Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಭಾರತದ ಬೌಲಿಂಗ್​ ದಾಳಿಗೆ ಅಲ್ಪ ಮೊತ್ತಕ್ಕೆ ಶ್ರೀಲಂಕಾ ಆಲೌಟ್

Sunday, 13.08.2017, 1:56 PM       No Comments

ಪಲ್ಲೆಕಿಲೆ: ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ (108) ಗಳಿಸಿದ ಚೊಚ್ಚಲ ಟೆಸ್ಟ್​ ಶತಕದ ನೆರವಿನಿಂದ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್​ನಲ್ಲಿ 487 ರನ್​ ಗಳಿಸಿ ಆಲೌಟ್​ ಆಗಿದೆ.

ಮೊದಲ ದಿನದಂತ್ಯಕ್ಕೆ 90 ಓವರ್​ಗಳಲ್ಲಿ 6 ವಿಕೆಟ್​ಗೆ 329 ರನ್ ಪೇರಿಸಿದ್ದ ಭಾರತ ತಂಡ 2ನೇ ದಿನದಾಟದಲ್ಲಿ 122.3 ಓವರ್​ಗಳಲ್ಲಿ 487 ರನ್​ ಗಳಿಸಿ ಆಲೌಟಾಯಿತು. ಮೊದಲ ದಿನದಾಟದಂತ್ಯಕ್ಕೆ 1 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದಿರಿಸಿದ್ದ ಹಾರ್ದಿಕ್​ ಪಾಂಡ್ಯ ಎರಡನೇ ದಿನ ಬಿರುಸಿನ ಆಟವಾಡಿ ಟೆಸ್ಟ್​ನಲ್ಲಿ ಚೊಚ್ಚಲ ಶತಕ ಗಳಿಸಿದರು. ಪಾಂಡ್ಯ ಕೇವಲ 96 ಬಾಲ್​ಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್​ ನೆರವಿನಿಂದ 108 ರನ್​ ಗಳಿಸಿದರು.

ಉಳಿದಂತೆ ಪಾಂಡ್ಯ ಜತೆ 2ನೇ ದಿನದಾಟ ಆರಂಭಿಸಿದ ವೃದ್ಧಿಮಾನ್​ ಸಾಹಾ ಕೇವಲ 16 ರನ್​ ಗಳಿಸಿ ನಿರ್ಗಮಿಸಿದರು. ಆ ನಂತರ ಕ್ರಿಸ್​ಗಿಳಿದ ಕುಲದೀಪ್​ ಯಾದವ್ 26 ರನ್​ ಗಳಿಸಿ ಪಾಂಡ್ಯಗೆ ಸಾಥ್​ ನೀಡಿದರು.

ಶ್ರೀಲಂಕಾ ಪರ ಲಕ್ಷ್ಮಣ್​ ಸಂಡಕನ್ 132 ರನ್​ ನೀಡಿ 5 ವಿಕೆಟ್​ ಪಡೆದರೆ, ಪುಷ್ಪಕುಮಾರ 82 ರನ್​ ನೀಡಿ 3 ವಿಕೆಟ್​ ಪಡೆದರು.

ಮೊದಲ ಇನಿಂಗ್ಸ್​ ಆರಂಭಿಸಿರುವ ಶ್ರೀಲಂಕಾ ತಂಡ ಆರಂಭಿಕ ಆಘಾತ ಎದುರಿಸಿದ್ದು, ಉಪುಲ್​ ತರಂಗಾ ಮತ್ತು ಕರುಣರತ್ನೆ ವಿಕೆಟ್​ ಕಳೆದುಕೊಂಡಿದೆ. ವರದಿ ಬರೆಯುವ ವೇಳೆಗೆ ಶ್ರೀಲಂಕಾ ತಂಡ 37.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 135 ರನ್​ ಗಳಿಸಿದೆ. ಮೊಹಮ್ಮದ್​ ಶಮಿ 2 ವಿಕೆಟ್​ ಪಡೆದಿದ್ದಾರೆ.  ಈ ನಂತರ ಎರಡನೇ ಇನ್ನಿಂಗ್ಸ್​​ ಆರಂಭಿಸಿದ ಲಂಕಾ ಪಡೆ  1 ವಿಕೆಟ್​ ನಷ್ಟಕ್ಕೆ 19 ರನ್​ ದಾಖಲಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top