Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಕುಲಭೂಷಣ್​ ಜಾಧವ್​ ಕೇಸ್​: ಐಸಿಜೆಗೆ ಲಿಖಿತ ವಾದ ಸಲ್ಲಿಸಿದ ಭಾರತ

Wednesday, 13.09.2017, 10:03 PM       No Comments

ಹೇಗ್​: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ನೌಕಾದಳದ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ಬುಧವಾರದಿಂದ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಪುನಾರಂಭವಾಗಿದೆ. ಭಾರತ ತನ್ನ ವಾದವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ.

ಈ ಪ್ರಕರಣ ಸಂಬಂಧ ಲಿಖಿತ ವಾದವನ್ನು ಭಾರತ ಸರ್ಕಾರ ಹೇಗ್​ನಲ್ಲಿನ ಅಂತಾರಾಷ್ಟ್ರೀಯ ಕೋರ್ಟ್​ಗೆ ಇಂದು ಸಲ್ಲಿಸಿದೆ. ಇದರನ್ವಯ ಮತ್ತೆ ವಿಚಾರಣೆ ನಡೆಯಲಿದೆ. ಅಲ್ಲದೆ, ಡಿಸೆಂಬರ್​ 13ರೊಳಗೆ ಪಾಕಿಸ್ತಾನ ಭಾರತ ಸಲ್ಲಿಸಿರುವ ಲಿಖಿತ ದಾಖಲೆಗಳಿಗೆ ಪ್ರತಿಕ್ರಿಯೆ ನೀಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕುಲಭೂಷಣ್ ಜಾಧವ್​ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ಐಸಿಜೆ ಮೇ ತಿಂಗಳಲ್ಲಿ ತಡೆಯಾಜ್ಞೆ ನೀಡಿತ್ತು. ಡಿಸೆಂಬರ್ ವೇಳೆಗೆ ಕುಲಭೂಷಣ್​ ಪ್ರಕರಣದಲ್ಲಿ ಅಂತಿಮ ತೀರ್ಪು ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನೊಂದೆಡೆ ಚೀನಾ-ಪಾಕಿಸ್ತಾನದ ಆರ್ಥಿಕ ಕಾರಿಡಾರ್​ನ ದಿಕ್ಕುತಪ್ಪಿಸಲು ಭಾರತ ಕುಲಭೂಷಣ್ ಜಾಧವ್ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆಂತರಿಕ ಸಚಿವ ಅಹ್ಸಾನ್ ಇಕ್ಬಾಲ್ ಆರೋಪಿಸಿದ್ದಾರೆ. ಹೀಗಾಗಿಯೇ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್​ ಕೇಸನ್ನ ಪರಿಣಾಮಕಾರಿಯಾಗಿ ನಡೆಸುತ್ತಿದೆ. ಅಲ್ಲದೆ, ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಅಭೂತಪೂರ್ವ ಸ್ನೇಹದ ಫಲವಾಗಿ ಸಿಪಿಇಸಿ ರೂಪುಗೊಂಡಿದೆ ಅಂತ ಸಚಿವ ಅಹ್ಸಾನ್ ಇಕ್ಬಾಲ್ ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top