More

    ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; 2023ರ ಜಾಗತಿಕ ವರದಿ ಪ್ರಕಟ

    ನವದೆಹಲಿ: ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ ಎಂದು ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ವರದಿಯಲ್ಲಿ ತಿಳಿಸಿದೆ.

    ಭಾರತದ ಜನಸಂಖ್ಯೆ 142.86 ಕೋಟಿ ಇದ್ದರೆ, ಚೀನಾ ಜನಸಂಖ್ಯೆಯೂ 142.57 ಕೋಟಿಯಷ್ಟಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

    ಚೀನಾಗಿಂತ ಹೆಚ್ಚು

    ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತವು ಚೀನಾಗಿಂತ 2.9 ಮಿಲಿಯನ್ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ ಮಾರ್ಪಟ್ಟಿದೆ.

    ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ; ಸಂಸದ ಕಾರ್ತಿ ಚಿದಂಬರಂಗೆ ಸೇರಿದ ಆಸ್ತಿ ಮುಟ್ಟುಗೋಲು

    340 ಮಿಲಿಯನ್​ ಜನಸಂಖ್ಯೆಯನ್ನು ಹೊಂದುವ ಮೂಲಕ ಯುನೈಟೆಡ್​ ಸ್ಟೇಟ್ಸ್​ ಮೂರನೇ ಸ್ಥಾನ ಪಡೆದಿದೆ. ಸದ್ಯ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

    ಜನಸಂಖ್ಯೆ ಕುಸಿತಕ್ಕೆ ಕಾರಣ ಇದೇನಾ?

    ಚೀನಾದ ಜನಸಂಖ್ಯೆಯಲ್ಲಿ ಕುಸಿತ ಕಾಣುವುದಕ್ಕೆ ಮುಖ್ಯ ಕಾರಣ ಎಂದರೆ ವೃದ್ದರು ಹಾಗೂ ಜನನ ಪ್ರಮಾಣದಲ್ಲಿ ಇಳಿಕೆ ಕಂಡರೆ ಹಿಗಾಗುತ್ತದೆ ಎಂದು ತಜ್ಱರು ಅಭಿಪ್ರಾಯಪಟ್ಟಿದ್ದಾರೆ.

    ಭಾರತ ಹಾಗೂ ಚೀನಾ ಜನಸಂಖ್ಯೆಯ ದತ್ತಾಂಶವನ್ನು ತಿಳಿಸಲು ನಿರ್ದಿಷ್ಟವಾದ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಕೊನೆಯದಾಗಿ ಭಾರತದಲ್ಲಿ 2011ರಲ್ಲಿ ಜನಗಣತಿಯನ್ನು ನಡೆಸಲಾಗಿತ್ತು. 2021ರಲ್ಲಿ ಕೋವಿಡ್​ ಕಾರಣದಿಂದಾಗಿ ಭಾರತದಲ್ಲಿ ಜನಗಣತಿಯನ್ನು ಮಾಡಿರಲಿಲ್ಲ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts