Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ಬಿಳಿ ಕೂದಲ ತಡೆಗೆ ಮನೆ ಔಷಧಗಳು

Tuesday, 20.03.2018, 3:03 AM       No Comments

|ಟಿ.ಯು. ವಿನುತಾ, ಸೌಂದರ್ಯ ತಜ್ಞೆ

ಇತ್ತೀಚೆಗೆ ಕೇಶರಾಶಿಯ ಬಣ್ಣ ಬದಲಿಸಿಕೊಳ್ಳುವುದು ಒಂದು ಫ್ಯಾಷನ್. ವಿವಿಧ ಬಣ್ಣಗಳನ್ನು ಕೇಶರಾಶಿಗೆ ಅನ್ವಯಿಸಿಕೊಳ್ಳುವುದರ ಮೂಲಕ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ನೈಸರ್ಗಿಕವಾಗಿ ಕೂದಲು ಬಿಳಿ ಬಣ್ಣಕ್ಕೆ ತಿರುಗಿದರೆ ಅದನ್ನು ಯಾರೂ ಇಷ್ಟಪಡುವುದಿಲ್ಲ. ವಯಸ್ಸಾದ ಮೇಲೆ ಕೂದಲ ಬಿಳಿ ಬಣ್ಣಕ್ಕೆ ಬರುವುದು ಸಹಜ. ಆದರೆ, ಸಾಮಾನ್ಯವಾಗಿ ಭಾರತೀಯರು ಕೂದಲು ಬಿಳಿಯಾಗುವುದನ್ನು ಇಷ್ಟಪಡುವುದಿಲ್ಲ. ಅದು ಅಕಾಲಿಕವಾಗಿ ಉಂಟಾಗಿರಬಹುದು ಅಥವಾ ವಯಸ್ಸಾದ ಸಮಯದಲ್ಲಿ ನೈಸರ್ಗಿಕವಾಗಿಯೇ ಬಿಳಿ ಬಣ್ಣಕ್ಕೆ ಬರುವುದೇ ಆಗಿರಬಹುದು. ಕೂದಲು ಬಿಳಿಯಾದರೆ ಮನಸ್ಸಿಗೆಲ್ಲ ಕಸಿವಿಸಿ ಆಗುತ್ತದೆ.

ಹಿಂದಿನ ಕಾಲದಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆ ಎಂದರೆ ಅದೊಂದು ವಯಸ್ಸಾದ ಸಂಕೇತವಾಗಿರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಪೋಷಕಾಂಶದ ಕೊರತೆ ಹಾಗೂ ಅನುಚಿತ ರೀತಿಯ ಪೋಷಣೆಯಿಂದಾಗಿ ಕೂದಲು ಬಹುಬೇಗ ಅಂದರೆ, ಚಿಕ್ಕವಯಸ್ಸಿನಲ್ಲಿಯೇ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಕೆಲವು ಮಕ್ಕಳಲ್ಲೂ ಸಹ ಬಿಳಿ ಬಣ್ಣದ ಕೂದಲು ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯಕರ ಸಂಗತಿಯೂ ಹೌದು. ಇಂತಹ ಒಂದು ಸಮಸ್ಯೆಗೆ ಅನೇಕ ಪರಿಹಾರಗಳಿವೆ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣವನ್ನು ಬಳಸಿ ಕೂದಲನ್ನು ಕಪ್ಪಾಗಿಸಬಹುದು. ಆದರೆ, ಪುನಃ ಬಣ್ಣ ಬದಲಾವಣೆ ಆಗೇ ಆಗುತ್ತದೆ. ಹೀಗಾಗಿ, ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಕೇಶರಾಶಿಯ ಆರೈಕೆ ಮಾಡಿದರೆ ಅಕಾಲಿಕವಾಗಿ ಉಂಟಾಗುವ ಬಿಳಿ ಬಣ್ಣವನ್ನು ತಡೆಯಬಹುದು.

ನೈಸರ್ಗಿಕ ಉತ್ಪನ್ನಗಳ ಆಯ್ಕೆ ಹಾಗೂ

ಬಳಕೆ ವಿಧಾನಗಳು

ನೆಲ್ಲಿಕಾಯಿ

ನೆಲ್ಲಿಕಾಯಿ ಆಂಟಿ ಆಕ್ಸಿಡಂಟ್​ಗಳು ಮತ್ತು ವಿಟಮಿನ್ ಸಿಯನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ವಯಸ್ಸಾಗುವಿಕೆಯ ವಿರುದ್ಧ ಹೋರಾಡುತ್ತವೆ. ಇದರ ಸೇವನೆ ಹಾಗೂ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಅನ್ವಯಿಸಿಕೊಳ್ಳುವುದರಿಂದ ಕೂದಲು ಕಪ್ಪಾಗಿಯೇ ಇರುವಂತೆ ಕಾಯ್ದುಕೊಳ್ಳಬಹುದು. ನೆಲ್ಲಿಕಾಯಿಯ ಕೆಲವು ತುಂಡು ಅಥವಾ ಚೂರುಗಳನ್ನು ತೆಂಗಿನ ಎಣ್ಣೆಯಲ್ಲಿ ಸೇರಿಸಿ ಬೇಯಿಸಬೇಕು. ಬಳಿಕ, ಎಣ್ಣೆಯನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಬೇಕು. ಈ ಮಿಶ್ರಣದ ಎಣ್ಣೆಯನ್ನು ವಾರಕ್ಕೊಮ್ಮೆ ಅನ್ವಯಿಸಿ. ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಮದರಂಗಿ ಅಥವಾ ಗೋರಂಟಿ

ಇದು ನೈಸರ್ಗಿಕ ಕೂದಲ ಬಣ್ಣ. ಇದು ಕೂದಲ ಬಣ್ಣವನ್ನು ಕಾಪಾಡುವುದರ ಜತೆಗೆ, ಕೂದಲನ್ನು ಬಲಪಡಿಸುತ್ತದೆ. ಅಲ್ಲದೆ, ಆರೋಗ್ಯಕರವಾಗಿ ಇರುವಂತೆ ಮಾಡುತ್ತದೆ. ಹರಳೆಣ್ಣ್ಣೆ, ನಿಂಬೆ ರಸ, ಮದರಂಗಿ ಪುಡಿಯನ್ನು ಸ್ವಲ್ಪ ಮಿಶ್ರಗೊಳಿಸಿ. ಇದನ್ನು ಕೂದಲಿಗೆ ಅನ್ವಯಿಸಿ. 2 ಗಂಟೆಗಳ ಕಾಲ ಹೀರಿಕೊಳ್ಳಲು ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿ ವಾರಕ್ಕೊಮ್ಮೆ ಈ ಕ್ರಮವನ್ನು ಪಾಲಿಸಿ.

ತೆಂಗಿನ ಎಣ್ಣೆ

ಕೂದಲ ಅನೇಕ ಸಮಸ್ಯೆಗಳಿಗೆ ದಿವ್ಯ ಔಷಧ ತೆಂಗಿನ ಎಣ್ಣೆ. ಸೂಕ್ಷ್ಮಗ್ರಾಹಿ ಎಣ್ಣೆಯಾದ ತೆಂಗಿನ ಎಣ್ಣೆಯನ್ನು ನೆತ್ತಿ ಮತ್ತು ಕೂದಲುಗಳ ಬುಡಕ್ಕೆ ಅನ್ವಯಿಸುವುದರಿಂದ ಅನೇಕ ಸಮಸ್ಯೆ ನಿವಾರಣೆ ಜತೆಗೆ, ಬಣ್ಣ ಬದಲಾವಣೆಯನ್ನು ನಿಯಂತ್ರಿಸಬಹುದು.

ಕರಿಬೇವಿನ ಎಲೆ

ಕರಿಬೇವಿನ ಎಲೆಯು ಕೂದಲ ರಕ್ಷಣೆ ಹಾಗೂ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿ ಕರಿಬೇವಿನ ಎಲೆಯನ್ನು ಸೇರಿಸಿ ಕುದಿಸಿ. ನಂತರ ತೈಲವನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಿ. ತಲೆಸ್ನಾನ ಮಾಡುವ ಮೊದಲು ನೆತ್ತಿ ಕೂದಲಿಗೆ ಅನ್ವಯಿಸಿ ಒಂದು ಗಂಟೆ ಕಾಲ ಬಿಡಿ. ಬಳಿಕ, ತೊಳೆಯಿರಿ. ಈ ವಿಧಾನದಿಂದ ಉತ್ತಮ ಕೇಶವೃದ್ಧಿ ಹಾಗೂ ಬಣ್ಣದ ರಕ್ಷಣೆ ಮಾಡಿಕೊಳ್ಳಬಹುದು.

ಈರುಳ್ಳಿ

ಈರುಳ್ಳಿ ಕ್ಯಾಟಲಿಸಿಸ್ ಎಂಬ ಕಿಣ್ವಗಳಿಂದ ಸಮೃದ್ಧವಾಗಿದೆ. ಇದು ಕೂದಲಿನ ಬಣ್ಣ ಬದಲಾವಣೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಕೂದಲು ಬಣ್ಣ ಕಳೆದುಕೊಳ್ಳುವುದಕ್ಕೆ ಮುಂಚೆಯೇ ಈರುಳ್ಳಿ ರಸದ ಆರೈಕೆ ಮಾಡುವುದು ಸೂಕ್ತ. ಇದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು. ತಲೆಸ್ನಾನ ಮಾಡುವ ಮೊದಲು ನಿಯಮಿತವಾಗಿ ಈರುಳ್ಳಿ ರಸವನ್ನು ನೆತ್ತಿಗೆ ಅನ್ವಯಿಸುವುದರಿಂದ ಕೂದಲ ಬಣ್ಣ ಬದಲಾಗದು. ಜತೆಗೆ, ಆರೋಗ್ಯದಿಂದ ಕೂಡಿರುವುದು.

ಕಾಫಿ

ಚಹಾದಂತೆ ಕಾಫಿಯೂ ಕೂದಲ ರಕ್ಷಣೆ ಮಾಡುತ್ತದೆ. ನೀರಿನಲ್ಲಿ ಕಾಫಿ ಪುಡಿಯನ್ನು ಸೇರಿಸಿ, ಕುದಿಸಿ. ಬಳಿಕ, ನೀರನ್ನು ಸೋಸಿ ನೆತ್ತಿ ಹಾಗೂ ಕೇಶರಾಶಿಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ಬಳಿಕ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ. ಈ ವಿಧಾನದಿಂದಲೂ ಕೂದಲನ್ನು ಸಂರಕ್ಷಿಸಬಹುದು.

ರೋಸ್ಮರಿ ಮತ್ತು ಸೇಜ್:

ಈ ಗಿಡಮೂಲಿಕೆಗಳು ನಮ್ಮ ಕೂದಲಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತವೆ. ಅಲ್ಲದೆ, ಅಕಾಲಿಕವಾಗಿ ಉಂಟಾಗುವ ಬಣ್ಣ ಬದಲಾವಣೆಯನ್ನು ನಿಯಂತ್ರಿಸುತ್ತದೆ. ಈ ಗಿಡಮೂಲಿಕೆಯನ್ನು ಒಟ್ಟಿಗೆ ಸೇರಿಸಿ ಕುದಿಸಿ. ಅದರ ನೀರನ್ನು ತಣಿಸಿ ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ಬಳಿಕ ನೀರಿನಿಂದ ತೊಳೆಯಿರಿ.

ಕಪ್ಪು ಚಹಾ

ನಿಮ್ಮ ಕೂದಲು ಗಾಢ ಬಣ್ಣ ಹೊಂದಲು ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುವ ಸರಳ ಉಪಾಯ ಕಪು್ಪಚಹಾ. ನೀರಿನಲ್ಲಿ ಕೆಲವು ಚಹಾ ಎಲೆಯನ್ನು ಕುದಿಸಿ. ಚೆನ್ನಾಗಿ ಕುದಿ ಬಂದು ಬಣ್ಣ ಬಿಟ್ಟ ಮೇಲೆ ತಣ್ಣಗಾಗಿಸಿ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ನಿತ್ಯವೂ ಈ ಪ್ರಕ್ರಿಯೆ ಮುಂದುವರಿಸಿ.

Leave a Reply

Your email address will not be published. Required fields are marked *

Back To Top