Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ರೆ ಮೊದಲು‌ ಜೈ ಹೇಳುವೆ ಅಂದ್ರು ‘ಕೈ’ ಅಧ್ಯಕ್ಷೆ

Thursday, 31.08.2017, 9:42 AM       No Comments

ಬೆಳಗಾವಿ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು‌ ಜೈ ಮಹಾರಾಷ್ಟ್ರ ಅಂತಾ ಹೇಳುವೆ ಎನ್ನುವ ಮೂಲಕ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದ ಸೃಷ್ಟಿಸಿದ್ದಾರೆ.

ಅದಕ್ಕಿಂತ ಸಖೇದಾಶ್ಚರ್ಯ ಅಂದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇದಿಷ್ಟೂ ವಿವಾದದ ಕಿಡಿಗಳನ್ನು ಮರಾಠಿ ಭಾಷೆಯಲ್ಲಿ ಉದುರಿಸಿದ್ದಾರೆ.

ಬೆಳಗಾವಿಯ ಬಸರೀಕಟ್ಟಿ ಗ್ರಾಮದಲ್ಲಿ ಮಾಡಿದ ಭಾಷಣದ ಆಡಿಯೋ ಸಖತ್​ ವೈರಲ್ ಆಗಿದ್ದು, ಭಾಷಣ ಮಾಡುವ ವೇಳೆ ನಾನೀಗ ಕರ್ನಾಟಕದಲ್ಲಿದ್ದೀನಿ, ಆದರೆ ಗಡಿ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಸುಪ್ರೀಂ ಕೋರ್ಟ್ ಬೆಳಗಾವಿ, ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿದರೆ ಜೈ ಮಹಾರಾಷ್ಟ್ರ ಎನ್ನುವೆ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಎಲ್ಲರಿಗಿಂತ ಮೊದಲು ನಾನೇ ಮಹಾರಾಷ್ಟ್ರ ಧ್ವಜ ಹಿಡಿಯುತ್ತೇನೆ ಜೈ ಮಹಾರಾಷ್ಟ್ರ ಅಂತಾ ಹೇಳುವೆ. ಯಾವನಿಗೂ ಈ ರೀತಿ‌ ಹೇಳುವ ಧೈರ್ಯವಿಲ್ಲ. ಆದರೆ, ನನಗೆ ಯಾರ ಭಯವಿಲ್ಲ. ನಾನು ಯಾರಿಗೂ ಹೆದರುವುದಿಲ್ಲ, ನಾನು ಹೆದರುವುದು ಭಗವಂತನಿಗೆ, ನನ್ನ ತಂದೆ-ತಾಯಿಗೆ ಮಾತ್ರ ಎಂದಿದ್ದಾರೆ.

ನನಗೆ ಜಾತಿ, ಧರ್ಮ, ವ್ಯಕ್ತಿಯ ಬಗ್ಗೆ ಯಾವುದೇ ನಂಬಿಕೆಯಿಲ್ಲ, ಯಾರಿಂದ ಏನೂ ಆಗಬೇಕಿಲ್ಲ. ನನಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಯಾಗಬೇಕಷ್ಟೇ ಎಂದು ಹೇಳುವ ಮೂಲಕ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top