Tuesday, 16th January 2018  

Vijayavani

ಮಹದಾಯಿ ಉಳಿಸಿಕೊಳ್ಳಲು ಏನು ಬೇಕಾದ್ರೂ ಮಾಡ್ತೀವಿ - ಮತ್ತೆ ಕ್ಯಾತೆ ತೆಗೆದ ಪಾಲ್ಯೇಕರ್​ - ಇತ್ತ ಗೋವಾ ಸಚಿವನ ವಿರುದ್ಧ ಪಾಟೀಲ್ ಕಿಡಿ        ನನ್ನ ವಿರುದ್ಧ ಸುಳ್ಳು ಕೇಸ್​ ದಾಖಲಿಸಲು ಯತ್ನ - ಕೇಂದ್ರ ಸರ್ಕಾರದ ವಿರುದ್ಧ ತೊಗಾಡಿಯಾ ಕಿಡಿ - ಕಣ್ಣೀರಿಟ್ಟು ಅಚ್ಚರಿ ಮೂಡಿಸಿದ ಫೈರ್ ಬ್ರ್ಯಾಂಡ್​        ಆನೆಗಳ ಹಿಂಡಿನಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದ ಮರಿ ಆನೆ - ಮರಿ ಮೇಲೆತ್ತಲು ಅರಣ್ಯ ಇಲಾಖೆ ಹರ ಸಾಹಸ - ತಮಿಳುನಾಡಿನ ರಾಯಕೋಟೆ ಬಳಿ ಘಟನೆ        ಭಾರತ ಪ್ರವಾಸದಲ್ಲಿ ಇಸ್ರೇಲ್​ ಪ್ರಧಾನಿ - ಮುಂಬೈಗೆ ಬಂದಿಳಿದ ಮುಂಬೈ ದಾಳಿ ಸಂತ್ರಸ್ತ ಮೋಶೆ - ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದ ಬಾಲಕ        ತಮಿಳುನಾಡಿನಲ್ಲಿ ಮುಂದುವರಿದ ಪೊಂಗಲ್ ಸಡಗರ - ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಕಿಕ್​ - ಸಿಎಂ, ಡಿಸಿಎಂ ರಿಂದ ಕ್ರೀಡೆ ಉದ್ಘಾಟನೆ       
Breaking News :

ಪರ ಸ್ತ್ರೀಗಾಗಿ ಪತ್ನಿಗೆ ಕೊಲೆ ಬೆದರಿಕೆ ಹಾಕಿದ ಭೂಪ

Friday, 12.01.2018, 9:17 AM       No Comments

<< ಇತ್ತೀಚಿಗೆ ಪರಿಚಯವಾದ ಮಹಿಳೆಯನ್ನು ಕದ್ದಿ ಮುಚ್ಚಿ ಭೇಟಿಯಾಗುತ್ತಿದ್ದ ರೋಹಿತ್​ >>

ಬೆಂಗಳೂರು​: ಪರ ಸ್ತ್ರೀ ಸಹವಾಸ ಮಾಡಿ ತನ್ನ ಸುಖಿ ಸಾಂಸಾರಿಕ ಜೀವನವನ್ನು ಹಾಳು ಮಾಡಿಕೊಂಡು, ತನ್ನ ಪತ್ನಿಗೆ ಕೊಲೆ ಬೆದರಿಕೆ ಹಾಕಿದ ಪತಿರಾಯನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಹೈದರಾಬಾದ್​ ಮೂಲದ ರೋಹಿತ್​ ಎಂಬ ವ್ಯಕ್ತಿ ಈ ರೀತಿ ಎಡವಟ್ಟು ಮಾಡಿಕೊಂಡವರು. ತನ್ನ ತಂದೆಯ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ 7 ವರ್ಷದ ಕೆಳಗೆ ಸ್ನೇಹ ಎಂಬುವರನ್ನು ಮದುವೆಯಾಗಿದ್ದರು. 5 ವರ್ಷದ ಒಂದು ಮಗುವು ಕೂಡ ಇದೆ. ಆದರೆ ಇತ್ತೀಚೆಗೆ ಪರಿಚಯವಾದ ಮಹಿಳೆಯೊಬ್ಬರ ಸಹವಾಸದಿಂದ ತನ್ನ ಜೀವನ ಹಾಳು ಮಾಡಿಕೊಂಡಿದ್ದಾನೆ.

ಅವಂತಿಕಾ ಎಂಬ ಮಹಿಳೆಯ ಪರಿಚಯವಾಗಿದೆ. ಕದ್ದು ಮುಚ್ಚಿ ಅವರನ್ನು ಭೇಟಿ ಕೂಡ ಆಗುತ್ತಿದ್ದರು. ಆದರೆ, ಗುರುವಾರ ಒಮ್ಮಿಂದೊಂಮ್ಮೆಲೆ ಹೆನ್ಸ್​ ರಸ್ತೆಯಲ್ಲಿರುವ ತನ್ನ ಮನೆಗೆ ನುಗ್ಗಿ ತಾಯಿ ಹಾಗೂ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ವಿಚ್ಛೇದನ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಹೆದರಿ ತಾಯಿ ಹಾಗೂ ಪತ್ನಿ ಇಬ್ಬರು ಕಿರುಚಲು ಪ್ರಾರಂಭಿಸಿದ್ದಾರೆ. ಅಕ್ಕ ಪಕ್ಕದ ಮನೆಯವರು ಬಂದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ನಂತರ ಪುಲಕೇಶಿ ನಗರದ ಪೊಲೀಸ್​ ಠಾಣೆಯಲ್ಲಿ ಪತ್ನಿ ಸ್ನೇಹಾ ದೂರು ದಾಖಲಿಸಿದ್ದಾರೆ. ರೋಹಿತ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top