Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಕ್ರಿಕೆಟ್​ ಶಿಶು ಹಾಂಕಾಂಗ್​ ಎದುರು ಟೀಂ ಇಂಡಿಯಾ ಗಳಿಸಿದ್ದು ಸಾಧಾರಣ ಮೊತ್ತ

Tuesday, 18.09.2018, 9:01 PM       No Comments

ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್​ 2018 ಟೂರ್ನಿಯಲ್ಲಿ ಮಂಗಳವಾರ ಭಾರತ ತಂಡ ಶಿಖರ್​ ಧವನ್​ ಅವರ ಅದ್ಭುತ ಶತಕದ ನೆರವಿನ ಹೊರತಾಗಿಯೂ ಹಾಂಕಾಂಗ್​ ವಿರುದ್ಧ ಕೇವಲ 285 ರನ್​ಗಳ ಸಾಧಾರಣ ಮೊತ್ತ ಪೇರಿಸಿದೆ.

ಏಷ್ಯಾಕಪ್​ ಟೂರ್ನಿಯ ‘ಎ’ ವಿಭಾಗದಲ್ಲಿರುವ ಭಾರತ ಮತ್ತು ಹಾಂಕಾಂಗ್​ ಇಂದು ಮುಖಾಮುಖಿಯಾದವು. ಟಾಸ್​ ಸೋತರು ಬ್ಯಾಟಿಂಗ್​ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲಿಗೆ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 45 ರನ್ ಸೇರಿಸಿದರು. ಹೀಗಿರುವಾಗಲೇ 23 ರನ್​ ಗಳಿಸಿ ಆಡುತ್ತಿದ್ದ ರೋಹಿತ್ ಔಟಾದರು.

ಆಗ ಬಂದ ಅಂಬಟ್ಟಿ ರಾಯುಡು ಶಿಖರ್​ ಧವನ್​ಗೆ ಉತ್ತಮ ಸಾತ್​ ನೀಡಿದರು. ಇಬ್ಬರೂ ಜತೆಗೂಡಿ ಅದ್ಭುತ ಇನ್ನಿಂಗ್ಸ್​ ಕಟ್ಟಲಾರಂಭಿಸಿದರು. ಅತ್ಯುತ್ತಮ ಫಾರ್ಮ್​ನಲ್ಲಿದ್ದ ಶಿಖರ್​ ಧವನ್‌ ಅಧ್ಬುತ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರೆ, ಇತ್ತ ಅಂಬಟಿ ರಾಯುಡು ಕೂಡ ಅರ್ಧ ಶತಕ ಗಳಿಸಿ ಮಿಂಚಿದರು. ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ರಾಯುಡು 60 ರನ್​ ಗಳಿಸಿ ಪೆವಿಲಿಯನ್​ ಸೇರಿದರು.

ನಂತರ ತಮ್ಮ ಆಟ ಮುಂದುವರಿಸಿದ ಧವನ್ ಶತಕ ಸಿಡಿಸಿ ಸಂಭ್ರಮಿಸಿದರು. ಶತಕದ ನಂತರ ಮತ್ತಷ್ಟು ಬಿರುಸಿನ ಆಟಕ್ಕೆ ಒತ್ತು ನೀಡಿದ ಅವರು, ರನ್ ಕಲೆ ಹಾಕುವ ಭರದಲ್ಲಿ ವಿಕೆಟ್ ಒಪ್ಪಿಸಿದರು. 120 ಎಸೆತಗಳನ್ನು ಎದುರಿಸಿದ ಧವನ್ 15 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 127 ರನ್ ಗಳಿಸಿದರು.

ನಂತರ ದಿನೇಶ್​ ಕಾರ್ತಿಕ್​ 33 ರನ್‌ ಸಿಡಿಸಿ ಔಟಾದರು. ಆದರೆ, ತೀವ್ರ ನಿರಾಸೆ ಮೂಡಿಸಿದ್ದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ. ಮೂರು ಎಸೆತಗಳನ್ನಷ್ಟೇ ಎದುರಿಸಿದ ಧೋನಿ ರನ್​ ಗಳಿಕೆಯೇ ಇಲ್ಲದೇ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರು.

ಇದಾದ ಬಳಿಕ ಜಾದವ್​ 28, ಭುವನೇಶ್ವರ್​ ಕುಮಾರ್​ 9 ಗಳಿಸಲಷ್ಟೇ ಶಕ್ತರಾದರು. ಶಾರ್ದೂಲ್​ ಠಾಕೂರ್​, ಕುಲದೀಪ್​ ಯಾದವ್​ ರನ್​ ಗಳಿಸದೇ ಔಟಾದರು.
ಅಂತಿಮವಾಗಿ ಭಾರತ ತಂಡ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ ಕೇವಲ 285 ರನ್​ಗಳನ್ನಷ್ಟೇ ಗಳಿಸಿತು. ಕ್ರಿಕೆಟ್​ ಶಿಶುಗಳ ಮೇಲೆ ಅಭ್ಯಾಸ ಎಂದೇ ಬಿಂಬಿತವಾಗಿದ್ದ ಈ ಪಂದ್ಯದಲ್ಲಿ ಭಾರತ ನಿರೀಕ್ಷಿತ ಹೋರಾಟ ನಡೆಸದೇ ಸಾಮಾನ್ಯ ಮೊತ್ತಕ್ಕೆ ಸೀಮಿತವಾಯಿತು.

Leave a Reply

Your email address will not be published. Required fields are marked *

Back To Top