Friday, 21st September 2018  

Vijayavani

Breaking News

ಪ್ರೇಮ್ ಕುಮಾರಿಗೆ ಪ್ರೀತಿಯಿಂದಲೇ ಹಾರೈಸಿದ ಮಾಜಿ ಸಚಿವ ರಾಮದಾಸ್

Friday, 15.12.2017, 5:20 PM       No Comments

<< ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ; ಈ ರೀತಿ ತೊಂದರೆ ನೀಡಲು ಯಾರದ್ದೋ ಕುಮ್ಮಕ್ಕು ಇದೆ​ >>

ಮೈಸೂರು: ಪ್ರೇಮ್ ಕುಮಾರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಂದು ಮಾಜಿ ಸಚಿವ ಎಸ್​. ಎ. ರಾಮದಾಸ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನ ಕೆ.ಆರ್. ಕ್ಷೇತ್ರದಿಂದ ಪ್ರೇಮ್​ಕುಮಾರಿ ಸ್ಪರ್ಧೆ ವಿಚಾರವಾಗಿ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರೇಮ್​ಕುಮಾರಿ ತಮ್ಮ ವಿರುದ್ಧ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ. ಪ್ರೇಮ್​ಕುಮಾರಿ ಈ ರೀತಿ ತೊಂದರೆ ನೀಡುತ್ತಿರುವುದರ ಹಿಂದೆ ಯಾರದ್ದೋ ಕುಮ್ಮಕ್ಕು ಇದೆ. ಇದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆ ಎದುರಿಸಬಹುದು. ನನ್ನ ಜೀವ ಹೋದರು ಸರಿಯೇ ನಾನು ಹೋರಾಟ ಮುಂದುವರಿಸುವೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top