Saturday, 21st July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಐಸಿಸ್​ ಉಗ್ರರಿಂದ ತಪ್ಪಿಸಿಕೊಂಡು ಬಂದಿದ್ದ ಆ ವ್ಯಕ್ತಿ ಹೇಳಿದ್ದೇನು?

Tuesday, 20.03.2018, 6:47 PM       No Comments

<<ನನ್ನ ಜತೆ ಅಪಹರಣಗೊಂಡವರೆಲ್ಲರೂ ಕೊಲೆಯಾಗಿದ್ದಾರೆ ಎಂದರೂ ಸರ್ಕಾರ ನಂಬಲಿಲ್ಲ >>

ಚಂಡೀಗಢ: “ನನ್ನ ಜತೆ ಅಪಹರಣಗೊಂಡಿದ್ದ ಎಲ್ಲ 39 ಮಂದಿ ಭಾರತೀಯರನ್ನೂ ಇರಾಕ್​ನ ಐಸಿಸ್​ ಉಗ್ರರು ಹತ್ಯೆಗೈದಿದ್ದಾರೆ,” ಎಂದು ಕಳೆದ ಮೂರು ವರ್ಷಗಳಿಂದ ಹೇಳುತ್ತಿದ್ದೇನೆ. ಆದರೆ ಸರ್ಕಾರ ಇಂದು ಹತ್ಯೆಯ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ,” ಎಂದು 2014ರ ಜೂನ್​ನಲ್ಲಿ ಇರಾಕ್​ನಲ್ಲಿ ಐಸಿಸ್ ಉಗ್ರರಿಂದ ​ ಅಪಹರಣಕ್ಕೊಳಗಾಗಿದ್ದ 40 ಜನ ಭಾರತೀಯ ಕಾರ್ಮಿಕರ ಪೈಕಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬಂದಿದ್ದ ಹರ್ಜಿತ್​ ಮಸಿಹ್​ ಹೇಳಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು ಮಂಗಳವಾರ 39 ಭಾರತೀಯರ ಹತ್ಯೆ ಸಂಗತಿಯನ್ನು ಘೋಷಿಸುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹರ್ಜಿತ್​, ” ನನ್ನೊಂದಿಗಿದ್ದ ಭಾರತೀಯರನ್ನೆಲ್ಲ ಉಗ್ರರು ನನ್ನ ಕಣ್ಣೆದುರೇ ಹತ್ಯೆಗೈದರು. ಇದನ್ನು ಮೂರು ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ನಾನು ಸತ್ಯವನ್ನೇ ಹೇಳಿದ್ದೆ. ಆದರೆ ಸರ್ಕಾರ ಏಕೆ ನನ್ನ ಮಾತನನ್ನು ಪರಿಗಣಿಸಲಿಲ್ಲ” ಎಂದು ಹರ್ಜಿತ್​ ಪ್ರಶ್ನಿಸಿದ್ದಾರೆ.

ಹರ್ಜಿತ್​ ಸೇರಿದಂತೆ 40 ಭಾರತೀಯರು ದುಡಿಮೆಗಾಗಿ ಇರಾಕ್​ಗೆ ತೆರಳಿದ್ದರು. ಅವರೆಲ್ಲರೂ ಅಮೃತಸರ, ಗುರುದಾಸ್​ಪುರ, ಜಲಂಧರ್​, ಪಂಜಾಬ್​ನವರಾಗಿದ್ದರು. ಇರಾಕ್​ನ ಕಾರ್ಖಾನೆಯೊಂದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು 2014ರಲ್ಲಿ ಐಸಿಸ್​ ಉಗ್ರರು ಅಪಹರಿಸಿದ್ದರು.

ಆ ಘೋರ ಘಟನೆ ಹೇಗಿತ್ತು?: “ನಾವೆಲ್ಲ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಇರಾಕ್​ನ ಬಂಡುಕೋರರು ನಮ್ಮನ್ನೆಲ್ಲ ಅಪರಹರಿಸಿ ಒಂದೆಡೆ ಕೆಲ ದಿನಗಳ ಕಾಲ ಒತ್ತೆಯಾಳುಗಳಾಗಿ ಇರಿಸಿಕೊಂಡರು. ಒಂದು ದಿನ ನಮ್ಮನ್ನೆಲ್ಲ ಮಂಡಿಯೂರಿಸಿ ಕೂರಿಸಿದ ಉಗ್ರರು ಎಲ್ಲರ ಮೇಲೆ ಗುಂಡಿನ ಮಳೆಗರೆದರು. ಅದೃಷ್ಟವಶಾತ್​ ನನ್ನ ತೊಡೆಗೆ ಗುಂಡು ಬಿತ್ತು. ನಾನು ಪ್ರಜ್ಞಾ ಹೀನಾಗಿ ಕುಸಿದೆ. ನಂತರದಲ್ಲಿ ಅವರಿಂದ ತಪ್ಪಿಸಿಕೊಳ್ಳವಲ್ಲಿ ಯಶಸ್ವಿಯಾಗಿದ್ದೆ,” ಎಂದು ಪಂಜಾಬ್​ನ ಗುರುದಾಸ್​ಪುರದ ಹರ್ಜಿತ್​ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Back To Top