Thursday, 20th September 2018  

Vijayavani

Breaking News

ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯ: ಮಾಜಿ ಪ್ರಧಾನಿ ಎಚ್​ಡಿಡಿ

Friday, 14.09.2018, 3:02 PM       No Comments

ಶಿವಮೊಗ್ಗ: ಸರ್ಕಾರ ಮಾಡುತ್ತಿರುವ ಒಳ್ಳೆ ಕೆಲಸಗಳಿಗಿಂತಲೂ ಮಾಧ್ಯಮಗಳಿಗೆ ಸರ್ಕಾರ ಪತನವಾಗುವುದೇ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಮಲೆನಾಡು ಕ್ರೆಡಿಟ್ ಕೋ ಆಫ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮದ ವೇಳೆ ರಾಜ್ಯ ಸರ್ಕಾರದ ಸ್ಥಿರತೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಮಾಧ್ಯಮದವರ ಮೇಲೆ ನನಗೆ ಗೌರವವಿದೆ. ಆದರೆ ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಸಾಧನೆಗಿಂತ ಸರ್ಕಾರ ಉರುಳುವ ಕುರಿತೇ ಹೆಚ್ಚು ಚರ್ಚಿಸಲಾಗುತ್ತಿದೆ. ಇದು ಅವಶ್ಯಕವೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಜಾರಕಿಹೊಳಿ ಸೋದರರು ನಿಮ್ಮನ್ನು ಸಂಪರ್ಕ ಮಾಡಿದ್ದರೆ? ಡಿಸಿಎಂ ಪರಮೇಶ್ವರ್ ನಿಮ್ಮೊಂದಿಗೆ ಮಾತನಾಡಿದ್ದಾರಾ? ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಸಕ್ತಿ ತೋರಿದ ಎಚ್​ಡಿಡಿ, ‘ಇಸ್ ಇಟ್ ನೆಸೆಸರಿ ಫಾರ್​ ಯು’ಎಂದು ಖಾರವಾಗಿ ಮರುಪ್ರಶ್ನೆ ಹಾಕಿದರು.

ಕುಮಾರಸ್ವಾಮಿ ರಾಜ್ಯದ ರೈತರ ಸಹಕಾರಿ ಸಂಘದ ಸಾಲಮನ್ನಾ ಮಾಡಿದರು. ಖಾಸಗಿ ಸಾಲಮನ್ನಾ ಮಾಡಿದರು. ಉತ್ತಮ ಯೋಜನೆಗಳನ್ನ ಜನರಿಗೆ ತರಲು ಪ್ರಯತ್ನಿಸುತ್ನಿಸುತ್ತಿದ್ದಾರೆ. ಈ ಕುರಿತು ಮಾಧ್ಯಮಗಳು ಚರ್ಚಿಸುತ್ತಿಲ್ಲ. ಸಾಧನೆಗಿಂತ ಸರ್ಕಾರ ಉರುಳುವುದೇ ಮಾಧ್ಯಮದವರಿಗೆ ಪ್ರಾಮುಖ್ಯತೆ ಎನಿಸಿಕೊಂಡಿದೆ. ಇದನ್ನೇ ಕಾಯುತ್ತಾ ಇರಿ ಎಂದರು.

Leave a Reply

Your email address will not be published. Required fields are marked *

Back To Top