Friday, 21st September 2018  

Vijayavani

Breaking News

ಸನಾತನ ಧರ್ಮ ನಿನ್ನೆ ಇಂದು ನಾಳೆ

Thursday, 14.06.2018, 3:05 AM       No Comments

ವಿಶಾಲ ಮನೋಭಾವ, ವೈವಿಧ್ಯಮಯ ಆಚರಣೆಗಳು, ಬಹುದೇವತಾರಾಧನೆ ಇವೇ ಮೊದಲಾದ ವೈಶಿಷ್ಟ್ಯಳನ್ನು ಒಳಗೊಂಡಿದ್ದು ಹಿಂದುಧರ್ಮ. ಸನಾತನ ಧರ್ಮ ಎಂದೇ ಕರೆಯಲ್ಪಡುವ ಈ ಧರ್ಮದ ಏರಿಳಿತಗಳ ಬಗೆಗಿನ ಕಿರು ಅವಲೋಕನ ಇಲ್ಲಿದೆ.

|ಚೈತನ್ಯ ಮಜಲುಕೋಡಿ

ಸುಮಾರು ಸಾವಿರ ವರ್ಷಗಳ ಹಿಂದೆ ಪರಕೀಯರ ದಾಳಿಯಿಂದ ಭಾರತವು ಆಂತರಿಕ ಕುಸಿತ ಕಾಣಲು ಮೊದಲಾದರೂ, ನಡುನಡುವೆ ರಾಣಾ ಪ್ರತಾಪಸಿಂಹ, ಕೃಷ್ಣದೇವರಾಯ, ಶಿವಾಜಿ, ಮದಕರಿ ನಾಯಕರಂತಹ ಸಾವಿರಾರು ವೀರರ ಕ್ಷಾತ್ರತೇಜಸ್ಸಿನಿಂದ ಪುನಃ ಪುನಃ ಪುಟಿದೆದ್ದು ನಿಂತಿದೆ.

ಈ ಹಿಂದೆ ಭಾರತವರ್ಷದ ಧರ್ಮವನ್ನು ಯಾವ ಹೆಸರಿನಿಂದಲೂ ಕರೆಯುತ್ತಿರಲಿಲ್ಲ. ನಮ್ಮ ಆಚರಣೆಯೇ ಧರ್ಮವಾಗಿತ್ತು. ಆಚಾರಃ ಪರಮೋ ಧರ್ಮಃ ಎಂಬುದು ನಡತೆಯ ನುಡಿಯಾಗಿ ನಿಂತಿತ್ತು. ನಂತರ ಕೆಲವರು ಸನಾತನ ಧರ್ಮ ಎಂದರು, ಅನ್ಯದೇಶದವರು ದಾಳಿ ಮಾಡಿದಾಗ ಸಿಂಧೂದೇಶದ ಧರ್ಮ ಎಂದರು, ಕಡೆಗೆ ಹಿಂದೂಧರ್ಮ ಎಂಬುದು ನಿಂತಿತು.

ಎರಡು ಸಾವಿರ ವರ್ಷಗಳಷ್ಟು ಹಿಂದಿನಿಂದಲೇ ನಮ್ಮಲ್ಲಿ ಆಂತರಿಕ ಬದಲಾವಣೆಗಳಿಗೆ ಜನತೆ ತೆರೆದುಕೊಂಡಿದೆ. ಜೈನ-ಬೌದ್ಧಧರ್ಮಗಳು ಮೊದಲ ಸುಧಾರಿತ ರೂಪಗಳಾಗಿದರೆ, ಆಚಾರ್ಯತ್ರಯರ ಪರಂಪರೆಯಿಂದ ಪ್ರವಚನ ಪ್ರಾಮಾಣ್ಯಗಳು ರೂಪುಗೊಂಡು, ಧಾರ್ವಿುಕಸ್ವಭಾವವು ಸಮಾಜದ ಎಲ್ಲೆಡೆ ವ್ಯಾಪಿಸಿತು. ಬಸವಾದಿ ಶರಣರ ಉಪಾಸನೆಯ ಸುಧಾರಿತ ರೂಪ ನಂತರ ದೊರೆತರೆ, ಸಿಖ್ಖರೆಂದು ಕರೆದುಕೊಳ್ಳುವುದರಿಂದ ನೆಲೆ ಪಡೆದ ಕಟ್ಟುನಿಟ್ಟಾದ ಜೀವನಪದ್ಧತಿಗಳು ಸಮಾಜಕ್ಕೆ ಹೊಸ ದೃಷ್ಟಿಯನ್ನು ನೀಡಿದವು. ಇವು ಉದಾಹರಣೆಗಳಷ್ಟೇ. ಜ್ಞಾನದೇವ-ಚೈತನ್ಯ ಮಹಾಪ್ರಭುಗಳಂತಹ ಸಂತ ಮಹಾಂತರಿಂದ ಧಾರ್ವಿುಕ ನಡಾವಳಿಗಳು ತೀಕ್ಷ ್ಣವಾಗಿ ನಿರ್ಷRಸಲ್ಪಟ್ಟವು.

ಪರಕೀಯರ ಆಕ್ರಮಣ, ದೌರ್ಜನ್ಯ, ಮತಾಂತರ ಮುಂತಾದುವುಗಳಿಂದ ನಲುಗಿದ ದೇಶಿ ಸಂಸ್ಕ ೃಯು, ಆಂತರಿಕ ಹೃದಯವೈಶಾಲ್ಯದ ಕೊರತೆಯಿಂದ, ಶಾಸ್ತ್ರಚೌಕಟ್ಟಿನ ಬಿಕ್ಕಟ್ಟಿನಿಂದ ಸೊರಗಿತು. ವಿದ್ಯಾರಣ್ಯರು, ಸಮರ್ಥ ರಾಮದಾಸರಂತಹ ಧೀರ ಮಾರ್ಗದರ್ಶಕರಿಂದ ಮತ್ತೆ ಧಾರ್ವಿುಕ ಸುಧಾರಣೆಗಳು ನಡೆದವು. ಕ್ಷಾತ್ರಧರ್ಮವು ಒಡಮೂಡಿ ಆತ್ಮಗೌರವದಿಂದ ಬದುಕುವುದು ಸಾಧ್ಯವಾಯಿತು. ಕೃಷ್ಣದೇವರಾಯನ ಕಾಲಕ್ಕೆ ನಮ್ಮ ನೆಲಕ್ಕೆ ಕಾಲಿಟ್ಟ ಯುರೋಪಿಯನ್ನರ ವ್ಯಾಪಾರದ ಜೊತೆಗೆ ಆಗಮಿಸಿದ ಕ್ರೈಸ್ತ ಮಿಷನರಿಗಳು ಮತಾಂತರವನ್ನು ಮೆಲ್ಲಗೆ ಮುಂದಿಟ್ಟು ನಂತರ ಅದನ್ನು ಅವ್ಯಾಹತವಾಗಿ ಮುಂದುವರಿಸಿದರು. ಇಂದಿಗೂ ಅವರ ಕೃತ್ರಿಮ ಉಪಕಾರದ ಮುಖವಾಡವನ್ನು ಹೊದ್ದ ಮತಾಂತರ ಮಾಯೆಗಳು ಹೊಸ ಹೊಸ ರೂಪ ಪಡೆದು ಮುನ್ನುಗ್ಗುತ್ತಲೇ ಇವೆ.

ರಾಜಾರಾಮ ಮೋಹನರಾಯ್, ಸ್ವಾಮಿ ದಯಾನಂದ ಸರಸ್ವತಿಗಳಂತಹ ಮಹಾನ್ ಚೇತನರು ಆಂತರಿಕವಾಗಿ ಸರ್ವರಲ್ಲಿ ಸಮಭಾವವನ್ನು ಮೂಡಿಸಲು, ಅಜ್ಞಾನವನ್ನು ತೊಡೆಯಲು, ಬಹುಕಾಲದಿಂದ ನೆಲೆ ನಿಂತ ಮೌಢ್ಯ ಆಲೋಚನೆ ಆಚರಣೆಗಳಿಗೆ ಅಂತ್ಯ ಹಾಡಿದರು. ಅನಂತರ ಸ್ವಾತಂತ್ರ್ಯ ಸಂಗ್ರಾಮದ ಪರ್ಯಾಯವಾಗಿ ನಡೆದ ಗಾಂಧಿ ಅಂಬೇಡ್ಕರ್​ರಂತಹ ಮಹಾತ್ಮರು ನಡೆಸಿದ ಧರ್ಮಜಾಗೃತಿ ಚಳವಳಿಯ ಪ್ರಭಾವವು ಭಾರತೀಯ ಸಂವಿಧಾನಕ್ಕೂ ಅಡಿಯಿಟ್ಟು, ಅದು ಹಿಂದೂಧರ್ಮದ ಪೂರ್ವಸೂರಿಗಳ ಆಲೋಚನೆಯಿಂದ ಅತ್ಯುತ್ತಮವಾದುದನ್ನು ಪಡೆದು, ಧಾರ್ವಿುಕ ಚೌಕಟ್ಟಿನಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಮಾನತೆಗಳು ಅಡಕವಾಗಿಸುವ ಆಶಯಕ್ಕೆ ಬದ್ಧವಾಯಿತು. ಸ್ವಾತಂತ್ರ್ಯಾನಂತರವೂ ಧರ್ಮದ ಬೇರುಗಳನ್ನು ಭದ್ರಪಡಿಸುವ ಕಾರ್ಯಗಳು ಹಲವು ಸಮಾಜ ಸುಧಾರಕರಿಂದ ನಡೆಯುತ್ತಲೇ ಇವೆ.

ಸಾವಿರಾರು ವರ್ಷಗಳ ಸಮೃದ್ಧ ಧಾರ್ವಿುಕ ನೀತಿನಿರೂಪಣೆಗಳಿಂದ ಅದರ ಅರಿವು ನಮಗೆ ಇದ್ದರೂ ಬದ್ಧತೆ ಒಗ್ಗಟ್ಟು ಐಕ್ಯತೆಯನ್ನು ಒಂದೇ ಧರ್ಮದ ಶ್ವೇತಚ್ಛತ್ರದಡಿಯಲ್ಲಿ ಕೇಂದ್ರೀಕರಿಸುವುದನ್ನು ಬಿಟ್ಟು ಜಾತಿ-ಪಂಗಡಗಳಲ್ಲಿ ಒಡೆಯುತ್ತಿದ್ದೇವೆ. ಹಿಂದೂಧರ್ಮವು ಯಾವಾಗಲೂ ರಾಜಕೀಯ ಅಗತ್ಯಗಳಿಗೆ ಧಾರ್ವಿುಕತೆಯ ಮೂಲವನ್ನು ಬಳಸಿ ದನಿಯೆತ್ತಿದ್ದಿಲ್ಲ. ಆದರೆ ಇಂದಿನ ಸಂದರ್ಭದಲ್ಲಿ ಅನಿವಾರ್ಯವಾಗಿ ಒಂದು ಸೂರಿನಡಿಯಲ್ಲಿ ಬರುವುದು ಅತ್ಯವಶ್ಯಕವಾಗಿದೆ.

ಆಗ ಮಾತ್ರವೇ ಬರಿದೇ ಕೋಮುವಾದಿಯೆಂದು ಜರಿಯುವ, ಒಂದು ಸಮಾಜ ಸಮುದಾಯವನ್ನು ಓಲೈಸುವ, ಯೋಜನೆಗಳನ್ನು ನಿರ್ದಿಷ್ಟ ಸಮುದಾಯದ ಗಮನದಲ್ಲಿಟ್ಟು ಹೆಣೆಯುವ ಆಡಳಿತ ಧಾರ್ಷ್ಯr ತಗ್ಗುತ್ತದೆ. ಸರ್ವಧರ್ಮ ಸಹಿಷ್ಣುತೆಯ ಭಾವದಲ್ಲಿ ಎಂದಿನ ಸ್ಥಿರತೆಯನ್ನು ಕಾಯ್ದುಕೊಂಡು, ಬಹುಸಂಖ್ಯಾತರ ಕಡೆಗಣನೆಗೆ ತಕ್ಕ ಉತ್ತರವನ್ನು ಒಗ್ಗಟ್ಟನ್ನು ತೋರಿಸುವ ಮೂಲಕ ಕೊಡಬೇಕಾಗಿದೆ.

ದೇಶೀಯ ಭಾಷೆ, ಸಂಸ್ಕೃ, ಸಾಂಸ್ಕೃಕ ಪರಂಪರೆ – ಇವುಗಳ ಅಭ್ಯಾಸ-ಅಧ್ಯಯನವನ್ನು ಕೇವಲ ಅಂತರ್ಜಾಲದ ಹಠಾತ್ ಮಾಹಿತಿಯ ಕುತೂಹಲ ತಣಿಸುವ ವಿವರಗಳಿಗೆ ಸೀಮಿತಗೊಳಿಸದೆ, ಶತಶತಮಾನಗಳಿಂದ ನಿರಂತರವಾಗಿ ಅರಿಯಲ್ಪಡುತ್ತಿರುವ ಮೂಲಗ್ರಂಥಗಳ ಶಾಖೆಗಳಾದ ಕಾವ್ಯ, ನಾಟಕ, ವೇದಾಂತದರ್ಶನ, ಆಯುರ್ವೆದ, ಖಗೋಳವಿಜ್ಞಾನದ ಕಲಾರಸಸ್ಥಾನಗಳಿಂದ, ಅಧ್ಯಾತ್ಮಸರಸ್ಸುಗಳಿಂದ, ವೈಜ್ಞಾನಿಕ ಮನೋಭಾವದಿಂದ ಅದನ್ನು ಪುನರ್ ನಿರ್ವಿುಸಬೇಕಿದೆ.

ನಮ್ಮಲ್ಲಿ ಸಹಜವಾಗಿಯೇ ಇದ್ದ ಜ್ಞಾನತೃಷೆಯನ್ನು ತಣಿಸುವ ಮೇರುಚಿಂತನೆಯನ್ನು, ಕಾಣ್ಕೆಗಳ ವಿಸ್ತಾರವನ್ನು, ಶ್ರೀ ರಾಮಕೃಷ್ಣ ಪರಮಹಂಸರು ನೀಡಿದ ಸರ್ವಧರ್ಮ ಸಮಭಾವದ ದಾರ್ಶನಿಕತೆಯನ್ನು ಹೃದಯದಲ್ಲಿ ಮೂಡಿಸಬೇಕಿದೆ. ಹಾಗೆಯೇ, ಅವರ ಪರಮಶಿಷ್ಯರಾಗಿರುವ ವಿವೇಕಾನಂದರು, ಕುಟಿಲ ಮತಾಂತರದಂತಹ ಅನೀತಿಯುತ ಕಾರ್ಯವನ್ನು ಖಂಡಿಸಿದ್ದು, ಹಸಿದವನಿಗಲ್ಲ ವೇದಾಂತ ಎಂದು ನೊಂದು ನುಡಿದದ್ದನ್ನೂ ಮನನ ಮಾಡಬೇಕು. ಹಾಗಾಗಿ ಆಮಿಷದ ಉಪಕಾರದ, ಸೋಗಿನ ಮತಾಂತರಗಳ ಮೂಲಕ ಜನರಲ್ಲಿ ಧಾರ್ವಿುಕವಾಗಿ ಮೇಲುಕೀಳು-ತರತಮಗಳ ವಿಷಬೀಜ ಬಿತ್ತುತ್ತಿರುವವರ ವಿರುದ್ಧ ಕಠಿಣ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಆಗ್ರಹಿಸಬೇಕು. ಜನತೆಯಲ್ಲಿ ಸಾಂಸ್ಕೃಕ ಅರಿವು ಮೂಡಿಸಬೇಕು. ನೆಲದ ಹಿರಿಮೆಯನರಿತು ಕಾರ್ಯಪ್ರವೃತ್ತನಾಗಿ ಬಾಳುವ, ಉತ್ತಮ ಧಾರ್ವಿುಕ ನಡವಳಿಕೆಯನ್ನು ರೂಪಿಸಿಕೊಳ್ಳುವ ಶ್ರದ್ಧೆಯು ಇಂದು ಹಿಂದೂಧರ್ಮಕ್ಕೆ ಅತ್ಯಗತ್ಯ ಸಂಗತಿಯಾಗಿದೆ.

ಭಾರತವರ್ಷದ ಇತಿಹಾಸದಲ್ಲಿ ಜಡತೆಯ ವಿರುದ್ಧವಾಗಿ ಅದರ ಚಿತ್ತ ಒಂದೇ ಸಮನಾಗಿ ಹೋರಾಡುತ್ತ ಬಂದಿದೆ. ಅದನ್ನು ನಾವು ಪ್ರಾಚೀನಕಾಲದಿಂದ ನೋಡುತ್ತಾ ಬಂದಿದ್ದೇವೆ. ಭಾರತದ ಶ್ರೇಷ್ಠಸಂಪತ್ತು ಅದರ ಉಪನಿಷತ್ತು; ಅದರ ಗೀತೆ; ಅದರ ವಿಶ್ವಪ್ರೇಮ ಮೂಲಕವಾದ ಬೌದ್ಧಧರ್ಮ – ಎಲ್ಲವೂ ಈ ಮಹಾ ಜಯಲಬ್ಧ ಸಾಮಗ್ರಿ. ಅದರ ಶ್ರೀಕೃಷ್ಣ, ಶ್ರೀರಾಮಚಂದ್ರ – ಇವರು ಇದೇ ಮಹಾಯುದ್ಧದ ಅಧಿನಾಯಕರು. ನಮ್ಮ ಬಹುಕಾಲದ ಆ ಮುಕ್ತಿಪ್ರಿಯ ಭಾರತವರ್ಷ ಬಹುಕಾಲದ ಜಡತೆಯ ನಾನಾ ಹೊರೆಗಳನ್ನು ತನ್ನ ಹೊರೆಯ ಮೇಲೆ ಹೊತ್ತುಕೊಂಡು ಒಂದೇ ಸ್ಥಳದಲ್ಲಿ ಶತಮಾನದ ಮೇಲೆ ಶತಮಾನ ನಿಶ್ಚಲವಾಗಿ ಬಿದ್ದಿದೆ ಎನ್ನುವುದು ಎಂದೂ ಅವರ ಪ್ರಕೃತಿಯಲ್ಲ. ಇದು ಅದರ ದೇಹವಲ್ಲ; ಇದು ಅದರ ಜೀವನದ ಆನಂದವಲ್ಲ. ಇದು ಅದರ ಹೊರ ಸಂಸಾರ ಅಷ್ಟೇ. ಬಹುತ್ವದ ನಡುವೆ ತನ್ನನ್ನು ಚೆಲ್ಲಿಕೊಂಡುಬಿಡುವುದು ಭಾರತವರ್ಷದ ಸ್ವಭಾವವಲ್ಲ. ಏಕವನ್ನು ಪಡೆಯಬಯಸುವುದೆಂದೇ ಬಾಹುಳ್ಯವನ್ನು ಏಕದ ಒಳಗೆ ಅಡಗಿಸುವುದೇ ಭಾರತದ ಸಾಧನೆ.

| ರವೀಂದ್ರನಾಥ ಠಾಗೋರ್

Leave a Reply

Your email address will not be published. Required fields are marked *

Back To Top