ವಿಜಯಪುರ: ರಾಜ್ಯದೆಲ್ಲೆಡೆ ಎಡಬಿಡದೆ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಹಲವು ಅವಾಂತರ ಸೃಷ್ಟಿಯಾಗಿದ್ದು, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ.
ಕಳೆದೊಂದು ವಾರದಿಂದ ಸುರಿದ ಮಳೆಗೆ ಶಿಥಿಲಗೊಂಡಿದ್ದ ನೆರೆಮನೆಯ ಗೋಡೆ ಬೆಳಗಿನ ಜಾವ ಏಕಾಏಕಿ ಕುಸಿದುಬಿದ್ದಿದೆ. ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕೆಳಗಡೆ ಸಿಲುಕಿ ತಾಯಿ ಮಗಳು ಶಂಕ್ರಮ್ಮ ರಾಮಚಂದ್ರಪ್ಪ ಔರಾದಿ, ಮಹಾದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.(ದಿಗ್ವಿಜಯ ನ್ಯೂಸ್)