Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ರಾಜಸ್ಥಾನದ ಜೈಪುರದಲ್ಲಿ ಹಪ್ಪಳ ಮಾರಿದ ಹೃತಿಕ್​ ರೋಷನ್​

Wednesday, 21.02.2018, 10:20 AM       No Comments

ಮುಂಬೈ: ಬಾಲಿವುಡ್​ನ ಖ್ಯಾತ ನಟ ಹೃತಿಕ್​ ರೋಷನ್​ ರಾಜಸ್ಥಾನದ ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರಾಟ ಮಾಡಿದ್ದಾರೆ. ಅವರು ಬೀದಿ ಬೀದಿ ಸುತ್ತಿ ಹಪ್ಪಳ ಮಾರಾಟ ಮಾಡಿದರೂ ಸಹ ಅವರನ್ನೂ ಯಾರೂ ಗುರುತು ಹಿಡಿಯಲಿಲ್ಲ.

ಹೌದು ಮೋಸ್ಟ್​ ಹ್ಯಾಂಡಸಮ್​ ನಟ ಎಂದೇ ಖ್ಯಾತಿ ಗಳಿಸಿರುವ ಹೃತಿಕ್​ ರೋಷನ್​ ತಮ್ಮ ಹೊಸ ಚಿತ್ರ ಸೂಪರ್​ 30 ಕ್ಕಾಗಿ ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರಾಟ ಮಾಡಿದ್ದಾರೆ. ಪಾತ್ರಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ಬದಲಿಸಿಕೊಂಡಿರು ಹೃತಿಕ್​ ಸಾಮಾನ್ಯ ಶರ್ಟ್​, ಪ್ಯಾಂಟ್​ ಧರಿಸಿ ಸೈಕಲ್​ ಏರಿ ಥೇಟ್​ ಬೀದಿ ಬದಿ ವ್ಯಾಪಾರಿಗಳಂತೆಯೇ ಹಪ್ಪಳ ಮಾರಾಟ ಮಾಡಿದ್ದಾರೆ.

ಹೃತಿಕ್​ ರೋಷನ್​ ಬಡ ವಿದ್ಯಾರ್ಥಿಗಳಿಗಾಗಿ ಸೂಪರ್​ 30 ಎಂಬ ಕೋಚಿಂಗ್​ ಸೆಂಟರ್​ ನಡೆಸುತ್ತಿರುವ ಆನಂದ್​ ಕುಮಾರ್​ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ಆನಂದ್​ ಕುಮಾರ್​ ಇಂಜಿನಿಯರಿಂಗ್​ ಓದಲು ಬಯಸುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್​ ನೀಡುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಇವರ ಗರಡಿಯಲ್ಲಿ ಪಳಗಿದ ಸುಮಾರು 450 ವಿದ್ಯಾರ್ಥಿಗಳು ಐಐಟಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದಾರೆ.

ವಾರಾಣಸಿಯಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು. ಮುಂದಿನ ಹಂತದ ಚಿತ್ರೀಕರಣ ಬಿಹಾರದ ಪಟನಾದಲ್ಲಿ ನಡೆಯಲಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top