Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಹಾಲುಗಲ್ಲದ ಮಗು ನಡುರಾತ್ರಿ ಹಾಲು ಕುಡೀಲಿಲ್ಲ ಅಂತ ಹೊರಗಟ್ಟಿದ ಅಪ್ಪ… ಮುಂದೇನಾಯ್ತು?

Tuesday, 10.10.2017, 11:52 AM       No Comments

ಆಸ್ಟಿನ್: ಮಕ್ಕಳು ಆರೋಗ್ಯದಿಂದ ಇರಲಿ ಎಂದು ಪಾಲಕರು ಬೆದರಿಸಿ ಊಟ ಮಾಡಿಸುವುದು ಸಾಮಾನ್ಯ. ಆದರೆ ಹಾಗೆ ಬೆದರಿಸುವುದು, ಸಣ್ಣ ಪುಟ್ಟ ಶಿಕ್ಷೆ ನೀಡುವುದೇ ಮುಳುವಾದರೇ? ಹೌದು ಹಾಗಾಗಿದೆ. ಇಲ್ಲಿನ ಡಲ್ಲಾಸ್ ಪ್ರದೇಶದಲ್ಲಿ ಹಾಲು ಕುಡಿದಿಲ್ಲ ಎಂದು ಮೂರು ವರ್ಷದ ಪುಟ್ಟ ಹುಡುಗಿಯನ್ನ ಮನೆಯ ಹೊರಗಡೆ ನಿಲ್ಲಿಸಿದಾಗ, ಆ ಮಗು ಕಾಣೆಯಾಗಿದೆ.

ಅವಳು ದತ್ತುಪುತ್ರಿ ಮತ್ತು ಕುಪೋಷಣೆಯಿಂದ ಬಳಲುತ್ತಿದ್ದಳು:
ಹಾಲು ಕುಡಿದಿಲ್ಲ ಎಂಬ ಕಾರಣಕ್ಕೆ ಶನಿವಾರ ಮುಂಜಾವು 3 ಗಂಟೆ ಸುಮಾರಿಗೆ ಮಗುವನ್ನು ಮನೆ ಬಳಿಯಿರುವ ದೊಡ್ಡ ಮರದ ಬಳಿ ನಿಲ್ಲುವಂತೆ ಮ್ಯಾಥ್ಯೂಸ್​ ಹೇಳಿದ್ದಾನೆ. 15 ನಿಮಿಷದ ನಂತರ ಅಲ್ಲಿ ನೋಡಿದಾಗ ಮಗು ಕಂಡಿಲ್ಲ. ಘಟನೆ ನಡೆದು 5 ಗಂಟೆ ನಂತರ ಪೊಲೀಸರಿಗೆ ಕರೆ ಮಾಡಿದ ಮ್ಯಾಥ್ಯೂಸ್ ಪ್ರಕರಣ ದಾಖಲಿಸಿದ್ದಾನೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಭಾರತದಲ್ಲಿ ಜನಿಸಿರುವ ಮಗು ಶೆರಿನ್​ನನ್ನು ವೆಸ್ಲೆ ಮ್ಯಾಥ್ಯೂಸ್ ಕುಟುಂಬದವರು ದತ್ತು ಪಡೆದಿದ್ದರು. ಅಮೇರಿಕ​ಕ್ಕೆ ತೆರಳುವ ಮೊದಲು ಕುಪೋಷಣೆಯಿಂದ ಬಳಲುತ್ತಿತ್ತೆಂದು ವಿಶೇಷ ಡಯಟ್​ ಪಾಲಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮಗು ಶೆರಿನ್​ನನ್ನು ಅಪಾಯಕ್ಕೆ ತಳ್ಳಿದ ಆರೋಪದ ಮೇಲೆ ಮಗುವಿನ ತಂದೆ ವೆಸ್ಲೆ ಮ್ಯಾಥ್ಯೂಸ್ (37)ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕಸ್ಟಡಿಯಲ್ಲಿದ್ದ ವೆಸ್ಲೆ ಅಧಿಕಾರಿಗಳ ಬಳಿ ಪ್ರಕರಣವನ್ನು ದಾಖಲಿಸಿದ ನಂತರ ಬಾಂಡ್​ ಮೇಲೆ ಬಿಡುಗಡೆಗೊಂಡಿದ್ದಾನೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top