Thursday, 20th September 2018  

Vijayavani

ಸಿಎಂ ಕುಟುಂಬದ ವಿರುದ್ಧ ಬಿಜೆಪಿ ಭೂ ಅಸ್ತ್ರ - ಮೈಸೂರು, ರಾಮನಗರದಲ್ಲೂ ಭೂ ಅಕ್ರಮ - ಬಿಜೆಪಿ ನಾಯಕರಿಂದ ಭೂ ಚಕ್ರ        ಹಾಸನದಲ್ಲಿ ಗೌಡರ ಕುಟುಂಬದಿಂದ ಗೋಮಾಳ ಕಬಳಿಕೆ - ದೇಶಪಾಂಡೆಗೆ ದೂರು -ಎ.ಮಂಜುರಿಂದ ಕಂಪ್ಲೆಂಟ್​ ದಾಖಲು        ಬಿಜೆಪಿಯಿಂದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ - ದಂಗೆ ಏಳುವಂತೆ ಸಿಎಂ ಕರೆ - ಎಚ್ಡಿಕೆ ಮಾತಿನ ಬೆನ್ನಲ್ಲೇ ದಾಂಧಲೆ ಶುರು        ಎಚ್​ಡಿಕೆ-ಬಿಎಸ್​ವೈ ವಾಗ್ದಾಳಿ ಬೆನ್ನಲ್ಲೇ ಹೈಡ್ರಾಮಾ -ಯಡಿಯೂರಪ್ಪ ನಿವಾಸದೆದುರು ಕೈ ಕಾರ್ಯಕರ್ತರ ಹಂಗಾಮಾ        ಡಾಲರ್ಸ್ ಕಾಲನಿ ನಿವಾಸದಲ್ಲಿ ಗಲಾಟೆ - ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ - ಬಿಎಸ್​ವೈ ಭಾವಚಿತ್ರ ಹರಿದು ಹಾಕಿ ಆಕ್ರೋಶ        ಇಲ್ಲಿ ನಿಮ್ಮ ಸರ್ಕಾರ, ಅಲ್ಲಿ ನಮ್ಮ ಸರ್ಕಾರ - ನಿಮ್ಮ ಯಾವುದೇ ಧಮ್ಕಿಗೂ ಹೆದರಲ್ಲ -  ಅಟ್ಯಾಕ್​ಗೆ ಬಿಎಸ್​ವೈ ಕೌಂಟರ್​ ಅಟ್ಯಾಕ್       
Breaking News

ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಸಾಲ ಮನ್ನಾ: ಕುಮಾರಸ್ವಾಮಿ

Sunday, 07.01.2018, 6:43 PM       No Comments

ರಬಕವಿ/ಬನಹಟ್ಟಿ(ಬಾಗಲಕೋಟೆ): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರಾಜ್ಯದ ರೈತರ ಹಾಗೂ ನೇಕಾರರ 51 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬನಹಟ್ಟಿಯ ಎಸ್​ಆರ್​ಎ ಕಾಲೇಜ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ನೇಕಾರರು ಹಾಗೂ ರೈತರಿಗೆ 24 ಗಂಟೆಗಳ ನಿರಂತರ ವಿದ್ಯುತ್ ಕಲ್ಪಿಸಲಿದೆ ಎಂದು ತಿಳಿಸಿದರು.

ರೈತರ ಆತ್ಮಹತ್ಯೆಗೆ ಮೂಲ ಕಾರಣ ಹುಡುಕಿ ಅವರಿಗೆ ಉತ್ತಮ ಆರ್ಥಿಕ ಯೋಜನೆ ರೂಪಿಸಲಿದೆ. ಗರ್ಭಿಣಿಯರಿಗೆ ಮಗು ಜನಿಸುವವರೆಗೆ ಮತ್ತು ಜನಿಸಿದ 24 ತಿಂಗಳವರೆಗೆ ಪ್ರತಿ ತಿಂಗಳು 5 ಸಾವಿರ ಮಾಸಾಶನ ಹಾಗೂ ಅಂಗವಿಕಲರು, ವಿಧವೆಯರಿಗೆ ನೀಡಲಾಗುವ ಮಾಸಾಶನವನ್ನು 5 ಸಾವಿರ ರೂ.ಗೆ ಹೆಚ್ಚಿಸಲಿದೆ ಎಂದು ಆಶ್ವಾಸನೆ ನೀಡಿದರು.

ರಾಜ್ಯದಲ್ಲಿ ಈಗ ಹಲವರು ಬರಿ ಜಾತಿ ಹೆಸರಿನಲ್ಲಿ ಜನರ ನಡುವೆ ಕೋಮುವಾದ ಹುಟ್ಟಿಸಿ ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಾನು ಜಾತೀಯತೆ ಮಾಡದೆ ಪ್ರತಿಯೊಬ್ಬ ಪ್ರಜೆಯ ರಕ್ಷಣೆ ಮಾಡುತ್ತೇನೆ.

ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Leave a Reply

Your email address will not be published. Required fields are marked *

Back To Top