Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

‘ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ಎಂದ ಟ್ರಂಪ್​

Wednesday, 12.09.2018, 8:50 AM       No Comments

ವಾಷಿಂಗ್ಟನ್​: ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರೀತಿಯ ಸ್ನೇಹಿತ. ನಾನು ಅವರನ್ನು ತುಂಬ ಇಷ್ಟಪಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾಗಿ ಪತ್ರಕರ್ತ ಬಾಬ್​ವುಡ್​ವಾರ್ಡ್​ ಎಂಬುವರು ತಮ್ಮ ಇತ್ತೀಚಿಗಿನ ಪುಸ್ತಕ ‘ಫಿಯರ್​: ಟ್ರಂಪ್​ ಇನ್​ ದಿ ವೈಟ್​ ಹೌಸ್​’ನಲ್ಲಿ ಉಲ್ಲೇಖಿಸಿದ್ದಾರೆ.

ಟ್ರಂಪ್​ ಅವರು ಕಳೆದ ವರ್ಷದ ಜುಲೈ 19ರಂದು ನಡೆದ ಸಭೆಯಲ್ಲಿ ಮೋದಿಯರವನ್ನು ಹೊಗಳಿದ್ದಾರೆ. ಅದಕ್ಕೂ ಮೊದಲು ಜೂ.26ರಂದು ವೈಟ್​ಹೌಸ್​ನಲ್ಲಿ ಭಾರತದ ಪ್ರಧಾನಿ ಜತೆ ದೀರ್ಘ ಚರ್ಚೆ ನಡೆಸಿದ್ದರು. ” ಅಮೆರಿಕಕ್ಕೆ ಅಫ್ಘಾನಿಸ್ತಾನದಿಂದ ಏನೂ ಸಹಾಯವಾಗುತ್ತಿಲ್ಲ. ಆದರೂ ಅಲ್ಲಿನ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಅಪಾರ ಖನಿಜ ಸಂಪತ್ತು ಇದೆ. ಆದರೆ ಅದರಿಂದ ಯುಎಸ್​ಗೆ ಉಪಯೋಗವಾಗುತ್ತಿಲ್ಲ. ಅದನ್ನು ಬಳಸಿಕೊಳ್ಳಬೇಕು ಎಂದು ಮೋದಿ ನನಗೆ ಹೇಳಿದ್ದರು. ಅವರ ಈ ಮಾತು ನನಗೆ ಇಷ್ಟವಾಗಿದೆ” ಎಂದು ಟ್ರಂಪ್​ ಹೇಳಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಅಫ್ಘಾನಿಸ್ತಾನದಿಂದ ಯುಎಸ್​ಗೆ ನಷ್ಟವೇ ಆಗುತ್ತಿದೆ. ಇದೊಂದು ದುರಂತ. ಈ ವಿಚಾರದಲ್ಲಿ ನಮ್ಮ ಮಿತ್ರರೂ ಸಹಾಯ ಮಾಡುತ್ತಿಲ್ಲ. ಪಾಕಿಸ್ತಾನವೂ ನಮ್ಮ ಹಿತೈಷಿಗಳಲ್ಲ ಎಂದು ಟ್ರಂಪ್​ ಹೇಳಿದ್ದಾಗಿ ಪತ್ರಕರ್ತ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಮಂಗಳವಾರ ಬಿಡುಗಡೆಯಾದ ಪುಸ್ತಕದಲ್ಲಿ ವೈಟ್​ ಹೌಸ್​ನಲ್ಲಿ ಟ್ರಂಪ್​ ನಿಷ್ಕ್ರಿಯ ಆಡಳಿತದ ಚಿತ್ರಣ ಕಟ್ಟಿಕೊಡಲಾಗಿದ್ದು ಟ್ರಂಪ್ ಅಸ್ತವ್ಯಸ್ತವಾಗಿ ಅಧಿಕಾರ ಚಲಾಯಿಸುತ್ತಿದ್ದಾರೆಂದು ಹೇಳಲಾಗಿದೆ. ಇದೀಗ ವಿವಾದಕ್ಕೂ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

Back To Top