Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ಮೊದಲ ಏಕದಿನ ಪಂದ್ಯ: ಆಸಿಸ್‌ ವಿರುದ್ಧ 26 ರನ್ ಜಯ ಸಾಧಿಸಿದ ಭಾರತ

Sunday, 17.09.2017, 11:15 PM       No Comments

ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆಸಿಸ್‌ ವಿರುದ್ಧ 26 ರನ್ ಗಳ ಜಯ ಗಳಿಸಿದೆ.

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 282 ರನ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 21 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾಗೆ 26 ರನ್​ಗಳ ಗೆಲುವು ದೊರೆತಿದೆ.

ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 281 ರನ್‌ ಗಳಿಸಿತ್ತು. 282ರ ಗುರಿ ಬೆನ್ನತ್ತಿದ ಆಸಿಸ್‌ಗೆ ಮಳೆ ಅಡ್ಡಿಯಿಂದಾಗಿ ಡಕ್ವರ್ತ್ ಲೂಯಿಸ್‌ ನಿಯಮದ ಅಡಿ 21 ಓವರ್ ಗಳಲ್ಲಿ 164 ರನ್ ಗುರಿಯನ್ನು ನಿಗಧಿಪಡಿಸಲಾಯಿತು.

5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಹಾರ್ದಿಕ್‌ ಪಾಂಡ್ಯ ಮತ್ತು ಮಹೇಂದ್ರ ಸಿಂಗ್‌ ಧೋನಿ ಜತೆಯಾಟ ಭಾರತದ ಗೆಲುವಿಗೆ ಆಸರೆಯಾಯಿತು.

ಆಸ್ಟ್ರೇಲಿಯಾ ಪರ ವಾರ್ನರ್ 25, ಕಾರ್ಟ್​ರೈಟ್​ 1, ಸ್ಟೀವನ್​ ಸ್ಮಿತ್​ 1, ಹೆಡ್​ 5, ಮ್ಯಾಕ್ಸ್​ವೆಲ್​ 39, ವೇಡ್​ 9, ಫೌಲ್ಕ್​ನರ್ 32, ಕಮ್ಮಿನ್ಸ್​ 9, ಕೌಲ್ಟರ್​ ನಿಲ್​ 2 ಮತ್ತು ಅಜೇಯ ಜಂಪಾ 5 ರನ್​ ಗಳಿಸಿದರು.

ಭಾರತದ ಪರ ಚಾಹಲ್​ಗೆ​ 3 ವಿಕೆಟ್, ಹಾರ್ದಿಕ್ ಪಾಂಡ್ಯ, ಕುಲದೀಪ್​ ಯಾದವ್​ಗೆ ತಲಾ 2 ವಿಕೆಟ್ ಮತ್ತು
ಭುವನೇಶ್ವರ್​ ಕುಮಾರ್, ಬುಮ್ರಾಗೆ ತಲಾ 1 ವಿಕೆಟ್​ ಒಪ್ಪಿಸಿದರು. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top