Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಜಯಾನೂ ಇಲ್ಲ; ಮಳೇನೂ ಆಗ್ತಿದೆ: ಈ ಬಾರಿ ಕಾವೇರಿ ಸಮಸ್ಯೆ ಇಲ್ಲ!

Friday, 01.09.2017, 10:26 AM       No Comments

ಬೆಂಗಳೂರು: ಮುಂಗಾರು ಕಣ್ಣಾಮುಚ್ಚಾಲೆಯಿಂದ ಬರದ ಆತಂಕ ಎದುರಿಸುತ್ತಿದ್ದ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನರಲ್ಲಿ ಸಂತಸ ಉಂಟುಮಾಡಿದೆ.

ಈ ಬಾರಿ ಮಳೆರಾಯ ಸ್ವಲ್ಪ ತಡವಾಗಿ ಬಂದರೂ ಕಳೆಗುಂದಿದ್ದ ರೈತರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿಸಿದ್ದಾನೆ. ರಾಜ್ಯದ ಕೆರೆ ಕಟ್ಟೆಗಳು ಮಳೆರಾಯನ ಆಗಮನ ಕಂಡು ಪುಳಕಿತಗೊಂಡಿವೆ.

ಮಳೆರಾಯನ ಆರ್ಭಟ ಮುಂದುವರೆದಿದ್ದು, ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಅಲ್ಲದೆ ನಗರ ಪ್ರದೇಶಗಳಲ್ಲೂ ಮಳೆರಾಯನ ನರ್ತನ ಜೋರಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳ ನೀರಿನ ಹರಿವಿನ ಮಟ್ಟ ಏರಿಕೆ ಕಂಡಿದೆ.

ನೂರಡಿ ಒಳ ಹರಿವಿನತ್ತ KRS​
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟ ದಿನೇ ದಿನೇ ಹೆಚ್ಚುತ್ತಿದೆ. ಕಳೆದೆರಡು ದಿನಗಳಲ್ಲಿ 3 ಅಡಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ಇನ್ನು ಮೂರು ದಿನ ರಾಜ್ಯದಲ್ಲಿ ಮಳೆಯಾಗು ಸಂಭವವಿರುವುದರಿಂದ ಕೆಆರ್​ಎಸ್​ ನೀರಿನ ಮಟ್ಟ ನೂರು ಅಡಿ ಮುಟ್ಟುವ ಲಕ್ಷಣಗಳು ಗೋಚರಿಸುತ್ತಿವೆ.

ತಮಿಳುನಾಡಿನ ತಕರಾರಿಗೆ ವರುಣನ ಉತ್ತರ
ಇನ್ನು ಕಾವೇರಿ ನೀರು ವಿಚಾರವಾಗಿ ಮಳೆಯಿಲ್ಲದಿದ್ದರು ಖ್ಯಾತೆ ತಗೆಯುತ್ತಿದ್ದ ತಮಿಳುನಾಡಿಗೆ ಮಳೆರಾಯ ತಕ್ಕ ಉತ್ತರ ನೀಡಿದ್ದಾನೆ. ಜಯಲಲಿತಾ ಸಾವಿನ ನಂತರ ಕಾವೇರಿ ವಿಚಾರದ ಕ್ಯಾತೆ ಕಾಣೆಯಾಗುವ ಲಕ್ಷಣಗಳು ಕಾಣುತ್ತಿವೆ. ಸದಾ ಕನ್ನಡಿಗರ ಸ್ವಾಭಿಮಾನ ಕೆದುಕುತ್ತಿದ್ದ ಜಯಲಲಿತಾ ಸಾವಿನ ನಂತರ ಕಾವೇರಿಯ ಒಡಲಲ್ಲಿ ನೀರು ತುಂಬುವ ಲಕ್ಷಣಗಳು ಕಾಣುತ್ತಿದ್ದು, ಶೀಘ್ರವೇ ಕೆಆರ್​ಎಸ್​ ಜಲಾಶಯ ಭರ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ರೈತರ ಕೈ ಹಿಡಿದ ಮಳೆರಾಯ
ಮಳೆಯ ಅಭಾವದಿಂದ ಈ ಬಾರಿ ಕುಡಿಯಲು ಮಾತ್ರ ನೀರು ಬಳಸಿ, ಕೃಷಿ ಮಾಡುವುದಾದರೆ ನೀರು ಬಿಡುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಇದರಿಂದ ಈ ಬಾರಿಯೂ ಕೃಷಿಗೆ ಕಂಟಕ ಎದುರಾಗುತ್ತಿತ್ತು. ಆದರೆ ಈಗ ಮಳೆರಾಯನ ಮರು ಆಗಮನ ಚಿಂತಾಕ್ರಾಂತರಾಗಿದ್ದ ರೈತರಿಗೆ ಸಾಂತ್ವಾನ ಹೇಳಿದ್ದಾನೆ. ಮತ್ತೆ ರಾಜ್ಯದೆಲ್ಲೆಡೆ ಕೃಷಿ ಚಟುವಟಿಕೆ ಗರಿಗೆದರಿದೆ.

ಮೂರು ದಿನಗಳ ನಂತರ ಮತ್ತೆ ಮುಂಗಾರು ಚುರುಕು
ರಾಜ್ಯದಲ್ಲಿ ನೈರುತ್ಯ ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲಗೊಂಡಿದ್ದು, ಮೂರು ದಿನಗಳ ನಂತರ ಮತ್ತೆ ಚುರುಕಾಗಲಿದೆ. ಇದರಿಂದಾಗಿ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಮುಂದಿನ ಮೂರು ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಕೆಆರ್‌ಎಸ್ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 97.90 ಅಡಿ
ಒಳ ಹರಿವು – 27,676 ಕ್ಯೂಸೆಕ್
ಹೊರ ಹರಿವು – 10,649 ಕ್ಯೂಸೆಕ್

Leave a Reply

Your email address will not be published. Required fields are marked *

Back To Top