Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

65ರ ಹರಯದಲ್ಲಿ ದಾಂಪತ್ಯದ 3ನೇ ಇನ್ನಿಂಗ್ಸ್‌ ಆರಂಭಿಸಿದ ಪಾಕ್‌ ಮಾಜಿ ಕ್ರಿಕೆಟಿಗ

Monday, 19.02.2018, 9:19 AM       No Comments

ಕರಾಚಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ 65ರ ಹರಯದ ಇಮ್ರಾನ್‌ ಖಾನ್‌ ಇದೀಗ ಮದುವೆಯಾಗಿ, ದಾಂಪತ್ಯದ ಮೂರನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಭಾನುವಾರ ಲಾಹೋರ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಮ್ರಾನ್‌ ಅವರ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದ ಸುಮಾರು 40 ವರ್ಷದ ಬುಶ್ರಾ ಮನೇಕಾ ಅವರನ್ನು ವರಿಸಿದ್ದಾರೆ ಎಂದು ಪಿಟಿಐ ವಕ್ತಾರ ಫಾವದ್‌ ಚೌಧರಿ ತಿಳಿಸಿದ್ದಾರೆ.

ಲಾಹೋರ್‌ನಲ್ಲಿನ ಮನೇಕಾ ಅವರ ಅಣ್ಣನ ನಿವಾಸದಲ್ಲಿ ಮದುವೆ ನೆರವೇರಿದ್ದು, ಮದುವೆ ಎನ್ನುವುದು ಎರಡು ಹೃದಯ ಮತ್ತು ಆತ್ಮಗಳ ಸಂಯೋಜನೆಯಾಗಿದೆ. ಮದುವೆಯ ಶುಭಾಶಗಳು. ಕೆಲವೇ ದಿನಗಳಲ್ಲಿ ಸರಳವಾಗಿಯೇ ಮದುವೆಯ ಆರತಕ್ಷತೆ(ವಾಲೀಮ) ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಇಮ್ರಾನ್‌ ಖಾನ್‌- ಬುಶ್ರಾ ನವ ದಂಪತಿಗೆ ಪಿಟಿಐ ಪಕ್ಷ ವಿವಾಹದ ಶುಭ ಕೋರಿ ಫೋಟೋ ಸಮೇತ ಪಿಟಿಐ ಪಕ್ಷ ಟ್ವೀಟ್‌ ಮಾಡಿದೆ.

1995ರ ಮೇ 16ರಂದು ಜೆಮಿಮಾ ಖಾನ್‌ರನ್ನು ಮೊದಲು ವರಿಸಿದ್ದ ಇಮ್ರಾನ್‌ ಖಾನ್‌, 2004ರ ಜೂನ್‌ 22ರಂದು ಜೆಮಿಮಾರಿಂದ ಡೈವೋರ್ಸ್‌ ಪಡೆದಿದ್ದರು. ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ.

ನಂತರ ಟಿವಿ ಆ್ಯಂಕರ್ ರೆಹಮ್ ಖಾನ್‌ರನ್ನು ಇಮ್ರಾನ್‌ ಖಾನ್‌ ಎರಡನೇ ವಿವಾಹವಾಗಿದ್ದರು. ಆದರೆ ಕೇವಲ 10 ತಿಂಗಳಲ್ಲಿಯೇ ಇಮ್ರಾನ್‌ ಖಾನ್‌-ರೆಹಮ್ ದೂರವಾಗಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top