Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಚಿನ್ನದಗಣಿಗೆ ಪೇಜಾವರ ಶ್ರೀಗಳ ಭೇಟಿ

Monday, 09.07.2018, 5:26 PM       No Comments

ಹಟ್ಟಿ ಚಿನ್ನದಗಣಿ (ರಾಯಚೂರು): ಪಟ್ಟಣದಲ್ಲಿ ನಡೆಯುತ್ತಿರುವ ಶೋಭಾ ಯಾತ್ರೆ ಹಾಗೂ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಚಿನ್ನದ ಗಣಿ ಕಂಪನಿಗೆ ಸೋಮವಾರ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಲೋಹ ವಿಭಾಗ, ಅದಿರು ಸಂಸ್ಕರಣೆ ವಿಭಾಗ, ಉತ್ಪಾದನಾ ವಿಭಾಗ, ಆಡಳಿತ ಕಚೇರಿ ಸೇರಿ ನಾನಾ ವಿಭಾಗಗಳಿಗೆ ಭೇಟಿ ನೀಡಿ, ಕಂಪನಿ ಚಿನ್ನ ಉತ್ಪಾದನೆ, ಕಾರ‌್ಯ ವೈಖರಿ ವೀಕ್ಷಿಸಿದರು. ಅಲ್ಲದೆ, ಕಾರ್ಮಿಕರ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನ ವ್ಯವಸ್ಥಾಪಕ ಪ್ರಕಾಶ ಬಹದ್ದೂರ್, ವ್ಯವಸ್ಥಾಪಕ ಶಾಂತಕುಮಾರ ಹಾಗೂ ಅಧಿಕಾರಿಗಳು ಇದ್ದರು.

ಕಂಪನಿ ಸಂಸ್ಥಾಪನಾ ದಿನಾಚರಣೆ ಮಾಸದಲ್ಲಿ ಚಿನ್ನದನಾಡಿಗೆ ಭೇಟಿ ನೀಡಿದ ಶ್ರೀಗಳು, ನಮ್ಮ ಪಾವಿತ್ರ್ಯತೆ ಹೆಚ್ಚಿಸಿದ್ದಾರೆ. ದೈವಾಂಶ ಸಂಭೂತರ ಕೃಪಾಶೀರ್ವಾದ ನಮ್ಮಮೇಲಿರಲಿ.
| ಡಾ.ಪ್ರಭಾಕರ ಸಂಗೂರುಮಠ ಪ್ರಧಾನ ವ್ಯವಸ್ಥಾಪಕ ಹಟ್ಟಿಚಿನ್ನದಗಣಿ ಕಂಪನಿ.

Leave a Reply

Your email address will not be published. Required fields are marked *

Back To Top