Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಸೀತಾಪುರದಲ್ಲಿ ಗದ್ದೆಗಿಳಿದು ಭತ್ತ ನಾಟಿ ಮಾಡಿದ ಸಿಎಂ ಎಚ್​ಡಿಕೆ

Saturday, 11.08.2018, 1:48 PM       No Comments

ಮಂಡ್ಯ: ದಿನೆ ಕಳೆದಂತೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ರೈತ ವರ್ಗಕ್ಕೆ ಆತ್ಮಸ್ಥೈರ್ಯ ನೀಡುವ ಉದ್ದೇಶದಿಂದ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ವತಃ ತಾವೇ ಗದ್ದೆಗಿಳಿದು ನಾಟಿ ಕಾರ್ಯ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಬರೋಬ್ಬರಿ ಐದೂವರೆ ಎಕರೆ ಜಮೀನಿನಲ್ಲಿ 100 ಗಂಡಸರು ಹಾಗೂ 50 ಹೆಂಗಸರು ಭತ್ತ ನಾಟಿ ಮಾಡುವ ಮೂಲಕ ಸಿಎಂಗೆ ಸಾಥ್​ ನೀಡಿದರು.

ಸಿಎಂ ಭತ್ತ ನಾಟಿ ಮಾಡುತ್ತಾರೆ ಎಂದು ತಿಳಿದ ಊರಿಗೆ ಊರೇ ಜಮೀನಿನತ್ತ ನೆರೆದಿದ್ದು, ಹಬ್ಬದ ವಾತಾವರಣ ಮನೆ ಮಾಡಿದೆ. ಎಚ್​ಡಿಕೆ ಜಮೀನಿಗೆ ಬರುವ ಮುಂಚೆ ಅಲ್ಲಿನ ರೈತರು ಸಾಮೂಹಿಕವಾಗಿ ಎತ್ತುಗಳ ಮೂಲಕ ಉಳುಮೆ ಮಾಡಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು.

ಎಲ್ಲರಿಗೂ ಐಡಿ ಕಾರ್ಡ್​
ಸಿಎಂ ಜತೆ ಭತ್ತ ನಾಟಿ ಮಾಡುವ ಎಲ್ಲ 150 ರೈತರಿಗೂ ಐಡಿ ಕಾರ್ಡ್​ ನೀಡಲಾಗಿದೆ. ನಾಟಿ ಮಾಡುವ ವೇಳೆ ಸೋಬಾನೆ ಪದ ಹಾಡುವವರಿಗೂ ಐಡಿ ಕಾರ್ಡ್​ ನೀಡಲಾಗಿದೆ.

ಸೋಬಾನೆ ಮೆರುಗು
ಸಿಎಂ ಭತ್ತ ನಾಟಿ ಮಾಡುವ ವೇಳೆ ಸೋಬಾನೆ ಮೆರುಗು ನೀಡಲು ಹೆಗ್ಗಡಹಳ್ಳಿ, ಕೆರೆತೊಣ್ಣೂರು, ಸುಂಕತೊಣ್ಣೂರಿನಿಂದ ಸೋಬಾನೆ ಹಾಡುಗಾರರನ್ನೇ ಕರೆಸಲಾಗಿದೆ. ಸೋಬಾನೆ ಪದ, ನಾಟಿ ಪದ, ಮಳೆರಾಯನ ಪದಗಳನ್ನು ಹಾಡಿ ಮೆರುಗು ನೀಡಿದರು.

ಬಿಗಿ ಬಂದೋಬಸ್ತ್​
ಭತ್ತ ನಾಟಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಒದಗಿಸಿದ್ದು, ಮೂವರು ಡಿವೈಎಸ್​ಪಿ, 13 ಇನ್ಸ್​ಪೆಕ್ಟರ್ ಮತ್ತು 300 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top