Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಓಮಾನ್ ಜತೆ 8 ಒಪ್ಪಂದ

Tuesday, 13.02.2018, 3:03 AM       No Comments

ಮಸ್ಕತ್: ಭದ್ರತೆ, ಆರೋಗ್ಯ ಹಾಗೂ ಪ್ರವಾಸೋದ್ಯಮ ಸೇರಿ ಭಾರತ ಹಾಗೂ ಓಮಾನ್ ನಡುವೆ 8 ಒಪ್ಪಂದಗಳಿಗೆ ಉಭಯ ದೇಶದ ನಾಯಕರು ಸಹಿ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಓಮಾನ್ ಸುಲ್ತಾನ್ ಖಾಬೂಸ್ ಬಿನ್ ಸೈಯ್ಯದ್ ಸೋಮವಾರ ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ ಹೂಡಿಕೆ ಹಾಗೂ ವ್ಯಾಪಾರದಲ್ಲಿನ ಸಹಕಾರ, ಇಂಧನ, ಭದ್ರತೆ-ರಕ್ಷಣಾ ಕ್ಷೇತ್ರ, ಆಹಾರ ಭದ್ರತೆ ಹಾಗೂ ಪ್ರಾದೇಶಿಕ ವಿಚಾರಗಳ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಪ್ಯಾಲೆಸೆôನ್, ದುಬೈ ಹಾಗೂ ಓಮಾನ್ ಪ್ರವಾಸದ ಬಳಿಕ ಸೋಮವಾರ ಸಂಜೆ ಭಾರತಕ್ಕೆ ಮೋದಿ ಹಿಂತಿರುಗಿದ್ದಾರೆ.

ಪ್ರಮುಖ ಒಪ್ಪಂದ

# ನಾಗರಿಕ ಹಾಗೂ ವಾಣಿಜ್ಯ ವ್ಯವಹಾರಗಳಲ್ಲಿ ಕಾನೂನು, ನ್ಯಾಯಾಂಗ ಸಹಕಾರ

# ಉಭಯ ದೇಶಗಳ ಅಧಿಕಾರಿಗಳ ವಲಯದಲ್ಲಿನ ಪಾಸ್​ಪೋರ್ಟ್​ದಾರರಿಗೆ ವೀಸಾದಿಂದ ವಿನಾಯಿತಿ

# ಭಾಹ್ಯಾಕಾಶ ತಂತ್ರಜ್ಞಾನ ಹಾಗೂ ಇತರ ಉದ್ದೇಶಗಳಿಗೆ ಓಮಾನ್​ನ ಬಾಹ್ಯಾಕಾಶ

ಪರಿಧಿ ಬಳಕೆ

ದೇಗುಲ, ಮಸೀದಿಗೆ ಭೇಟಿ

ಓಮಾನ್​ನಲ್ಲಿ 125 ವರ್ಷಗಳ ಹಿಂದೆ ನಿರ್ವಿುಸಿದ ಶಿವನ ದೇವಾಲಯಕ್ಕೆ ಮತ್ತು ಅತಿ ದೊಡ್ಡ ಮಸೀದಿಗೂ ಸ್ಥಳೀಯ ದೊರೆಯ ಜತೆ ಭೇಟಿ ನೀಡಿದ್ದರು.

ಮಿನಿ ಭಾರತ ದರ್ಶನ

ಓಮಾನ್​ನಲ್ಲಿ ‘ಮಿನಿ ಇಂಡಿಯಾ’ ಕಾಣಿಸುತ್ತಿದ್ದು, ಸರ್ಕಾರದ ‘ನ್ಯೂ ಇಂಡಿಯಾ’ ಪರಿಕಲ್ಪನೆಯಲ್ಲಿ ನೀವು ಭಾಗಿಯಾಗಿ ಎಂದು ಅನಿವಾಸಿ ಭಾರತೀಯರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಭಾರತದಲ್ಲಿ ಮೊದಲು ಭ್ರಷ್ಟಾಚಾರಗಳ ಮಾತು ಕೇಳಿಬರುತ್ತಿತ್ತು. ಆದರೆ, ಈಗ ನಮ್ಮ ಹಣವನ್ನು ಮೋದಿ ತೆಗೆದುಕೊಂಡ ಎಂದು ಯಾರೂ ಹೇಳುವುದಿಲ್ಲ. ಬದಲಾಗಿ ಎಷ್ಟು ಹಣ ಹಿಂತಿರುಗಿಸಿದ್ದಾರೆ ಎಂದು ಕೇಳುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top