Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ದೊಡ್ಡ ಆರ್ಥಿಕ ದೇಶಗಳ ಪಟ್ಟಿ ಆರನೇ ಸ್ಥಾನಕ್ಕೆ ಜಿಗಿದ ಭಾರತ

Thursday, 12.07.2018, 3:03 AM       No Comments

ನವದೆಹಲಿ: ವಿಶ್ವದ ಸಶಕ್ತ ಆರ್ಥಿಕ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನಕ್ಕೆ ಜಿಗಿದಿದೆ. 2017ನೇ ಸಾಲಿನಲ್ಲಿ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದೆ. ಇದರಲ್ಲಿ ಫ್ರಾನ್ಸ್ ಹಿಂದಿಕ್ಕಿ ಆರನೇ ಸ್ಥಾನ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಮೊದಲ ಐದು ಸ್ಥಾನಗಳಲ್ಲಿ ಅಮೆರಿಕ, ಚೀನಾ, ಜಪಾನ್, ಜರ್ಮನಿ ಮತ್ತು ಬ್ರಿಟನ್​ಗಳಿವೆ. 2017ರ ಸಾಲಿನಲ್ಲಿ ಭಾರತದ ಒಟ್ಟಾರೆ ದೇಶಿಯ ಉತ್ಪನ್ನ (ಜಿಡಿಪಿ) ಅಂದಾಜು -ಠಿ; 178.66 ಲಕ್ಷ ಕೋಟಿ ರೂ.(2.597 ಟ್ರಿಲಿಯನ್ ಡಾಲರ್) ಇದ್ದರೆ, ಫ್ರಾನ್ಸ್​ನ ಜಿಡಿಪಿ -ಠಿ; 177.62 ಲಕ್ಷ ಕೋಟಿ (2.582 ಟ್ರಿಲಿಯನ್ ಡಾಲರ್) ಇದೆ ಎಂದು ವಿಶ್ವಬ್ಯಾಂಕ್ ಅಂಕಿಅಂಶ ತಿಳಿಸಿದೆ. 2017ರಲ್ಲಿ ಭಾರತದ ಜಿಡಿಪಿ ಶೇ. 6.7 ಇದ್ದರೆ, ಚೀನಾದ್ದು ಶೇ. 6.8 ಇತ್ತು. ಆದರೆ, 2018ರ ಅಂತ್ಯಕ್ಕೆ ಭಾರತದ ಜಿಡಿಪಿ ಶೇ. 7.4 ಮತ್ತು 2019ಕ್ಕೆ ಶೇ. 7.9ಕ್ಕೆ ಏರಲಿದೆ. ಇದೇ ವೇಳೆಗೆ ಚೀನಾದ ಜಿಡಿಪಿ ಶೇ. 6.6 ಮತ್ತು 6.4ಕ್ಕೆ ಇಳಿದು ಭಾರತಕ್ಕಿಂತ ಹಿಂದೆ ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಳೆದ ಏಪ್ರಿಲ್​ನಲ್ಲಿ ಅಂದಾಜು ಮಾಡಿತ್ತು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top