Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :

3ನೇ ಟೆಸ್ಟ್​​: ಲಂಕಾಗೆ ಫಾಲೋಆನ್​ ಗುರಿ ನೀಡಿದ ಭಾರತ

Sunday, 13.08.2017, 7:00 PM       No Comments

ಪಲ್ಲೆಕೆಲೆ(ಶ್ರೀಲಂಕಾ): ಭಾರತ-ಶ್ರೀಲಂಕಾ ನಡುವಿನ 3ನೇ ಹಾಗೂ ಕೊನೆಯ ಟೆಸ್ಟ್​ ಪಂದ್ಯದಲ್ಲಿ ತನ್ನೆಲ್ಲಾ ವಿಕೆಟ್​​ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿದಿರುವ ಲಂಕಾ ಪಡೆಗೆ ಭಾರತ ಫಾಲೋಆನ್​ ಗುರಿ ನೀಡಿದೆ.

 

ಪಲ್ಲಿಕಿಲೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯಕ್ಕೆ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ 19/1 ರನ್​ ದಾಖಲಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 135ಕ್ಕೆ ಆಲೌಟ್ ಆಯಿತು.

 

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 487 ರನ್​ಗಳ ಬೃಹತ್​ ಮೊತ್ತದ ಗುರಿ ನೀಡಿತ್ತು. ಅಲ್ಪ ಮೊತ್ತಕ್ಕೆ ಕುಸಿದಿರುವ ಶ್ರೀಲಂಕಾಗೆ ಭಾರತ ಫಾಲೋಆನ್ ಗುರಿ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಶಿಖರ್ ಧವನ್ 119, ರಾಹುಲ್ 85, ಅಜಿಂಕ್ಯಾ ರಹಾನೆ 16, ಚೇತೇಶ್ವರ ಪೂಜಾರ 8, ವಿರಾಟ್‌ ಕೊಹ್ಲಿ 42, ಹಾರ್ದಿಕ್ ಪಾಂಡ್ಯಾ 108, ಆರ್.ಅಶ್ವಿನ್ 31, ಕುಲದೀಪ್ ಯಾದವ್ 26, ವೃದ್ಧಿಮಾನ್ ಸಾಹ 16, ಮೊಹಮ್ಮದ್ ಶಮಿ 8, ಉಮೇಶ್ ಯಾದವ್ ಔಟಾಗದೆ 3 ರನ್ ದಾಖಲಿಸಿದರು.

 

ಶ್ರೀಲಂಕಾ ಪರ ವಿಶ್ವ ಫರ್ನಾಂಡೋ 2, ಸಂದಾಕನ್ 5, ಪುಷ್ಪಕುಮಾರ್‌ಗೆ 3 ವಿಕೆಟ್; ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ ಕರುಣರತ್ನೆ 4, ತರಂಗಾ 5, ಮೆಂಡಿಸ್ 18, ಚಂಡಿಮಾಲ್​ 48, ಮ್ಯಾಥ್ಯೂಸ್​ 0, ಡಿಕ್ವೆಲ್ಲಾ 29, ಪೆರೆರಾ 0, ಪುಷ್ಪಕುಮಾರ 10, ಫೆರ್ನಾಂಡೊ 0, ಲಹಿರೊ ಕುಮಾರ ಅಜೇಯ 0, ಸಂದಕಾನ್​ 10 ರನ್ ಕಲೆ ಹಾಕಿದರು.

 

ಇನ್ನು ಭಾರತದ ಪರ ಕುಲದೀಪ್ ಯಾದವ್‌ಗೆ 4 ವಿಕೆಟ್, ಆರ್.ಅಶ್ವಿನಿ, ಶಮಿಗೆ ತಲಾ 2 ವಿಕೆಟ್, ಹಾರ್ದಿಕ್ ಪಾಂಡ್ಯಾಗೆ 1 ವಿಕೆಟ್; ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ ತರಂಗಾ 7, ಪುಷ್ಪಕುಮಾರ ಅಜೇಯ 0, ಕರುಣರತ್ನೆ ಅಜೇಯ 12 ರನ್ ,ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಉಮೇಶ್ ಯಾದವ್‌ಗೆ 1 ವಿಕೆಟ್ ಲಭಿಸಿತು.(ಏಜೆನ್ಸೀಸ್​)

 

Leave a Reply

Your email address will not be published. Required fields are marked *

Back To Top