Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಫ್ರೆಂಚ್‌ ಮಾಜಿ ಅಧ್ಯಕ್ಷ ಹೇಳಿಕೆಗೆ ಮೋದಿಯೇಕೆ ಮೌನವಾಗಿದ್ದಾರೆ: ರಾಹುಲ್‌ ಗಾಂಧಿ

Saturday, 22.09.2018, 6:46 PM       No Comments

ನವದೆಹಲಿ: ರಫೆಲ್‌ ಡೀಲ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಅಲ್ಲದೆ, ಮೋದಿ ತಮ್ಮ ಮೌನ ಮುರಿಯುವಂತೆ ಒತ್ತಾಯಿಸಿದ್ದಾರೆ.

ಫ್ರೆಂಚ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಭಾರತದ ಪ್ರಧಾನಿ ಕಳ್ಳ ಎಂದು ಕರೆದಿದ್ದಾರೆ. ಈಗ ಪ್ರಧಾನಿ ಮೋದಿ ಅವರು ರಫೆಲ್‌ ಡೀಲ್‌ ಭ್ರಷ್ಟಾಚಾರದ ಬಗೆಗಿನ ತಮ್ಮ ಮೌನವನ್ನು ಮುರಿಯಬೇಕು. ಸದ್ಯಕ್ಕೆ ಪ್ರಧಾನಿ ಮೋದಿಯವರ ಭ್ರಷ್ಟಾಚಾರ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌, ಫ್ರೆಂಚ್‌ ಮಾಜಿ ಅಧ್ಯಕ್ಷರೇ ಭಾರತದ ಪ್ರಧಾನಿಯನ್ನು ಕಳ್ಳ ಎಂದಿದ್ದಾರೆ. ಹೀಗಿದ್ದರೂ ಮೋದಿ ಅವರು ಮೌನವಾಗಿರುವುದರ ಹಿಂದಿನ ಉದ್ದೇಶವಾದರು ಏನು? ಇದುವರೆಗೂ ಅವರು ಒಂದು ಮಾತನ್ನು ಆಡಿಲ್ಲ. ಈಗ ಮೋದಿ ಅವರ ಮುಂದಿರುವುದು ಎರಡೇ ದಾರಿ. ಒಂದು ಹೊಲಾಂಡೆ ಅವರ ಹೇಳಿಕೆಯು ಸುಳ್ಳು ಎಂದು ಹೇಳುವುದು. ಎರಡನೆಯದು ಸತ್ಯ ಏನೆಂದು ಬಾಯಿ ಬಿಡುವುದು ಎಂದು ಕಿಡಿಕಾರಿದ್ದಾರೆ.

ಫ್ರೆಂಚ್ ಸರ್ಕಾರಕ್ಕೆ ಆಯ್ಕೆ ಇರಲಿಲ್ಲ

ಇನ್ನು ನಿನ್ನೆಯಷ್ಟೆ ಫ್ರಾಂಕೋಯಿಸ್ ಹೊಲಾಂಡೆ ಅವರು ಫ್ರೆಂಚ್‌ ಇನ್ವೆಸ್ಟಿಗೇಷನ್‌ ಜರ್ನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತ ಸರ್ಕಾರವೇ ಸ್ಥಳೀಯ ಪಾಲುದಾರಿಕೆ ಕಂಪನಿಯಾಗಿ ಅನಿಲ್ ಅಂಬಾನಿ ಮಾಲಿಕತ್ವದ ‘ರಿಲಯನ್ಸ್ ಡಿಫೆನ್ಸ್ ’ನ್ನು ಮಾತ್ರ ಶಿಫಾರಸು ಮಾಡಿತ್ತು. ಹಾಗಾಗಿ ಫ್ರೆಂಚ್‌ ಸರ್ಕಾರದ ಎದುರು ರಿಲಯನ್ಸ್‌ ಹೊರತುಪಡಿಸಿ ಯಾವುದೇ ಆಯ್ಕೆ ಇರಲಿಲ್ಲ ಎಂದು ಹೇಳಿದ್ದರು. ಇನ್ನು ಇದೇ ವಿಚಾರವನ್ನು ಹೊಲಾಂಡೆ ಅವರ ಕಚೇರಿಯು ಕೂಡ ಸ್ಪಷ್ಟಪಡಿಸಿದೆ.

ಪ್ರಧಾನಿಗೆ ರಕ್ಷಣಾ ಸಚಿವರ ರಕ್ಷಣೆ

ಮೋದಿಯನ್ನು ರಕ್ಷಿಸಲು ಎಲ್ಲ ರಕ್ಷಣಾ ಮಂತ್ರಿಗಳು ನೆರವಾಗುತ್ತಿದ್ದಾರೆ ಎಂದು ದೂಷಿಸಿದ್ದ ರಾಹುಲ್‌, ರಫೆಲ್‌ ಡೀಲ್‌ ಅವ್ಯವಹಾರ ಕುರಿತಂತೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಿ ತನಿಖೆಗೆ ಒತ್ತಾಯಿಸಿದ್ದರು.

ಈ ಸರ್ಕಾರದ ಪ್ರತಿ ರಕ್ಷಣಾ ಸಚಿವರು ಕೂಡ ಏಕೆ ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಈಗ ಅರ್ಥವಾಗಿದೆ. ಏಕೆಂದರೆ ಅವರೆಲ್ಲರೂ ಪ್ರಧಾನಿ ಮೋದಿ ಅವರನ್ನು ರಕ್ಷಿಸುತ್ತಿದ್ದಾರೆ. ಜೆಪಿಸಿಯ ತನಿಖೆಗೆ ಹೊಲಾಂಡೆ ಅವರನ್ನು ಕೂಡ ಸಾಕ್ಷ್ಯವಾಗಿ ಪರಿಗಣಿಸಿ ಕರೆಯಬಹುದು ಎಂದು ತಿಳಿಸಿದ್ದಾರೆ.

ಅನಿಲ್ ಅಂಬಾನಿಯನ್ನು ಸಂಕಷ್ಟದಿಂದ ಪಾರು ಮಾಡಲೆಂದೇ ಪ್ರಧಾನಿ ಮೋದಿಯವರು ಅನಿಲ್‌ ಅಂಬಾನಿಯೊಂದಿಗೆ 30 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ರಾಹುಲ್​ ಗಾಂಧಿ, ಅನಿಲ್‌ ಅಂಬಾನಿ 45 ಸಾವಿರ ಕೋಟಿ. ರೂ ಸಾಲವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ರಫೆಲ್‌ ಡೀಲ್‌ನಲ್ಲಿ ಸರ್ಕಾರದ ಪಾತ್ರ ಇಲ್ಲ

ರಾಹುಲ್‌ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ರಕ್ಷಣಾ ಸಚಿವಾಲಯ, ರಫೆಲ್‌ ಡೀಲ್‌ನಲ್ಲಿ ಭಾರತದ ಪಾಲುದಾರ ಕಂಪನಿಯ ಆಯ್ಕೆಯಲ್ಲಿ ಭಾರತ ಸರ್ಕಾರದ ಪಾತ್ರ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಹೊಲಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವಾಲಯ, ಆ ಹೇಳಿಕೆಯು ಯಾವ ಸಂದರ್ಭದಲ್ಲಿ ಬಂದಿದೆ ಎನ್ನುವುದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಿದೆ. ಫ್ರೆಂಚ್‌ ಮಾಧ್ಯಮಗಳು ಮಾಜಿ ಅಧ್ಯಕ್ಷರಿಗೆ ಹತ್ತಿರವಿರುವವರನ್ನು ಗಮನದಲ್ಲಿಟ್ಟುಕೊಂಡು ವಿವಾದದ ಅಂಶಗಳನ್ನು ಹುಟ್ಟುಹಾಕಿವೆ. ಈ ಹೇಳಿಕೆಯನ್ನಿಟ್ಟುಕೊಂಡು ಅನಗತ್ಯ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top