Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಭೂಲೋಕದ ಸ್ವರ್ಗಕ್ಕಾಗಿ ಒಂದ್ಸಲ ಸರಕಾರಿ ಹರಾಜು ಕೂಗಿ!

Monday, 14.08.2017, 3:41 PM       No Comments

ಮುಂಬೈ: ಸಹ್ಯಾದ್ರಿ ಪರ್ವತ ಶ್ರೇಣಿಯೇ ಸುಂದರ. ಅಂತಹುದರಲ್ಲಿ ಅಲ್ಲೊಂದು ಅದ್ಭುತವಾದ ಭೂಸ್ವರ್ಗ ಇದ್ದರೆ ಸ್ವರ್ಗಕ್ಕೆ ಕಿಚ್ಚುಹಚ್ಚಿದಂತೆಯೇ ಸರಿ.

ಹೌದು ಸಹಾರಾ ಗ್ರೂಪ್ ಗೊತ್ತಲ್ಲ… ದಿವಾಳಿಯೆದ್ದಿರುವ ಕಂಪನಿ. ಅದೊಮ್ಮೆ ಆ ಕಂಪನಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸಹ್ಯಾದ್ರಿಯ ಉತ್ತುಂಗದಲ್ಲಿ ಆಂಬಿ ವ್ಯಾಲಿ ಎಂಬ ಸುಂದರ ಸ್ವರ್ಗ ಸಮಾನ ತಾಣ ನಿರ್ಮಿಸಿತ್ತು. ಮತ್ತು ಅದು ಈಗಲೂ ಹಾಗೆಯೇ ಸುಂದರವಾಗಿದೆ. ಆದರೆ ಅದಕ್ಕೀಗ ಬೇರೆಯದೇ ವಾರಸುದಾರರು ಬೇಕಾಗಿದ್ದಾರೆ.

ಭೂಲೋಕದ ಸ್ವರ್ಗ ಗತವೈಭವ ಹೀಗಿತ್ತು:

ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈ ನಡುವೆ ಲೋನಾವಾಲ ಬಳಿಯಿರುವ ಈ ಆಂಬಿ ವ್ಯಾಲಿಯನ್ನು ಭಾರತದ ಸಹಾರಾ ಪರಿವಾರದವರು ನಿರ್ಮಿಸಿದ್ದರು. ವ್ಯವಸ್ಥಿತ ಯೋಜನೆಯೊಂದಿಗೆ ರೂಪಿಸಿರುವ ಈ ನಗರ ಸುಮಾರು 67,621 ಎಕರೆಯಷ್ಟು ವಿಸ್ತಾರವಾಗಿದೆ. ‘ಜೀವನದ ಪ್ರೀತಿಗಾಗಿ ಸೃಷ್ಠಿ’ (Created for the Love of Life) ಎಂಬ ಧ್ಯೇಯ ವಾಕ್ಯದೊಂದಿಗೆ ಸೃಷ್ಟಿಯಾದ ಆಂಬಿ ವ್ಯಾಲಿಯನ್ನು ಒಂದು ಕ್ಷಣ ಕಣ್ತುಂಬಿಕೊಂಡರೆ ಸಾಕು ನಿಮ್ಮ ಜೀವನದಲ್ಲೂ ಪ್ರೀತಿಯ ಮೊಳಕೆ ಚಿಗುರೊಡೆಯದೇ ಇರದು … ಅಷ್ಟು ಸೊಬಗಿನಿಂದ ಕೂಡಿದೆ ಈ ಆಂಬಿ ವ್ಯಾಲಿ.

ಏನೆಲ್ಲಾ ಸಿಗುತ್ತೆ ಈ ಆಂಬಿಯಲ್ಲಿ?

ಹರಾಜು ಪ್ರಕ್ರಿಯೆಯ ನೋಟಿಸ್​ನಲ್ಲಿ ತಿಳಿಸಿರುವಂತೆ ಈ ಆಂಬಿಯಲ್ಲಿ ನೀವು ಗಾಲ್ಫ್​ ಕೋರ್ಸ್, ವಿಮಾನ ನಿಲ್ದಾಣ, ಸುಸಜ್ಜಿತ ಆಸ್ಪತ್ರೆಗಳನ್ನು ಪಡೆಯಬಹುದು. ಸಾಹಸಿ ಕ್ರೀಡೆಗಳು, ವ್ಯಾಪಾರ ವಹಿವಾಟು, ಅಂತರಾಷ್ಟ್ರೀಯ ಶಾಲೆ ಹಾಗೂ ಒಳ್ಳೆಯ ಸತ್ಕಾರವನ್ನು ನೀಡುವ ಸುಂದರ ರೆಸ್ಟೋರೆಂಟ್​ಗಳನ್ನು ತಮ್ಮದಾಗಿಸಿಕೊಳ್ಳಲು ಅವಕಾಶವಿದೆ.

ಆಂಬಿ ವ್ಯಾಲಿ ಹರಾಜಿಗೆ ಕಾರಣ

ಸುಂದರತಾಣ ಆಂಬಿ ವ್ಯಾಲಿಯ ಒಡೆತನವನ್ನು ಹೊಂದಿದ್ದ ಸಹಾರಾ ಗ್ರೂಪ್​ ತನ್ನ ಬಂಡವಾಳಗಾರರಿಗೆ ಬಾಕಿ ಹಣವನ್ನು ಪಾವತಿಸದಿರುವುದರಿಂದ ಆಂಬಿ ವ್ಯಾಲಿಯನ್ನು ಹರಾಜಿನಲ್ಲಿ ಇಡಲಾಗಿದೆ. ಈ ಮುಂಚೆಯೇ ಆಂಬಿ ವ್ಯಾಲಿಯನ್ನು ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್​, ಬಾಂಬೆ ಹೈಕೋರ್ಟ್​ಗೆ ಸೂಚಿಸಿತ್ತು. ಈ ಮಧ್ಯೆ ಸಹಾರಾ ಗ್ರೂಪ್​ ಮುಖ್ಯ ವಕೀಲ ಹರಾಜು ಪ್ರಕ್ರಿಯೆಯನ್ನು ರದ್ದು ಮಾಡಿ, ಬಾಕಿ 9 ಸಾವಿರ ಕೋಟಿ ಹಣವನ್ನು ಪಾವತಿಸಲು 18 ತಿಂಗಳ ಕಾಲಾವಕಾಶವನ್ನು ಕೇಳಿದ್ದರು.

ಆಂಬಿ ವ್ಯಾಲಿ ನಿಮ್ಮದಾಗಿಸಿಕೊಳ್ಳಲು ಸುವರ್ಣಾವಕಾಶ

ಹರಾಜು ಹಾಕಬೇಡಿ ಎಂಬ ಸಹಾರಾ ಗ್ರೂಪ್ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಕಳೆದ ವಾರವೇ ತಿರಸ್ಕರಿಸಿದ್ದು ಹರಾಜು ಮಾಡುವಂತೆ ಬಾಂಬೆ ಕೋರ್ಟ್​ಗೆ ನಿರ್ದೇಶಿಸಿದೆ. ಈ ಸುಂದರ ಆಂಬಿ ವ್ಯಾಲಿಯನ್ನು ಕೊಳ್ಳಲು 37,392 ಕೋಟಿ ರೂ ಮೂಲ ಬೆಲೆಯನ್ನು ನಿಗದಿ ಮಾಡಲಾಗಿದೆ.

ಹರಾಜು ಪ್ರಕ್ರಿಯೆ ಹೇಗೆ

ಆಂಬಿ ವ್ಯಾಲಿಯನ್ನು ಖರೀದಿ ಬಯಸುವವರು ಮೊದಲು ಹರಾಜು ಅಧಿಕಾರಿಗಳಿಗೆ ತಮ್ಮ ಕೆವೈಸಿ ಅರ್ಜಿಯನ್ನು ಸಲ್ಲಿಸಿಬೇಕು. ಕೆವೈಸಿ ಅರ್ಜಿ ಸಲ್ಲಿಸುವಾಗಲೇ ಶೇ. 15 ರಷ್ಟು ಮೊತ್ತವನ್ನು RTGS ಅಥವಾ NEFT ಮೂಲಕವೇ ಸಂದಾಯ ಮಾಡಬೇಕು.

ಕಾಂಗ್ರೆಸ್​ನ ನಾಯಕ ಹಿರಿಯ ವಕೀಲ ಕಪಿಲ್​ ಸಿಬ್ಬಲ್​ ಸಹಾರಾ ಪರ ವಕಾಲತ್ತು ವಹಿಸಿದ್ದಾರೆ. ಅಂದಹಾಗೆ ಭೂಮಿಯ ಮೇಲೆ ಈ ಸ್ವರ್ಗವನ್ನು ಸೃಷ್ಟಿಸಿದ ಸುಬ್ರತೋ ರಾಯ್​ ಅವರನ್ನು 2014 ರಲ್ಲಿ ಜೈಲಿಗೆ ಅಟ್ಟಲಾಯಿತು. (ಏಜೆನ್ಸೀಸ್​)

ಆಂಬಿ ವ್ಯಾಲಿಯ ಕೆಲವೊಂದು ಸುಂದರ ತುಣುಕುಗಳು ಇಲ್ಲಿವೆ ಕಣ್ತುಂಬಿಕೊಳ್ಳಿ

Leave a Reply

Your email address will not be published. Required fields are marked *

Back To Top