Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಚೈನೀಸ್​ ಏರ್​ಲೈನ್ಸ್​ ಸಿಬ್ಬಂದಿಯಿಂದ ಭಾರತೀಯರಿಗೆ ಅವಮಾನ

Sunday, 13.08.2017, 3:10 PM       No Comments

ಬೀಜಿಂಗ್​: ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ದಿನೇ ದಿನೇ ಹೆಚ್ಚುತ್ತಿದೆ. ಈ ಮಧ್ಯೆ ಅವಕಾಶ ಸಿಕ್ಕಾಗಲೆಲ್ಲಾ ಭಾರತದ ವಿರುದ್ಧ ಚೀನಾ ಕಿಡಿ ಕಾರುತ್ತಲೇ ಇರುತ್ತದೆ. ಈಗ ಹೊಸ ಬೆಳವಣಿಗೆಯಲ್ಲಿ ಚೈನೀಸ್​ ಏರ್​ಲೈನ್ಸ್ ಸಂಸ್ಥೆ ಸಿಬ್ಬಂದಿ ಭಾರತೀಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಉತ್ತರ ಅಮೆರಿಕ ಪಂಜಾಬಿ ಅಸೋಸಿಯೇಷನ್​ನ ನಿರ್ದೇಶಕ ಸತ್ನಾಮ್​ ಸಿಂಗ್​ ಚಾಹಲ್​ ಆಗಸ್ಟ್​ 6 ರಂದು ನವದೆಹಲಿಯಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ಚೈನೀಸ್​ ಈಸ್ಟರ್ಸ್​ ಏರ್​ಲೈನ್ಸ್​ನ ವಿಮಾನದಲ್ಲಿ ಪ್ರಯಾಣಿಸಿದ್ದರು. ಅವರು ವಿಮಾನ ಬದಲಿಸುವ ಸಲುವಾಗಿ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು.

ಈ ಸಂದರ್ಭದಲ್ಲಿ ದಿವ್ಯಾಂಗರು ಇಳಿಯಲೆಂದು ವಿಮಾನದಲ್ಲಿ ಇರುವ ದ್ವಾರದ ಬಳಿ ವಿಮಾನದ ಸಿಬ್ಬಂದಿ ಕೆಲವು ಭಾರತೀಯ ಪ್ರಯಾಣಿಕರಿಗೆ ಅವಮಾನ ಮಾಡಿದ್ದನ್ನು ಗಮನಿಸಿದ್ದರು. ಈ ವಿಷಯವನ್ನು ಏರ್​ಲೈನ್ಸ್​ ಅಧಿಕಾರಿಗಳ ಗಮನಕ್ಕೆ ತಂದಾಗ ಅವರೂ ಸಹ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಚಾಹಲ್​ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್​ ಅವರಿಗೆ ದೂರು ಸಲ್ಲಿಸಿದ್ದರು.

ಈ ಕುರಿತು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಚೀನಾ ವಿದೇಶಾಂಗ ಸಚಿವಾಲಯದ ಮತ್ತು ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಚರ್ಚೆ ನಡೆಸಿದೆ. ಆದರೆ ಚೈನೀಸ್​ ಏರ್​ಲೈನ್ಸ್​ ಸಂಸ್ಥೆ ಆರೋಪವನ್ನು ನಿರಾಕರಿಸಿದ್ದು, ನಾವು ಎಲ್ಲಾ ಪ್ರಯಾಣಿಕರಿಗೂ ಉತ್ತಮ ಸೇವೆ ನೀಡುತ್ತಿದ್ದೇವೆ ಎಂದು ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top