More

    2015ರ ವಿಶ್ವಕಪ್ ಸೆಮಿಫೈನಲ್ ಸೋಲಿನಿಂದ ಇನ್ನೂ ಹೊರಬಾರದ ಎಬಿ ಡಿವಿಲಿಯರ್ಸ್‌

    ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್‌ ಎನ್ನುವ ಅಡ್ಡ ಹೆಸರು ಇದೆ. ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಉತ್ತಮ ನಿರ್ವಹಣೆ ನಡುವೆಯೂ ಕನಿಷ್ಠ ಫೈನಲ್ ಪ್ರವೇಶಿಸಲು ವಿಲವಾಗುತ್ತಿದೆ ಈ ತಂಡ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಏಕದಿನ ವಿಶ್ವಕಪ್ ಟೂರ್ನಿ ದಕ್ಷಿಣ ಆಫ್ರಿಕಾ ಪಾಲಿಗೆ ಕಹಿ ನೆನಪುಗಳ ಅಧಿಕ. ಪ್ರತಿ ವಿಶ್ವಕಪ್ ಬಳಿಕವೂ ಸ್ಟಾರ್ ಆಟಗಾರರು ನಿವೃತ್ತಿ ಘೋಷಿಸುವುದು ಗ್ಯಾರಂಟಿ. ಅದೇ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಕಾರಣ ಎಂದು ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: 3ಟಿ ಕ್ರಿಕೆಟ್​ಗೆ ಮುಹೂರ್ತ ಫಿಕ್ಸ್​, 3 ತಂಡಗಳು ಆಡುವ ಪಂದ್ಯದ ನಿಯಮಗಳೇನು ಗೊತ್ತೇ?

    ಅಂದಿನ ಸೆಮಿಫೈನಲ್ ಸೋಲು ನನಗೆ ಇಂದು ಕಾಡುತ್ತಿದೆ. ಉತ್ತಮ ಬ್ಯಾಟಿಂಗ್ ಕೂಡ ಮಾಡಿದ್ದೆ, ಆದರೆ, ಉತ್ತಮ ಸ್ನೇಹ ಹಾಗೂ ನೆನಪುಗಳನ್ನು ನೀಡಿದೆ ಎಂದು 36 ವರ್ಷದ ವಿಲಿಯರ್ಸ್‌ ಹೇಳಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ ವಿಲಿಯರ್ಸ್‌ 14 ವರ್ಷಗಳ ಸುದೀರ್ಘವಾಗಿ ತಂಡದ ಭಾಗವಾಗಿದ್ದರು. ಉತ್ತಮ ಫಾರ್ಮ್ ನಡುವೆಯೂ 2018ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು. ವೈಯಕ್ತಿಕವಾಗಿ ಟೂರ್ನಿ ಉತ್ತಮ ಅನುಭವ ನೀಡಿತು ಎಂದು ಮೆಲುಕು ಹಾಕಿದ್ದಾರೆ. ನ್ಯೂಜಿಲೆಂಡ್ ತಂಡ 6 ವಿಕೆಟ್‌ಗಳಿಂದ ಎಬಿ ಡಿವಿಲಿಯರ್ಸ್‌ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ಗೇರಿತ್ತು. ಕೂದಲೆಳೆ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿದ್ದ ದ.ಆಫ್ರಿಕಾ ಆಟಗಾರರು ಮೈದಾನದಲ್ಲಿ ಕಣ್ಣಿರಾಕಿದ್ದರು. ಆ ಪಂದ್ಯದಲ್ಲಿ ವಿಲಿಯರ್ಸ್‌ 45 ಎಸೆತಗಳಲ್ಲಿ 65 ರನ್ ಸಿಡಿಸಿದ್ದರು.2015ರ ವಿಶ್ವಕಪ್ ಸೆಮಿಫೈನಲ್ ಸೋಲಿನಿಂದ ಇನ್ನೂ ಹೊರಬಾರದ ಎಬಿ ಡಿವಿಲಿಯರ್ಸ್‌

    ಇದನ್ನೂ ಓದಿ: VIDEO| ಬರ್ತ್​ಡೇ ಪಾರ್ಟಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡ ವಿಂಡೀಸ್​ ಕ್ರಿಕೆಟಿಗರು

    ದಕ್ಷಿಣ ಆಫ್ರಿಕಾ ತಂಡ ಪರ ಎಬಿ ಡಿವಿಲಿಯರ್ಸ್‌ 114 ಟೆಸ್ಟ್ ಪಂದ್ಯಗಳಿಂದ 22 ಶತಕ ಒಳಗೊಂಡಂತೆ 8765 ರನ್‌ಗಳಿಸಿದ್ದರೆ, 228 ಏಕದಿನ ಪಂದ್ಯಗಳಿಂದ 25 ಶತಕ ಸೇರಿದಂತೆ 9577 ರನ್ ಸೇರಿ ಬಾರಿಸಿದ್ದಾರೆ. 78 ಟಿ20 ಪಂದ್ಯಗಳಿಂದ 1237 ರನ್ ಗಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೆಲ ವರ್ಷಗಳಿಂದ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ.

    ಪತ್ನಿಯನ್ನು ಕಬೋರ್ಡ್​ನಲ್ಲಿ ಅಡಗಿಸಿಟ್ಟಿದ್ದ ಪಾಕ್​ ಸ್ಪಿನ್​ ಮಾಂತ್ರಿಕ ಸಕ್ಲೇನ್​ ಮುಸ್ತಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts