Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ತಾಮ್ರದ ನಿಕ್ಷೇಪಕ್ಕೆ ಕೈ ಹಾಕಿದ ಕೇಂದ್ರ

Monday, 09.07.2018, 6:40 PM       No Comments

< ತಿಂಗಳಿಂದ ನಡೆದಿದೆ ತೀವ್ರಗತಿಯಲ್ಲಿ ಕಾರ್ಯಾಚರಣೆ> ಭೌಗೋಳಿಕ ಸರ್ವೇಕ್ಷಣಾ ಇಲಾಖೆ, ಭೂ ವಿಜ್ಞಾನಿಗಳು ಭಾಗಿ>

ಹಟ್ಟಿಚಿನ್ನದ ಗಣಿ: ಸಮೀಪದ ಮಾಚನೂರಿನಲ್ಲಿ ಕೇಂದ್ರದ ಭೌಗೋಳಿಕ ಸರ್ವೇಕ್ಷಣಾ ಇಲಾಖೆ ಮತ್ತು ಭೂ ವಿಜ್ಞಾನಿಗಳು ತಾಮ್ರದ ಅನ್ವೇಷಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವರ್ಷದ ಹಿಂದೆಯೇ ಆರಂಭಗೊಂಡಿದ್ದ ಯೋಜನೆಗೆ ಕಳೆದ ಒಂದು ತಿಂಗಳಿಂದ ತೀವ್ರಗತಿಯಲ್ಲಿ ಕಾರ್ಯ ಪ್ರಗತಿಯಲ್ಲಿದೆ.

ಗ್ರಾಮದ ಒಂದು ಕಿಮೀ ವ್ಯಾಪ್ತಿ ಭೂಮಿಯಲ್ಲಿ ಎಷ್ಟು ಪ್ರಮಾಣದಲ್ಲಿ ತಾಮ್ರದ ವಸ್ತು ದೊರೆಯುತ್ತದೆ ಎಂಬುದರ ಕುರಿತು ಪಡಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ರೀನಿಯಮ್ ಎಂಬ ಸಂಕ್ರಮಣ ಲೋಹ ಧಾತು ಕೂಡಾ ಇಲ್ಲಿದೆ ಎನ್ನಲಾಗುತ್ತದೆ.

ಸದ್ಯ ಬೆಳೆ ಇರದ ಭೂಮಿಯಲ್ಲಿ ಅಂದಾಜು 150-200 ಮೀಟರ್‌ವರೆಗೆ ಪರೀಕ್ಷೆ ನಡೆಯುತ್ತಿದೆ. ಉತ್ತಮ ಫಲಿತಾಂಶ ದೊರೆತರೆ ಇನ್ನೂ ಆಳಕ್ಕಿಳಿಯುವ ಯೋಚನೆಯಿದೆ. ಇದುವರೆಗೆ ನಡೆದ ಅನ್ವೇಷಣೆ ಕಾರ್ಯವೂ ಉತ್ತಮವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಹೈದರಾಬಾದ್ ನಿಜಾಮನ ಆಡಳಿತದಲ್ಲೇ ಗಣಿಗಾರಿಕೆ ಮಾಡಲು ಭೂಮಿಯಲ್ಲಿ ಅನ್ವೇಷಣೆ ಕಾರ್ಯ ನಡೆಸಿದ ಬಗ್ಗೆ ಈ ಭಾಗದಲ್ಲಿ ಕುರುಹುಗಳಿವೆ. ನಾನಾ ಕಡೆ ಅಗೆದ ಭೂಮಿಯಿಂದ ಕಲ್ಲನ್ನು ತೆಗೆದು ಸಂಸ್ಕರಿಸಿ, ತಾಮ್ರ ಸೇರಿ ಇತರ ಮೂಲ ವಸ್ತುಗಳ ಬಗ್ಗೆ ಅನ್ವೇಷಣೆ ನಡೆಯುತ್ತಿತ್ತು.
| ಸಿದ್ರಾಮಪ್ಪ ಸಂಗೇಪಾಗ್ ನಿವೃತ್ತ ಕಾರ್ಮಿಕ ಮುಖಂಡರು, ಹಟ್ಟಿಚಿನ್ನದಗಣಿ ಕಂಪನಿ

ಮಾಚನೂರಿನಲ್ಲಿ ಭೂಮಿಯಲ್ಲಿ ಅನ್ವೇಷಣೆ ನಡೆಯುತ್ತಿದೆ. ಕೇಂದ್ರದ ಭೌಗೋಳಿಕ ಸರ್ವೇಕ್ಷಣಾ ಇಲಾಖೆ ಹಾಗೂ ಭೂ ವಿಜ್ಞಾನ ಇಲಾಖೆಯಿಂದ ಈ ಕಾರ್ಯ ನಡೆಯುತ್ತಿದೆ. ತಾಮ್ರ ಮತ್ತು ರೀನಿಯಮ್‌ಗಳ ಸಂಶೋಧನೆ ನಡೆದಿದೆ.
| ಕೆ.ಎಲ್ ನರಸಪ್ಪ  ಕಾರ್ಯನಿರ್ವಾಹಕ ಅಭಿಯಂತರ, ಭೌಗೋಳಿಕಾ ಸರ್ವೇಕ್ಷಣ ಇಲಾಖೆ, ಕೇಂದ್ರ ಸರ್ಕಾರ ಬೆಂಗಳೂರು

ಇಲ್ಲಿ ತಾಮ್ರದ ನಿಕ್ಷೇಪಗಳಿವೆ ಎಂಬುದು 100 ವರ್ಷದ ಹಿಂದೆಯೇ ದೃಢಪಟ್ಟಿದೆ. ಅನ್ವೇಷಣಾ ಕಾರ‌್ಯವನ್ನು ಇಂದು ಕೇಂದ್ರ ಸರ್ಕಾರದ ಭೌಗೋಳಿಕ ಸರ್ವೇಕ್ಷಣಾ ಇಲಾಖೆ ಕೈಗೆತ್ತಿಕೊಂಡಿದೆ.
| ಡಾ.ಪ್ರಭಾಕರ ಸಂಗೂರುಮಠ ಖ್ಯಾತ ಭೂಗರ್ಭ ಅನ್ವೇಷಣಾಕಾರ ಹಾಗೂ ಪ್ರಧಾನ ವ್ಯವಸ್ಥಾಪಕ, ಹಟ್ಟಿಚಿನ್ನದಗಣಿ ಕಂಪನಿ

Leave a Reply

Your email address will not be published. Required fields are marked *

Back To Top