Monday, 23rd October 2017  

Vijayavani

2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ 1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ
Breaking News :

ಡಬ್ಬಿಂಗ್​ ಕುರಿತು ನಟ ಶಿವರಾಜ್​ ಕುಮಾರ್​ ಹೇಳಿದ್ದೇನು?

Wednesday, 12.07.2017, 12:50 PM       No Comments

ಬೆಂಗಳೂರು: ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್​ ಮಾಡುವ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಡಬ್ಬಿಂಗ್​ ಬೇಡ ಎಂದು ಸಾಕಷ್ಟು ಹೋರಾಟ ಸಹ ನಡೆದಿದೆ. ಆದರೆ ಈಗ ಹಿರಿಯ ನಟ ಡಾ. ಶಿವರಾಜ್​ ಕುಮಾರ್​ ಅವರು ಡಬ್ಬಿಂಗ್​ ಕುರಿತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

55ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಡಾ. ಶಿವರಾಜ್​ ಕುಮಾರ್​ ಅವರು ಬುಧವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಡಬ್ಬಿಂಗ್​ ಕುರಿತು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಒಪ್ಪಂ ಚಿತ್ರದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಜ್​ ಕುಮಾರ್​ ಜನರು ಡಬ್ಬಿಂಗ್​ ಬೇಕು ಅಂದ್ರ ನೋಡಲಿ, ಡಬ್ಬಿಂಗ್​ ಬೇಡ ಅನ್ನೋಕೆ ನಾನ್ಯಾರು ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ರೀಮೇಕ್​ ಸಿನಿಮಾ ಮಾಡೋ ಅವಶ್ಯಕತೆ ಇಲ್ಲ. ಸಾಕಷ್ಟು ಹೊಸ ಚಿತ್ರಗಳು ತೆರೆಗೆ ಬರುತ್ತಿವೆ. ಜತೆಗೆ ಹೊಸಬರು ಪ್ರಯೋಗಾತ್ಮಕ ಚಿತ್ರಗಳನ್ನೂ ಸಹ ಮಾಡುತ್ತಿದ್ದಾರೆ. ಒಪ್ಪಂ ಚಿತ್ರದ ಕತೆ ತುಂಬಾ ಚೆನ್ನಾಗಿ. ಹಾಗಾಗಿ ಆ ಚಿತ್ರವನ್ನು ಕನ್ನಡದಲ್ಲಿ ಮಾಡಲು ನಾನು ಒಪ್ಪಿದ್ದೇನೆ ಎಂದು ಶಿವರಾಜ್​ ಕುಮಾರ್​ ಒಪ್ಪಂ ಚಿತ್ರದ ಕುರಿತು ತಿಳಿಸಿದ್ದಾರೆ.

(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top