Monday, 23rd October 2017  

Vijayavani

1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 2. ಟಿಪ್ಪು ಜಯಂತಿ ವಿರುದ್ಧ ಹೋರಾಟ ತೀವ್ರ – ಮಂಡ್ಯದಲ್ಲಿ ಆಚರಣೆ ವಿರೋಧಿಗಳಿಂದ ರಕ್ತದಲ್ಲಿ ಪತ್ರ – ಬೆಂಗಳೂರಲ್ಲಿ ಸಿಎಂಗೆ ಮಾಸ್‌ ಕಿಲ್ಲರ್‌ ಪಟ್ಟ 3. ಸಾಲದ ಬೆಂಕಿಯಲ್ಲಿ ಬೆಂದ ರೈತ ಕುಟುಂಬ – ಡಿಸಿ ಕಚೇರಿ ಎದುರೇ ಐವರು ಅಗ್ನಿಗಾಹುತಿ – ಮೈಸೂರಿನಲ್ಲೂ ಬ್ಯಾಂಕ್‌ ಕಾಟಕ್ಕೆ ರೈತ ಆತ್ಮಹತ್ಯೆ ಯತ್ನ 4. ರಸ್ತೆಯಲ್ಲೇ ಕುಡುಕನ ನೀಚ ಕೃತ್ಯ – ಹಾಡಹಗಲೇ ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರ – ರಸ್ತೆಬದಿ ನೋಡುತ್ತಾ ನಿಂತ ಜನಸಮೂಹ 5. ಗೋದಾಮಿನಲ್ಲಿ ಕೊಳೆಯುತ್ತಿದ್ದ ಗೋಧಿಗೆ ಮುಕ್ತಿ – ದಿಗ್ವಿಜಯ ನ್ಯೂಸ್‌ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಶಿರಸಿ ಸಹಕಾರ ಗೋಡೌನ್‌ಗೆ ದೌಡು
Breaking News :

ಇನ್ನೂ ನಾಲ್ಕು ದಿನ ಭಾರಿ ಮಳೆ

Friday, 13.10.2017, 3:15 PM       No Comments

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಆರ್ಭಟಿಸುತ್ತಿರುವ ಮಳೆರಾಯ ಇನ್ನೂ ನಾಲ್ಕು ದಿನ ತನ್ನ ಘರ್ಜನೆ ಮುಂದುವರೆಸಲಿದ್ದಾನೆ ಎಂದು ರಾಜ್ಯ ನೈಸರ್ಗಿಕ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ದಿಗ್ವಿಜಯ ನ್ಯೂಸ್​ಗೆ ಹೇಳಿದ್ದಾರೆ.

ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ಕೋಲಾರ, ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯಲಿದೆ ಎಂದು ಅವರು ಹೇಳಿದರು.

ರಾಜ್ಯದ ಹಲವೆಡೆ ಅಕ್ಟೋಬರ್​ 18ರವರೆಗೆ ಮಳೆರಾಯ ದಾಂಗುಡಿ ಇಡಲಿದ್ದಾನೆ. ಬೆಂಗಳೂರಿನಲ್ಲಿ ಇಂದು ಸಂಜೆಯಿಂದಲೇ ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top