Thursday, 20th September 2018  

Vijayavani

Breaking News

ಪಾಕ್​ನ ಮಾಜಿ ಪ್ರಧಾನಿ ಷರೀಫ್​ ಸಾಕಿದ್ದ ಎಮ್ಮೆಗಳು ಹರಾಜಿಗಿವೆ!

Wednesday, 12.09.2018, 3:57 PM       No Comments

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪ್ರಧಾನಿ ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನದ ಸರ್ಕಾರ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಅದರ ಭಾಗವಾಗಿ ಇತ್ತೀಚೆಗೆ ಬಳಕೆ ಮಾಡದೆ ಇರುವ ವಾಹನಗಳನ್ನು ಹರಾಜು ಹಾಕುವುದಾಗಿ ತಿಳಿಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾಜಿ ಪ್ರಧಾನಿ ನವಾಜ್​ ಷರೀಫ್​ ಸಾಕಿದ್ದ 8 ಎಮ್ಮೆಗಳನ್ನು ಹರಾಜು ಹಾಕಲು ಪಾಕ್​ ಸರ್ಕಾರ ಮುಂದಾಗಿದೆ.

ನವಾಜ್​ ಷರೀಫ್​ ಪ್ರಧಾನಿಯಾಗಿದ್ದಾಗ ತಮ್ಮ ನಿವಾಸದಲ್ಲಿ 8 ಎಮ್ಮೆಗಳನ್ನು ಸಾಕಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್​ 10 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದಾರೆ. ಹೀಗಾಗಿ ಅವರು ಸಾಕಿದ್ದ ಎಮ್ಮೆಗಳನ್ನು ಪ್ರಧಾನಿ ನಿವಾಸದಲ್ಲಿದ್ದ ಹೆಚ್ಚುವರಿ ಐಷಾರಾಮಿ ಕಾರುಗಳು, ಸರ್ಕಾರದ ನಾಲ್ಕು ಹೆಲಿಕಾಪ್ಟರ್​ಗಳ ಜತೆಯಲ್ಲೇ ಹರಾಜು ಹಾಕಲು ಪಾಕ್​ ಸರ್ಕಾರ ಸಿದ್ಧತೆ ನಡೆದಿದೆ.

ಈ ಕುರಿತು ಪಾಕಿಸ್ತಾನದ ಪ್ರಧಾನ ಮಂತ್ರಿಗಳ ವಿಶೇಷ ಸಹಾಯಕ ನಯೀಮ್​ ಉಲ್​ ಹಕ್​ ಟ್ವೀಟ್​ ಮಾಡಿದ್ದಾರೆ.

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಧನಸಹಾಯವನ್ನು ಅಮೆರಿಕ ತಡೆ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಪಾಕ್​ನ ಆರ್ಥಿಕ ಸಂಕಷ್ಟು ಮತ್ತಷ್ಟು ಹೆಚ್ಚಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top