Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಕ್ಲೀನ್​ಸ್ವೀಪ್ ಸಾಧಿಸಿದರೆ ಟೀಮ್ ಇಂಡಿಯಾ ನಂ.1

Thursday, 12.07.2018, 3:03 AM       No Comments

ಲಂಡನ್: ಟಿ20 ಸರಣಿ ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಶುಭಾರಂಭ ಮಾಡಿರುವ ಭಾರತ ತಂಡ ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಿದೆ. ಇದರಲ್ಲಿ 3-0 ಕ್ಲೀನ್​ಸ್ವೀಪ್ ಸಾಧಿಸಿದರೆ ಭಾರತಕ್ಕೆ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಮತ್ತೆ ನಂ. 1 ಪಟ್ಟಕ್ಕೇರುವ ಅವಕಾಶವಿದೆ. ಹಾಲಿ ರ್ಯಾಂಕಿಂಗ್​ನಲ್ಲಿ ಇಂಗ್ಲೆಂಡ್ 126 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 122 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕಳೆದ ಏಪ್ರಿಲ್​ವರೆಗೆ ನಂ. 1 ಸ್ಥಾನದಲ್ಲಿದ್ದ ಭಾರತ, ಮೇ ಆರಂಭದಲ್ಲಿ ವಾರ್ಷಿಕ ಪರಿಷ್ಕರಣೆಯ ವೇಳೆ ಆಂಗ್ಲರಿಗೆ ನಂ. 1 ಪಟ್ಟ ಬಿಟ್ಟುಕೊಟ್ಟಿತ್ತು. ಭಾರತ ಕ್ಲೀನ್​ಸ್ವೀಪ್ ಸಾಧಿಸಿದರೆ 3 ಅಂಕ ಕಲೆಹಾಕಲಿದ್ದು, 125 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ಇದೇ ವೇಳೆ ಇಂಗ್ಲೆಂಡ್ 3 ಅಂಕ ನಷ್ಟ ಅನುಭವಿಸಲಿದ್ದು, 123 ಅಂಕದೊಂದಿಗೆ 2ನೇ ಸ್ಥಾನಕ್ಕಿಳಿಯಲಿದೆ. ಸರಣಿಯಲ್ಲಿ 1 ಪಂದ್ಯ ಗೆದ್ದರೂ ಇಂಗ್ಲೆಂಡ್ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಭಾರತ 2-1ರಿಂದ ಸರಣಿ ಗೆದ್ದರೆ 1 ಅಂಕವನ್ನಷ್ಟೇ ಗಳಿಸಲಿದ್ದು, 123 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಉಳಿಯಲಿದೆ. ಭಾರತ 1-2ರಿಂದ ಸರಣಿ ಸೋತರೆ 1 ಅಂಕ ನಷ್ಟ ಅನುಭವಿಸಿ 121 ಅಂಕದೊಂದಿಗೆ 2ನೇ ಸ್ಥಾನದಲ್ಲಿ ಉಳಿಯಲಿದೆ. ಭಾರತ ವೈಟ್​ವಾಷ್ ಎದುರಿಸಿದರೆ 3 ಅಂಕ ನಷ್ಟ ಅನುಭವಿಸಲಿದೆ. ಆದರೆ 119 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಇರಲಿದೆ. ಯಾಕೆಂದರೆ 3ನೇ ಸ್ಥಾನದಲ್ಲಿ ರುವ ದಕ್ಷಿಣ ಆಫ್ರಿಕಾ 113 ಅಂಕದೊಂದಿಗೆ ಭಾರತಕ್ಕಿಂತ ಭಾರಿ ಹಿನ್ನಡೆಯಲ್ಲಿದೆ.

ಇಂಗ್ಲೆಂಡ್ 2-1ರಿಂದ ಸರಣಿ ಗೆದ್ದರೆ 1 ಅಂಕ ಸಂಪಾದಿಸಿ, 127 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಇಂಗ್ಲೆಂಡ್ ಕ್ಲೀನ್​ಸ್ವೀಪ್ ಸಾಧಿಸಿದರೆ 129 ಅಂಕದೊಂದಿಗೆ, 2ನೇ ಸ್ಥಾನಿ ಭಾರತಕ್ಕಿಂತ ಬರೋಬ್ಬರಿ 10 ಅಂಕಗಳ ಮುನ್ನಡೆ ಸಾಧಿಸಲಿದೆ.

Leave a Reply

Your email address will not be published. Required fields are marked *

Back To Top