Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಪಾಕ್​ಗೆ ಮುಖಭಂಗ: ಚಾಬಹಾರ್​ ಮೂಲಕ ಅಫ್ಘಾನಿಸ್ತಾನ ತಲುಪಿದ ಗೋಧಿ

Sunday, 12.11.2017, 8:14 AM       No Comments

>> ಭಾರತ, ಇರಾನ್ ಮತ್ತು ಅಫ್ಘಾನಿಸ್ತಾನ ದೇಶಗಳ ಆರ್ಥಿಕತೆಯ ಅಭಿವೃದ್ಧಿಗೆ ಸಹಕಾರಿ

ನವದೆಹಲಿ: ಭಾರತಕ್ಕೆ ಮಗ್ಗಲು ಮುಳ್ಳಾಗಿ ಕಾಡುತ್ತಿರುವ ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನೆಡೆಯುಂಟಾಗಿದೆ. ಇರಾನ್‌ನ ಚಾಬಹಾರ್‌ ಬಂದರು ಮುಖೇನ ಭಾರತ ರಫ್ತು ಮಾಡಿದ್ದ ಗೋಧಿ ಅಫ್ಘಾನಿಸ್ತಾನ ತಲುಪಿದ್ದು, ಪಾಕಿಸ್ತಾನಕ್ಕೆ ಪಾಠ ಕಲಿಸುವ ಭಾರತದ ಮೊದಲ ಪ್ಲಾನ್‌ ವರ್ಕೌಟ್‌ ಆಗಿದೆ.

ಇದರಿಂದ ಭವಿಷ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ದೇಶಗಳ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲಿದ್ದು, ಪಾಕಿಸ್ತಾನದ ಆರ್ಥಿಕ ಸಂಪನ್ಮಲಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಕಳೆದ ಅಕ್ಟೋಬರ್‌ 29ರಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಸಲಾಹುದ್ದೀನ್‌ ರಬ್ಬಾನಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹೊಸ ಮಾರ್ಗದ ಮೂಲಕ ರಫ್ತು ಮಾಡುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು.

ಚಾಲನೆ ನೀಡಿದ ನಂತರ ಭಾರತ ಮೊದಲ ಬಾರಿಗೆ ಗೋಧಿಯನ್ನ ಕರಾಚಿ ಮಾರ್ಗದ ಬದಲಾಗಿ ಇರಾನ್​ನ ಚಾಬಹಾರ್ ಬಂದರು ಮೂಲಕ ರಫ್ತು ಮಾಡಿತ್ತು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top