Thursday, 20th September 2018  

Vijayavani

ಸಿಎಂ ಕುಟುಂಬದ ವಿರುದ್ಧ ಬಿಜೆಪಿ ಭೂ ಅಸ್ತ್ರ - ಮೈಸೂರು, ರಾಮನಗರದಲ್ಲೂ ಭೂ ಅಕ್ರಮ - ಬಿಜೆಪಿ ನಾಯಕರಿಂದ ಭೂ ಚಕ್ರ        ಹಾಸನದಲ್ಲಿ ಗೌಡರ ಕುಟುಂಬದಿಂದ ಗೋಮಾಳ ಕಬಳಿಕೆ - ದೇಶಪಾಂಡೆಗೆ ದೂರು -ಎ.ಮಂಜುರಿಂದ ಕಂಪ್ಲೆಂಟ್​ ದಾಖಲು        ಬಿಜೆಪಿಯಿಂದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ - ದಂಗೆ ಏಳುವಂತೆ ಸಿಎಂ ಕರೆ - ಎಚ್ಡಿಕೆ ಮಾತಿನ ಬೆನ್ನಲ್ಲೇ ದಾಂಧಲೆ ಶುರು        ಎಚ್​ಡಿಕೆ-ಬಿಎಸ್​ವೈ ವಾಗ್ದಾಳಿ ಬೆನ್ನಲ್ಲೇ ಹೈಡ್ರಾಮಾ -ಯಡಿಯೂರಪ್ಪ ನಿವಾಸದೆದುರು ಕೈ ಕಾರ್ಯಕರ್ತರ ಹಂಗಾಮಾ        ಡಾಲರ್ಸ್ ಕಾಲನಿ ನಿವಾಸದಲ್ಲಿ ಗಲಾಟೆ - ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ - ಬಿಎಸ್​ವೈ ಭಾವಚಿತ್ರ ಹರಿದು ಹಾಕಿ ಆಕ್ರೋಶ        ಇಲ್ಲಿ ನಿಮ್ಮ ಸರ್ಕಾರ, ಅಲ್ಲಿ ನಮ್ಮ ಸರ್ಕಾರ - ನಿಮ್ಮ ಯಾವುದೇ ಧಮ್ಕಿಗೂ ಹೆದರಲ್ಲ -  ಅಟ್ಯಾಕ್​ಗೆ ಬಿಎಸ್​ವೈ ಕೌಂಟರ್​ ಅಟ್ಯಾಕ್       
Breaking News

ಖಡಕ್‌ ಅಧಿಕಾರಿ ಅಣ್ಣಾಮಲೈ ಕೈಯಲ್ಲಿ ಸ್ಪಾನರ್‌ ಹಿಡಿದ್ರು, ಯಾಕೆ ಗೊತ್ತಾ?

Monday, 25.12.2017, 11:05 AM       No Comments

ಚಿಕ್ಕಮಗಳೂರು: ಖಡಕ್ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ ಮತ್ತೊಮ್ಮೆ ತಮ್ಮ ಒಳ್ಳೆಯ ಕಾರ್ಯದಿಂದ ಸುದ್ದಿಯಾಗಿದ್ದಾರೆ.

ಹೌದು, ಕಳೆದ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕಾರು ಮತ್ತಾವರ ಗ್ರಾಮದ ಬಳಿ ಪಂಚರ್‌ ಆಗಿ ನಿಂತಿದೆ. ರಸ್ತೆ ಸುತ್ತಾಮುತ್ತಾ ಮರಗಳಿದ್ದರಿಂದ ಪ್ರವಾಸಿಗರು ಭಯದಲ್ಲಿದ್ದರು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಸ್ವತಃ ತಾವೇ ಕೈಯಲ್ಲಿ ಸ್ಪಾನರ್‌ ಹಿಡಿದು ಟೈಯರ್‌ ಬಿಚ್ಚಲು ಮುಂದಾಗಿದ್ದಾರೆ.

ಕಾರಿನಲ್ಲಿದ್ದ ಬೆಂಗಳೂರಿನ ಪ್ರವಾಸಿಗರನ್ನು ತಮ್ಮ ಕಾರಿನಲ್ಲಿಯೇ ನಗರಕ್ಕೆ ತಂದು ಬಿಟ್ಟಿದ್ದಾರೆ.

ಸ್ವತಃ ಎಸ್‌ಪಿ ಅವರೇ ತಮಗೆ ಸಹಾಯ ಮಾಡಿದ್ದು ಬಹಳ ಸಂತೋಷವಾಯ್ತು ಎನ್ನುತ್ತಾರೆ ಕಾರು ಮಾಲೀಕ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top