Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ನಾನು ದಿನಾ ಕುಡೀತೀನಿ: ಶಾಸಕ ರಾಜಣ್ಣ ಕಂಠಾಘೋಷಣೆ

Thursday, 05.10.2017, 1:45 PM       No Comments

ತುಮಕೂರು: ಮದ್ಯಪಾನ ನಿಷೇಧದಿಂದ ದುಷ್ಪರಿಣಾಮವೇ ಹೆಚ್ಚೇ ಹೊರತು, ಮದ್ಯಪಾನ ಮಾಡುವುದರಿಂದ ತೊಂದರೆ ಏನೂ ಇಲ್ಲ ಎಂದು ಕುಡುಕರಿಗೆ ಬೆಂಬಲ ನೀಡುವ ಮೂಲಕ ಮಧುಗಿರಿ ಶಾಸಕ ಕೆ ಎನ್​ ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜಣ್ಣ ಘಂಟಾ ಘೋಷಣೆ

ನಾನೂ ಕೂಡ ಪ್ರತಿನಿತ್ಯ ಕುಡಿತೀನಿ. ಅದರಲ್ಲಿ ಏನೂ ಅನುಮಾನವಿಲ್ಲ. ನನ್ನ ದುಡ್ಡಲ್ಲಿ ನಾನು ಕುಡಿಯುತ್ತೇನೇ ಹೊರತು ಬೇರೆಯವರ ದುಡ್ಡಲ್ಲಿ ಕುಡಿಯೋಲ್ಲ. ದೇವರು ಕುಡಿದರೆ ಸುರಪಾನ ಅಂತಾರೆ. ಆದರೆ, ನಾವು ಕುಡಿದರೆ ಮದ್ಯಪಾನ ಅಂತಾರೆ ಇದು ಸರಿಯ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಹಳ್ಳಿಹಳ್ಳಿಗಳಲ್ಲೂ ಮದ್ಯ ಮಾರಾಟ ಬಗ್ಗೆ ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳು ದೂರು ನೀಡುತ್ತಿದ್ದಾರೆ. ನಾವು ಕೂಡ ಮದ್ಯ ಮಾರಾಟ ತಡೆಗೆ ಅಬಕಾರಿಯವರಿಗೆ ಸೂಚಿಸಿದ್ದೆವು. ಗುಜರಾತ್​ನಲ್ಲೂ ಮದ್ಯ ನಿಷೇಧದಿಂದ ದುಷ್ಪರಿಣಾಮವಾಗಿದೆ ಎಂದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top