Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಮಳೆರಾಯನ ಅವಾಂತರಕ್ಕೆ ಬಂಧಿಯಾದ ಬೆಂಗಳೂರು ಜನ

Tuesday, 15.08.2017, 11:13 AM       No Comments

ಬೆಂಗಳೂರು: ರಾಜ್ಯದ ಜನತೆಯ ಜತೆ ಇಷ್ಟು ದಿನ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆರಾಯ ನಿನ್ನೆ ಸೋಮವಾರ ತಡ ರಾತ್ರಿ ಇದ್ದಕ್ಕಿದ್ದ ಹಾಗೆ ದಿಢೀರನೆ ಪ್ರವೇಶ ನೀಡಿದ್ದಾನೆ. ಸ್ವಾತಂತ್ರ್ಯೋತ್ಸವ ಸಂಭ್ರಮದ ಸವಿಗನಸಲ್ಲಿದ್ದ ಜನರಿಗೆ ಮಳರಾಯನ ಆಗಮನ ಆಘಾತ ನೀಡಿದ್ದು ಒಂದೆಡೆಯಾದರೆ. ಇತ್ತ ಮಳೆಯಿಲ್ಲದೆ ಕಂಗಾಲಾಗಿದ್ದ ಗ್ರಾಮೀಣ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಬೆಂಗಳೂರಿಗರ ನಿದ್ದೆಗೆ ಭಂಗ ತಂದ ವರುಣ

ರಾತ್ರಿ ಸುಮಾರು 1 ಗಂಟೆಯಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನ ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ನಗರದ ಹಲವೆಡೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಕೆಲ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರಿನಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ. ಯಲಹಂಕದಲ್ಲಿ ಮುಂಜಾನೆಯಿಂದಲೇ ಮಳೆ ಬಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಿಗೆ ಅಡಚಣೆಯಾಗಿದೆ. ಬೊಮ್ಮನಹಳ್ಳಿ ಜಂಕ್ಷನ್​ನಲ್ಲಿ ಹೊಳೆಯಂತೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದರು.

ನಗರದಲ್ಲಿ ನಡುರಾತ್ರಿ ದಿಢೀರನೆ ಭಾರಿ ಮಳೆ

ಬಿಬಿಎಂಪಿ ಮೇಲೆ ಸಾರ್ವಜನಿಕರ ಆಕ್ರೋಶ

ಇತ್ತ ಮಳೆರಾಯನ ಅಬ್ಬರದಿಂದ ಅಸ್ತವ್ಯಸ್ತವಾದ ಜನಜೀವನವನ್ನು ಕಂಡು ನಾಗರಿಕರು ಬಿಬಿಎಂಪಿ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಒಂದೇ ಒಂದು ಮಳೆಯನ್ನೆ ಎದುರಿಸಲಾಗದ ಬೆಂಗಳೂರಿನಲ್ಲಿ ನಿರಂತರ ಮಳೆ ಬಂದರೆ ಜನರ ಸ್ಥಿತಿ ಏನಾಗಬಹುದು ಎಂದು ಬಿಬಿಎಂಪಿ ಮೇಯರ್ ಹಾಗೂ ಸದಸ್ಯರುಗಳ ಮೇಲೆ ನಗರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರುಣನ ಅಬ್ಬರಕ್ಕೆ ಮೈಸೂರಿನಲ್ಲಿ ವ್ಯಕ್ತಿ ಬಲಿ

ಮೈಸೂರಿನಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಧಾರಾಕಾರವಾಗಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿತಗೊಂಡು 40 ವರ್ಷದ ಮಗ್ಗಿ ಎಂಬಾತ ಸಾವನ್ನಪ್ಪಿದ್ದಾನೆ. ಮೈಸೂರಿನ ಗಾಂಧಿನಗರದ ಲಿಡ್ಕರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಮಂಡ್ಯ ರೈತರ ಮೊಗದಲ್ಲಿ ಹರ್ಷ

ಮಂಡ್ಯ ನಗರ ಮತ್ತು ಜಿಲ್ಲೆಯ ವಿವಿಧೆಡೆ ರಾತ್ರಿಯೆಲ್ಲ ಮಳೆರಾಯ ನರ್ತನ ಮಾಡಿದ್ದಾನೆ. ನಿನ್ನೆ ಸೋಮವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಆರಂಭವಾದ ಮಳೆ ಅಲ್ಪ ಸ್ವಲ್ಪ ಬಿಡುವಿನೊಂದಿಗೆ ನಿರಂತರವಾಗಿ ಸುರಿಯುತ್ತಿದೆ. ಮಳೆರಾಯನ ಆಗಮನಕ್ಕೆ ರೈತರ ಮೊಗದಲ್ಲಿ ಹರ್ಷವ್ಯಕ್ತವಾಗಿದೆ. ರಾತ್ರಿಯೆಲ್ಲ ಸುರಿದ ಮಳೆಯಿಂದಾಗಿ ರೈತರ ಭೂಮಿಗೆ ಉತ್ತಮ ನೀರು ದೊರಕಿದೆ.

ರಾಮನಗರದಲ್ಲಿ ಜಲಾವೃತಗೊಂಡ ಜಿಲ್ಲಾ ಕ್ರೀಡಾಂಗಣ

ಸತತ ಮಳೆಗೆ ರಾಮನಗರದ ಜಿಲ್ಲಾ ಕ್ರೀಡಾಂಗಣ ಸಂಪೂರ್ಣ ಜಲಾವೃತಗೊಂಡಿದೆ. ಸ್ವಾತಂತ್ರ್ಯ ಉತ್ಸವ ನಡೆಯುವ ಕ್ರೀಡಾಂಗಣದಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಇದರಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ವಿಳಂಬವಾಯಿತು.

ಒಟ್ಟಾರೆ ಈ ಬಾರಿ ನಿರೀಕ್ಷಿತ ಮಳೆಯಿಲ್ಲದೆ ಮುಂದೇನು? ಎಂಬ ಚಿಂತೆಯಲ್ಲಿದ್ದ ಜನರಿಗೆ ನಿನ್ನೆ ಸುರಿದ ಮಳೆರಾಯ ಸ್ವಲ್ಪ ಸಮಾಧಾನ ಮಾಡಿದ್ರೂ, ಸ್ವಾತಂತ್ರ್ಯದ ದಿನದಂದೇ ಸುರಿದು ಹಲವರ ಕೆಂಗಣ್ಣಿಗೂ ಮಳೆರಾಯ ಗುರಿಯಾಗಿದ್ದಾನೆ. ಇವತ್ತೇ ಸುರಿಬೇಕಿತ್ತ ಈ ಮಳೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ. ಇತ್ತ ಕೆಲವರು ಸ್ವಾತಂತ್ರ್ಯ ಪ್ರತಿ ವರ್ಷ ಬರುತ್ತದೆ ಆದರೆ ಮಳೆ ಮುಖ್ಯ ಎಂದು ನಿನ್ನೆ ಬಂದ ಮಳೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top