Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಕೋಪದಲ್ಲಿ ತಮಗೆ ತಾವೇ ಚಾಕು ಇರಿದುಕೊಂಡ ಕಾರ್ಪೋರೇಟರ್​ ಸಂಗಾತಿ..!

Sunday, 10.12.2017, 2:22 PM       No Comments

ಬೆಂಗಳೂರು: ಕತ್ರಿಗುಪ್ಪೆ ವಾರ್ಡ್​​ನ ಕಾರ್ಪೋರೇಟರ್​ ಸಂಗಾತಿ ವೆಂಕಟೇಶ್​ ಅವರು ವೈಯಕ್ತಿಕ ಕಾರಣಗಳಿಂದಾಗಿ ತಮಗೆ ತಾವೇ ಚಾಕು ಇರಿದುಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಬಿಜೆಪಿಗೆ ಸೇರಿರುವ ಸಂಗಾತಿ ವೆಂಕಟೇಶ್​ ಹಾಗೂ ತಮ್ಮ ಮಗನ ನಡುವೆ ಉಂಟಾದ ಮನಸ್ತಾಪದ ಕಾರಣ ಈ ರೀತಿ ಮಾಡಿಕೊಂಡಿದ್ದಾರೆ. ಪುತ್ರ ಸಾಗರ್​ ವೆಂಕಟೇಶ್​ ಜೊತೆ ಯಾವುದೋ ಕಾರಣಕ್ಕಾಗಿ ಮನಸ್ತಾಪ ಉಂಟಾಗಿದೆ. ಈ ವೇಳೆ ಕೋಪದಲ್ಲಿದ್ದ ಸಂಗಾತಿ ವೆಂಕಟೇಶ್​ ತಮಗೆ ತಾವೇ ಚಾಕುವಿನಿಂದ ಚುಚ್ಚಿಕೊಂಡಿದ್ದಾರೆ.

ಗಾಯಗೊಂಡ ಸಂಗಾತಿ ವೆಂಕಟೇಶ್​ ಅವರನ್ನು ಮೊದಲಿಗೆ ಪ್ರಶಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಅಪೋಲ್ ಆಸ್ಪತ್ರೆಗೆ ದಾಖಲಿಸಿ ನಂತರ ಮನೆಗೆ ವಾಪಸ್​ ಕರೆದೊಯ್ದಿದ್ದಾರೆ. ಈ ಕುರಿತು ದಿಗ್ವಿಜಯ ನ್ಯೂಸ್​​ಗೆ ಮಾಹಿತಿ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ, ಪ್ರಕರಣದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ ಎಂದಿದ್ದಾರೆ.

ಸಂಗಾತಿ ವೆಂಕಟೇಶ್​ ವೈರಲ್ ಸೋಂಕಿನಿಂದ ಬಳಲುತ್ತಿದ್ದಾರೆ : ಎನ್​.ಆರ್​. ರಮೇಶ್​

ಈ ಪ್ರಕರಣದ ಬಗ್ಗೆ ಬೆಂಗಳೂರು ನಗರ ಬಿಜೆಪಿ ವಕ್ತಾರ ಪ್ರತಿಕ್ರಿಯಿಸಿದ್ದು, ಸಂಗಾತಿ ವೆಂಕಟೇಶ್ ರವರಿಗೆ ಚೂರಿ ಇರಿತ ಎಂಬುವುದು ಸುಳ್ಳು ಸುದ್ದಿಯಾಗಿದೆ. ಅವರು ಕಳೆದ ಮೂರು ದಿನಗಳಿಂದಲೂ ವೈರಲ್ ಸೋಂಕಿನಿಂದ ಬಳಲತ್ತಿದ್ದು, ಅವರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದು ಸತ್ಯ ಸಂಗತಿ.ಯಾರೋ ಕಿಡಿಗೇಡಿಗಳು ತಪ್ಪು ಮಾಹಿತಿಗಳನ್ನು ಹಬ್ಬಿಸಿದ್ದಾರೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top