸ್ಪಿನ್ನರ್​ಗಳು ಇಷ್ಟು ವಿಕೆಟ್ ಪಡೆದಿರುವುದು ಇದೇ ಮೊದಲು.

# ಭಾರತ ತಂಡ ಸೆಂಚುರಿಯನ್​ನಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ಸೋಲು ಕಂಡರೂ, ಏಕದಿನ ರ್ಯಾಂಕಿಂಗ್​ನಲ್ಲಿ ವಿಶ್ವ ನಂ.1 ತಂಡವೆನಿಸಿಕೊಂಡೇ ದಕ್ಷಿಣ ಆಫ್ರಿಕಾದಿಂದ ಮರಳಲಿದೆ.

ಹಾಶಿಂ ಆಮ್ಲ ಅರ್ಧಶತಕದ ಆಟ

ದಕ್ಷಿಣ ಆಫ್ರಿಕಾ ಮೊದಲ ವಿಕೆಟ್​ಗೆ ಉತ್ತಮ ಆರಂಭ ಪಡೆದುಕೊಂಡಿತ್ತು. ಹಾಶಿಂ ಆಮ್ಲ (71ರನ್, 92 ಎಸೆತ, 5 ಬೌಂಡರಿ) ಹಾಗೂ ನಾಯಕ ಏಡೆನ್ ಮಾರ್ಕ್ರಮ್ (32) 58 ಎಸೆತಗಳಲ್ಲಿ 52 ರನ್ ಜತೆಯಾಟವಾಡಿದ್ದರು. ಬುಮ್ರಾ, ಮಾರ್ಕ್ರಮ್ ವಿಕೆಟ್ ಉರುಳಿದ ಬೆನ್ನಲ್ಲೇ ಆಫ್ರಿಕಾ ತಂಡ ಕುಸಿತ ಕಂಡಿತು. ಅನುಭವಿ ಆಟಗಾರರಾದ ಜೀನ್ ಪಾಲ್ ಡುಮಿನಿ (1) ಹಾಗೂ ಎಬಿ ಡಿವಿಲಿಯರ್ಸ್(6) 10 ರನ್ ಗಳ ಅಂತರದಲ್ಲಿ ಔಟಾಗುವುದರೊಂದಿಗೆ ಭಾರತ ಜಯದ ಕನಸು ಕಾಣಲಾರಂಭಿಸಿತು. ಇವರಿಬ್ಬರೂ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಔಟಾದರು. 65 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಫ್ರಿಕಾ ತಂಡಕ್ಕೆ 4ನೇ ವಿಕೆಟ್​ಗೆ ಆಮ್ಲ ಹಾಗೂ ಮಿಲ್ಲರ್ (36) ಆಧಾರವಾದರು. 62 ರನ್ ಜತೆಯಾಟವಾಡಿ ಚೇತರಿಕೆ ನೀಡುತ್ತಿದ್ದ ಹಂತದಲ್ಲಿ ಚಾಹಲ್ ಎಸೆತದಲ್ಲಿ ಮಿಲ್ಲರ್ ಬೌಲ್ಡ್ ಆದರು. 5ನೇ ವಿಕೆಟ್​ಗೆ ಆಮ್ಲಗೆ ಜತೆಯಾದ ಕಳೆದ ಪಂದ್ಯದ ಹೀರೋ ಹೆನ್ರಿಕ್ ಕ್ಲಾಸೆನ್ (39ರನ್, 42 ಎಸೆತ, 2 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟವಾಡಲು ಆರಂಭಿಸಿದರು. ಈ ಜೋಡಿ ಅಪಾಯಕಾರಿಯಾಗುತ್ತಿದ್ದ ಹಂತದಲ್ಲಿ ಪಾಂಡ್ಯರ ನಿಖರ ಥ್ರೋಗೆ ರನೌಟಾದ ಆಮ್ಲ ಪೆವಿಲಿಯನ್ ಸೇರಿದರು. ಬಳಿಕ ಆಂಡಿಲೆ ಪೆಹ್ಲುಕ್​ವಾಯೊ ಶೂನ್ಯಕ್ಕೆ ಔಟಾಗಿದ್ದರಿಂದ ಭಾರತ ಗೆಲುವಿನತ್ತ ಮುಖ ಮಾಡಿತು.

ರೋಹಿತ್ ಸೂಪರ್ ಬ್ಯಾಟಿಂಗ್

ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಪ್ರತಾಪ ತೋರಿದ್ದರೆ, ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಶತಕದ ಆಟ ಆಡಿದ್ದರು. ಆದರೆ, ಹಾಲಿ ಪ್ರವಾಸದಲ್ಲಿ ಆಡಿದ ಎಂಟು ಇನಿಂಗ್ಸ್​ಗಳಲ್ಲಿ ಕನಿಷ್ಠ ಅರ್ಧಶತಕವನ್ನೂ ದಾಖಲಿಸದೇ ಇದ್ದ ರೋಹಿತ್ ಶರ್ಮ ಈ ಬಾರಿ ಇನಿಂಗ್ ್ಸೆ ಜೀವ ತುಂಬಿದರು. ಆದರೆ, ರೋಹಿತ್​ರ 179 ನಿಮಿಷದ ಇನಿಂಗ್ಸ್ ಆತಂಕಗಳಿಂದಲೇ ಕೂಡಿತ್ತು. 126 ಎಸೆತಗಳ ಇನಿಂಗ್ಸ್ ವೇಳೆ ರೋಹಿತ್, ನಾಯಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ರನೌಟ್ ಆಗುವುದನ್ನು ಕಂಡಿದ್ದರು. ಒಮ್ಮೆ ಡಿಆರ್​ಎಸ್ ನಿಂದ ಜೀವದಾನವನ್ನು ಪಡೆದುಕೊಂಡಿದ್ದ ರೋಹಿತ್, ಶತಕದ ಸಮೀಪವಿದ್ದಾಗ ಮತ್ತೊಂದು ಜೀವದಾನ ಪಡೆದುಕೊಂಡಿದ್ದರು. ರೋಹಿತ್ ಔಟಾದ ಮೊತ್ತಕ್ಕೆ 29 ರನ್ ಕೂಡಿಸುವ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡಿತ್ತು. ತಂಡಕ್ಕೆ ಸಿಕ್ಕಿದ ಉತ್ತಮ ಆರಂಭ ಕೊನೇ 15 ಓವರ್​ಗಳ ಕೆಟ್ಟ ಆಟದಿಂದ ಮಂಕಾಯಿತು. ಈ ಅವಧಿಯಲ್ಲಿ ಲುಂಜಿ ಎನ್​ಗಿಡಿ (51ಕ್ಕೆ 4) ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ಮಂಕಾದ ತಂಡ ಕೇವಲ 78 ರನ್ ಪೇರಿಸಿತು. ಮೊದಲ ವಿಕೆಟ್​ಗೆ ಶಿಖರ್ ಧವನ್ (34ರನ್, 23 ಎಸೆತ, 8 ಬೌಂಡರಿ) ಜತೆಗೆ 48 ರನ್ ಜತೆಯಾಟವಾಡಿದ್ದ ರೋಹಿತ್, ಆ ವೇಳೆಗಾಗಲೇ ದೊಡ್ಡ ಇನಿಂಗ್ಸ್ ಆಡುವ ಸೂಚನೆ ನೀಡಿದ್ದರು. ರಬಾಡ ಎಸೆತದಲ್ಲಿ ಧವನ್, ಪೆಹ್ಲುಕ್​ವಾಯೊಗೆ ಕ್ಯಾಚ್ ನೀಡಿ ನಿರ್ಗಮಿಸಿದ ಬಳಿಕ, ರೋಹಿತ್​ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ (36ರನ್, 54 ಎಸೆತ, 2 ಬೌಂಡರಿ) ತಂಡವನ್ನು ಆಧರಿಸಿದರು. 2ನೇ ವಿಕೆಟ್​ಗೆ 105 ರನ್ ಜತೆಯಾಟವಾಡುವ ಮೂಲಕ ಆ?ಕಾ ಬೌಲರ್ ಗಳಿಗೆ ಭೀತಿ ನೀಡಿತ್ತು. ರನ್ ಓಡುವ ವೇಳೆ ಗೊಂದಲಕ್ಕೀಡಾದ ಕೊಹ್ಲಿ ರನೌಟ್ ಆಗಿ ನಿರ್ಗಮಿಸಿದರು. 26ನೇ ಓವರ್ ವೇಳೆಗೆ 150ರ ಗಡಿ ದಾಟಿದ್ದ ತಂಡ ಉತ್ತಮ ಸ್ಥಿತಿಯಲ್ಲಿತ್ತು. ರೋಹಿತ್ ಕೂಡ ಆಫ್ರಿಕಾದ ಎಲ್ಲ ಬೌಲರ್​ಗಳನ್ನು ಬೆಂಡೆತ್ತುವ ಕಾರ್ಯ ಆರಂಭಿಸಿದ್ದರು. ರೋಹಿತ್​ಗೆ ಜತೆಯಾಗಿದ್ದ ಅಜಿಂಕ್ಯ ರಹಾನೆ (8) ಕ್ರೀಸ್​ಗೆ ಹೊಂದಿಕೊಳ್ಳುವ ಯತ್ನದಲ್ಲಿಯೇ ರನೌಟ್ ಆಗಿ ನಿರ್ಗಮಿಸಿದರು. ಎರಡು ರನೌಟ್​ಗಳನ್ನು ಕಂಡ ರೋಹಿತ್ ಆ ಬಳಿಕ ಶ್ರೇಯಸ್ ಅಯ್ಯರ್ (30ರನ್, 37 ಎಸೆತ, 2 ಬೌಂಡರಿ) ಜತೆಗೂಡಿ ಮೊತ್ತವನ್ನು 200ರ ಗಡಿ ದಾಟಿಸಿದರು. 107ನೇ ಎಸೆತದಲ್ಲಿ ರೋಹಿತ್ ತಮ್ಮ ಶತಕ ಪೂರೈಸಿದರು.

ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ರೋಹಿತ್ ಶರ್ಮ

ಆರಂಭಿಕರಾಗಿ ಭಾರತ ತಂಡದ ಪರ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮ, ವೀರೇಂದ್ರ ಸೆಹ್ವಾಗ್​ರ ದಾಖಲೆ ಮುರಿದರು. ಇದು ರೋಹಿತ್ ಆರಂಭಿಕರಾಗಿ ಸಿಡಿಸಿದ 15ನೇ ಶತಕವಾಗಿದ್ದರೆ, ಸೆಹ್ವಾಗ್ 14 ಶತಕ ಬಾರಿಸಿದ್ದರು. ಈ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (45) ಅಗ್ರಸ್ಥಾನದಲ್ಲಿದ್ದರೆ, ಸೌರವ್ ಗಂಗೂಲಿ (19) 2ನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಬಾರಿ ರನೌಟ್ ಆಗುವ ಮೂಲಕ ಬೇರ್ಪಟ್ಟ ಜೋಡಿಯಲ್ಲಿ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಜೋಡಿ ಜಂಟಿ 2ನೇ ಸ್ಥಾನಕ್ಕೇರಿತು. ಸಚಿನ್ ಹಾಗೂ ಗಂಗೂಲಿ ಜೋಡಿ 176 ಇನಿಂಗ್ಸ್​ಗಳಲ್ಲಿ 9 ಬಾರಿ ರನೌಟ್ ಆಗಿದ್ದರೆ, ದ್ರಾವಿಡ್-ಗಂಗೂಲಿ ಜೋಡಿ 87 ಇನಿಂಗ್ಸ್​ಗಳಲ್ಲಿ 7 ಬಾರಿ ರನೌಟ್ ಮೂಲಕ ಬೇರ್ಪಟ್ಟಿತ್ತು.

 

Leave a Reply

Your email address will not be published. Required fields are marked *

Back To Top