Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಬರಗಾಲದ ಜಿಲ್ಲೆಗೆ ಭಾರಿ ಮಳೆ: ರೈತ ಬದುಕಿಗೆ ಭಾರಿ ಭರವಸೆ

Friday, 15.09.2017, 9:22 AM       No Comments

ಕೋಲಾರ: ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಭರ್ಜರಿ ಮಳೆಯಾಗುತ್ತಿದೆ. ಆದರೆ ಇತ್ತ ಕೋಲಾರ ಎಂದಿಗೂ ಮಳೆಯೇ ಬಾರದೆ ಕಂಗಾಲಾಗಿತ್ತು. ಅಂತಹ ಕೋಲಾರದಲ್ಲಿ … ವಿಪರೀತ ಅನ್ನಿಸುವಷ್ಟು ಮಳೆಯಾಗಿ ಜನ ಹುಚ್ಚೆದ್ದು ಕುಣಿಯುವಂತಾಗಿದೆ. ಕೋಲಾರದಲ್ಲೀಗ ಎಲ್ಲೆಡೆ ಕೆರೆ-ತೊರೆಗಳೆಲ್ಲಾ ಮೈದುಂಬಿವೆ.

ಹೌದು, ಬರಗಾಲದ ತವರು ಜಿಲ್ಲೆ ಎಂಬ ಕುಖ್ಯಾತಿಯ ಕೋಲಾರ ನಿಜಕ್ಕೂ ಬರಗಾಲದಿಂದ ತತ್ತರಿಸಿ ಹೋಗಿತ್ತು. ಕೋಲಾರ ಜಿಲ್ಲೆಗೆ ನಿಜಕ್ಕೂ ಇಂತಹದ್ದೊಂದು ಮಳೆಯ ಅನಿವಾರ್ಯತೆಯಿತ್ತು.

ಮಳೆಯಿಂದ ಕೋಲಾರದಲ್ಲಿ ಸಂತಸದ ಹೊಳೆ:
ಈ ಪ್ರಮಾಣದ ಮಳೆ ಕಂಡು ಕೋಲಾರದ ಜನತೆಗೆ ಹತ್ತಾರು ವರ್ಷಗಳೇ ಉರುಳಿ ಹೋಗಿದ್ದವು. ಸೆಪ್ಟೆಂಬರ್​ ತಿಂಗಳ ಪ್ರಾರಂಭದ ಘಳಿಗೆಯಿಂದಲೇ ಇದ್ದಕ್ಕಿದ್ದಂತೆ ಧೋ ಎಂದು ಮಳೆ ಸುರಿದು, ರೈತರ ಮೊಗದಲ್ಲಿ ಸಂತಸ ತುಂಬಿದೆ. ಹನಿ ನೀರಿಗೂ ಪರಿತಪಿಸುತ್ತಿದ್ದ ಜನರ ಸಂತೋಷಕ್ಕೆ ಪಾರವಿಲ್ಲದಂತಾಗಿದೆ.

ಪ್ರತಿ ಸಾಲಿನಂತೆ ಈ ವರ್ಷವೂ ಜಿಲ್ಲೆಯಲ್ಲಿ ಆರಂಭದಿಂದಲೂ ಮುಂಗಾರು ಕೈ ಕೊಟ್ಟಿತ್ತು. ನಂತರ ಬಂದ ಅಲ್ಪ ಸ್ವಲ್ಪ ಮಳೆಗೆ ಜಿಲ್ಲೆಯ ರೈತರು ರಾಗಿ, ಹುರುಳಿ, ಜೋಳ ಸೇರಿದಂತೆ ಅಲ್ಪಾವಧಿ ಬೆಳೆ ಬಿತ್ತನೆ ಮಾಡಿ, ತಮ್ಮ ಕಾಯಕನಿಷ್ಠೆ ಮೆರೆದಿದ್ದರು. ಇದೀಗ ಸಕಾಲಕ್ಕೆ ಮಳೆಯಾಗಿ ಬೆಳೆಗಳಿಗೆ ಜೀವ ಬಂದಂತಾಗಿದೆ.

ಮಳೆಗಾಣದೆ ಬತ್ತಿಹೋದ ಕೆರೆಗಳು ಒಂದೇ ಸಮನೆ ಒತ್ತುವರಿಯಾಗುತ್ತಿವೆ. ಸ್ಥಳೀಯ ಆಡಳಿತ ಅದನ್ನೆಲ್ಲ ತೆರವು ಮಾಡಿದರೆ… ಬೀಳುವ ಅಲ್ಪ ಸ್ವಲ್ಪ ಮಳೆಯಾದರೂ ಸರಾಗವಾಗಿ ಕೆರೆ ಸೇರುತ್ತದೆ ಅನ್ನೋದು ಸ್ಥಳೀಯರ ಅಭಿಪ್ರಾಯ. ಬರಗಾಲದ ಜಿಲ್ಲೆಯಲ್ಲಿ ಭಾರಿ ಮಳೆಯಾಗಿರುವುದು ರೈತರ ಬದುಕಿಗೆ ಭಾರಿ ಭರವಸೆ ಸಿಕ್ಕಂತಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top