Thursday, 22nd March 2018  

Vijayavani

ಐಟಿ ದಾಳಿ ವೇಳೆ ದಾಖಲೆ ಹರಿದ ಆರೋಪ - ಐಟಿ ಕೋರ್ಟ್‌ ತೀರ್ಪಿಗೆ ಕ್ಷಣಗಣನೆ- ಸಚಿವ ಡಿಕೆಶಿಗೆ ಸಿಗುತ್ತಾ ಜಾಮೀನು        ದೇವೇಗೌಡರಿಗೆ ವಯಸ್ಸಾಗಿದೆ ಅನ್ನೋ ಸಿಎಂ ಹೇಳಿಕೆ ವಿಚಾರ - ಸಿದ್ದರಾಮಯ್ಯಗೆ ಎಚ್‌ಡಿಡಿ ತಿರುಗೇಟು - ರಾಜಕೀಯ ಅಖಾಡಕ್ಕೆ ಆಮಂತ್ರಿಸಿದ ಮಾಜಿ ಪ್ರಧಾನಿ        ಜಲಸಂಪನ್ಮೂಲ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಸಚಿವ ಎಂ.ಬಿ.ಪಾಟೀಲ್‌ಗೆ ೨೭ ಕೋಟಿ ಕಿಕ್​ಬ್ಯಾಕ್ - ಕೆಲವೊತ್ತಲ್ಲೇ ಎಂ.ಬಿ ಪಾಟೀಲರಿಂದ ಸುದ್ದಿಗೊಷ್ಟಿ        ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ಶಾಸಕ - ಚಿಮ್ಮನಕಟ್ಟಿ ಮನೆ ಎದ್ರು ಮಹಿಳೆ ಆತ್ಮಹತ್ಯೆ - ಬದಾಮಿ ಎಂಎಲ್‌ಎಗೆ ಸಂಕಷ್ಟ        ಕಾವೇರಿ ನದಿ ನೀರು ಹಂಚಿಕೆ ವಿವಾದ - ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಕೇರಳ ಅರ್ಜಿ - ತೀರ್ಪು ಮರುಪರಿಶೀಲನೆಗೆ ಮನವಿ       
Breaking News

ಪರೇಶ್​ ಮೇಸ್ತಾ ಸಾವಿನ ಪ್ರಕರಣ ಸಿಬಿಐ ತನಿಖೆಗೆ

Wednesday, 13.12.2017, 8:16 PM       No Comments

<< ಕುಟುಂಬಸ್ಥರ ಮನವಿ ಮೇರೆಗೆ ಸಿಬಿಐ ತನಿಖೆಗೆ ವಹಿಸಿದ ಗೃಹ ಸಚಿವರು >>

ಬೆಂಗಳೂರು: ಹಿಂದು ಕಾರ್ಯಕರ್ತ ಪರೇಶ್​ ಮೇಸ್ತಾ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬುಧವಾರ ತಿಳಿಸಿದ್ದಾರೆ.

ಬಿಜೆಪಿ ಪ್ರತಿಭಟನೆಯಿಂದ ಸಿಬಿಐ ತನಿಖೆಗೆ ನೀಡಿಲ್ಲ. ಕುಟುಂಬಸ್ಥರ ಮನವಿ ಮೇರೆಗೆ ಸಿಬಿಐ ತನಿಖೆಗೆ ವಹಿಸಲಾಗಿದೆ. ಯಾವಾಗ ಬೇಕಾದರೂ ತನಿಖೆ ಮಾಡಲಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಇದಕ್ಕೂ ಮೊದಲು ಸಿಬಿಐ ತನಿಖೆಗೆ ಒತ್ತಾಯಿಸುವಂತೆ ಹೋರಾಡಲು ಬಿಜೆಪಿ ಸಜ್ಜಾಗಿತ್ತು. ಪರೇಶ್​ ಮೇಸ್ತಾ ತಂದೆ ಕಮಲಾಕರ್ ಕೂಡ ಮಗನ ಕೊಲೆಯಾಗಿದ್ದು, ಪೊಲೀಸರ ಮೇಲೆ ನಂಬಿಕೆಯಿಲ್ಲ. ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ಗೆ ವಹಿಸಬೇಕೆಂದು ಆಗ್ರಹಿಸಿದ್ದರು.

ಮೇಸ್ತಾ ಅನುಮಾನಾಸ್ಪದ ಸಾವು ಖಂಡಿಸಿ ಶಿರಸಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಹಿಂದು ಸಂಘಟನೆಗಳು ಮಂಗಳವಾರ ನಡೆಸಿದ ಪ್ರತಿಭಟನೆ ವೇಳೆ ಕಲ್ಲು ತೂರಾಟವಾಗಿ ವಾತಾವರಣ ಪ್ರಕ್ಷುಬ್ಧವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿ ಅಶ್ರುವಾಯು ಸಿಡಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅದಕ್ಕೂ ಮುನ್ನ ಐಜಿಪಿ ಹೇಮಂತ್​ ನಿಂಬಾಳ್ಕರ್ ಅವರ ಕಾರಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top