Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಫಿಟ್ಟಾಗಿ ಎಂದರೆ ಸಿಟ್ಟಾದ್ರು..!

Thursday, 14.06.2018, 3:04 AM       No Comments

ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಹ್ವಾನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಬುಧವಾರ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಈ ವಿದ್ಯಮಾನದ ವಿವರ ಇಲ್ಲಿದೆ.

ಪ್ರಧಾನಿ ಮಾಡಿದ್ದೇನು?

ತಮ್ಮ ಫಿಟ್​ನೆಸ್ ವಿಡಿಯೋವನ್ನು ಬುಧವಾರ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಫಿಟ್​ನೆಸ್ ಸವಾಲನ್ನು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, ಟೇಬಲ್ ಟೆನ್ನಿಸ್ ಆಟಗಾರ್ತಿ ಮನಿಕಾ ಬತ್ರಾ ಹಾಗೂ 40 ವರ್ಷ ಮೇಲ್ಪಟ್ಟ ಐಪಿಎಸ್ ಅಧಿಕಾರಿಗಳಿಗೆ ವರ್ಗಾಯಿಸಿದ್ದರು.

ವಿಡಿಯೋದಲ್ಲೇನಿದೆ?

ಯೋಗದ ಹೊರತಾಗಿ ನಾನು ಪಂಚತತ್ತ್ವ ಅರ್ಥಾತ್ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶಗಳಿಂದ ಪ್ರೇರಿತವಾದ ಪಥದಲ್ಲಿ ನಡಿಗೆಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಇದು ನಿಜವಾಗಿಯೂ ಲವಲವಿಕೆ ನೀಡುವುದಲ್ಲದೆ, ಭಾರಿ ಚೈತನ್ಯವನ್ನೂ ತುಂಬುತ್ತದೆ. ಇಷ್ಟೇ ಅಲ್ಲ, ನಾನು ಪ್ರಾಣಾಯಾಮ ವನ್ನೂ ಮಾಡುತ್ತೇನೆ ಎಂದು ಮೋದಿ ಹೇಳಿಕೊಂಡಿದ್ದು, ಆ ಕ್ರಿಯೆಗಳ ಚಿತ್ರಣವೂ ವಿಡಿಯೋದಲ್ಲಿದೆ.

ಸಿಎಂ ಪ್ರತಿಕ್ರಿಯೆ ಹೇಗಿತ್ತು?

ಕುಮಾರಸ್ವಾಮಿಯವರ ವೈಯಕ್ತಿಕ ಖಾತೆಯನ್ನು ಪ್ರಧಾನಿ ಟ್ಯಾಗ್ ಮಾಡಿದ್ದರೆ, ಅದಕ್ಕೆ ಮುಖ್ಯಮಂತ್ರಿ ಕಚೇರಿ ಟ್ವಿಟರ್ ಖಾತೆಯಿಂದ ಕಡಕ್ ಪ್ರತಿಕ್ರಿಯೆ ವ್ಯಕ್ತವಾಯಿತು. ‘ಪ್ರೀತಿಯ ಮೋದೀಜಿ, ನಿಮ್ಮ ಕಾಳಜಿಗೆ ನಾನು ಆಭಾರಿ. ಧನ್ಯವಾದಗಳು ನಿಮಗೆ. ಗುರಿ ಸಾಧಿಸಲು ಆರೋಗ್ಯ ಅವಶ್ಯಕ ಎಂಬುದನ್ನು ನಂಬುತ್ತೇನೆ. ಯೋಗ ಹಾಗೂ ಟ್ರೆಡ್​ವಿುಲ್ ಮೂಲಕ ವ್ಯಾಯಾಮ ಮಾಡುತ್ತೇನೆ. ಆದರೆ, ನನಗೆ ರಾಜ್ಯದ ಅಭಿವೃದ್ಧಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಅದಕ್ಕೆ ನಿಮ್ಮ ಬೆಂಬಲ ಬೇಕು’ ಎಂಬ ಪ್ರತಿಕ್ರಿಯೆ ದಾಖಲಾಗಿದೆ.

ಸವಾಲೆಸೆದ ಮೊದಲಿಗ ಯಾರು?

ಕೇಂದ್ರ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್(ಮೇ22) ಈ ಫಿಟ್​ನೆಸ್ ಚಾಲೆಂಜ್ ಹುಟ್ಟುಹಾಕಿದ್ದು, ತಮ್ಮ ವ್ಯಾಯಾಮದ ವಿಡಿಯೋ ಹಾಕಿ ಚಿತ್ರನಟ ಹೃತಿಕ್ ರೋಷನ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್​ಗೆ ಸವಾಲೆಸೆದಿದ್ದರು. ವಿರಾಟ್ ಕೊಹ್ಲಿ ಈ ಚಾಲೆಂಜ್ ಸ್ವೀಕರಿಸಿದ್ದು, ತಮ್ಮ ವಿಡಿಯೋ ಅಪ್ಲೋಡ್ ಮಾಡಿ(ಮೇ23) ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ನಟಿ ಅನುಷ್ಕಾ ಶರ್ವಗೆ ಸವಾಲೆಸೆದಿದ್ದರು.

 

Leave a Reply

Your email address will not be published. Required fields are marked *

Back To Top