Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಅಫ್ಘಾನ್​ ಚೊಚ್ಚಲ ಟೆಸ್ಟ್​ ಪಂದ್ಯ: ಶತಕ ದಾಖಲಿಸಿ ಇತಿಹಾಸ ಬರೆದ ಶಿಖರ್​ ಧವನ್​

Thursday, 14.06.2018, 12:29 PM       No Comments

ನವದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಆಟಗಾರ ಶಿಖರ್​ ಧವನ್​ ಅವರು ಶತಕ ಬಾರಿಸಿ ದಾಖಲೆ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯವು ಅಫ್ಘಾನಿಸ್ತಾನದ ಮೊದಲ ಟೆಸ್ಟ್​ ಪಂದ್ಯವಾಗಿರುವುದರಿಂದ ವಿಶ್ವದ ಗಮನ ಸೆಳೆದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ ಪರ ಶಿಖರ್​ ಧವನ್​ ಹಾಗೂ ಮುರಳಿ ವಿಜಯ್​ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಪ್ರಾರಂಭದಿಂದಲೂ ಸ್ಫೋಟಕ ಆಟವಾಡಿದ ಧವನ್​ ಕೇವಲ 87 ಎಸೆತಗಳಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನೊಂದಿಗೆ ಶತಕ ಬಾರಿಸಿದ್ದು, ಊಟದ ವಿರಾಮಕ್ಕೂ ಮುನ್ನಾ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್​​ಮನ್​ ಎಂಬ ಕೀರ್ತಿ ಗಳಿಸಿದ್ದಾರೆ.

ವಿಶ್ವಮಟ್ಟದ ಆಟಗಾರರಲ್ಲಿ ವಿಕ್ಟರ್​ ಟ್ರಂಪರ್​, ಚಾರ್ಲಿ ಮಾಕಾರ್ಟ್ನಿ, ಡಾನ್​ ಬ್ರಾಡ್​ಮನ್​, ಮಜೀದ್​ ಖಾನ್​, ಡೇವಿಡ್ ವಾರ್ನರ್​ ನಂತರದ ಸ್ಥಾನವನ್ನು ಶಿಖರ್ ಅಲಂಕರಿಸಿದ್ದಾರೆ.​​

ವಿರಾಮ ವೇಳೆಯವರೆಗೆ ಭಾರತ ಯಾವುದೇ ವಿಕೆಟ್​ ನಷ್ಟವಿಲ್ಲದೆ 27 ಓವರ್​ಗೆ 158 ರನ್​ ಗಳಿಸಿ ಇನ್ನಿಂಗ್ಸ್​ ಮುಂದುವರಿಸಿದೆ. ಶಿಖರ್​ ಧವನ್ 91 ಎಸೆತಗಳಲ್ಲಿ 104 ರನ್​ ಹಾಗೂ ಮುರಳಿ ವಿಜಯ್​ 72 ಎಸೆತಗಳಲ್ಲಿ 41 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ. (ಏಜೆನ್ಸೀಸ್​)​

Leave a Reply

Your email address will not be published. Required fields are marked *

Back To Top