Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಹೊರೆ ಇಟ್ಟು ತೆನೆ ಹೊತ್ತ ಕುಮಾರ

Friday, 06.07.2018, 3:07 AM       No Comments

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಗೆ ಸೆಡ್ಡು ಹೊಡೆವ ತಂತ್ರಗಾರಿಕೆ ಪ್ರದರ್ಶಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಮಂಡಿಸಿದ ಚೊಚ್ಚಲ ಬಜೆಟ್​ನಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯಕ್ಕೆ ಭರಪೂರ ಕೊಡುಗೆ ಕೊಟ್ಟಿದ್ದಾರೆ. ನಿರೀಕ್ಷೆಯಂತೆ ಸಾಲಮನ್ನಾ ಟ್ರಂಪ್ ಕಾರ್ಡ್ ಬಳಸಿ ಅನ್ನದಾತರ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಪ್ರಯತ್ನ ನಡೆಸಿರುವ ಅವರು, ಪೆಟ್ರೋಲ್, ವಿದ್ಯುತ್ ಬೆಲೆ ಏರಿಸುವ ಮೂಲಕ ‘ಸಾಲ’ದ ಹೊರೆಯನ್ನು ಶ್ರೀಸಾಮಾನ್ಯರ ಮೇಲೆ ಹಾಕಿದ್ದಾರೆ. ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಲೆಕ್ಕಾಚಾರದ ಸರ್ಕಸ್ ನಡೆಸಿರುವ ಸಿಎಂ ಗರ್ಭಿಣಿ, ಬಾಣಂತಿಯರ ನೆರವಿನ ಮೊತ್ತ ಏರಿಕೆ, ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಹೆಚ್ಚಳದಂತಹ ಹತ್ತಾರು ಅನುಕೂಲ ಕಲ್ಪಿಸಿದ್ದಾರೆ. ಬಜೆಟ್​ನಲ್ಲಿ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕಕ್ಕೆ ಆದ್ಯತೆ ದೊರೆಯದಿರುವುದು ಆ ಭಾಗದ ಜನ, ಜನಪ್ರತಿನಿಧಿಗಳನ್ನು ಕೆರಳಿಸಿದರೆ, ಸಿದ್ದರಾಮಯ್ಯ ಬಜೆಟ್​ನ ಹಳೇ ಕಾರ್ಯಕ್ರಮ ಮುಂದುವರಿಯುವುದರಿಂದ ಯಾರಿಗೂ ಅನ್ಯಾಯವಾಗಿಲ್ಲ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ ವಿಶ್ಲೇಷಿಸುವುದಾದರೆ ಇದು ‘ಸಮ್ಮಿಶ್ರ’ ಬಜೆಟ್.

 

 

Leave a Reply

Your email address will not be published. Required fields are marked *

Back To Top