Sunday, 21st October 2018  

Vijayavani

ಚಡಚಣ ಸೋದರರ ಹತ್ಯೆ ಪ್ರಕರಣ-ಸಿಪಿಐ ಅಸೋದೆ 10 ದಿನ ಕಸ್ಟಡಿಗೆ-ಸಂಬಂಧಿಕರ ಮೇಲೂ ದೂರು ದಾಖಲು        ಸಿಸಿಬಿಯಿಂದ ಮುತ್ತಪ್ಪ ರೈಗೆ 8 ಗಂಟೆ ಡ್ರಿಲ್​-ಸೂಕ್ತ ದಾಖಲೆಗಳಿಂದ ಮಾಜಿ ಡಾನ್​​ ಬಚಾವ್​-ಇಂದು ಪೊಲೀಸರಿಂದ ಗನ್​​ಮ್ಯಾನ್​​ಗಳ ವಿಚಾರಣೆ        ಆ್ಯಕ್ಷನ್​​​ಕಿಂಗ್​​​ ವಿರುದ್ಧ ಶೃತಿ ಹರಿಹರನ್​ ಮೀಟು ಏಟು-ನಟಿ ವಿರುದ್ಧ ಸರ್ಜಾ ಫ್ಯಾಮಿಲಿ ಟಾಕ್​​ಫೈಟ್​​-ಆರೋಪಕ್ಕೆ ಸ್ಪಷ್ಟನೆ ನೀಡಲು ಇಂದು ಪ್ರೆಸ್​​ಮೀಟ್​​​        ಸಂಸದರ ನಿಧಿ ಹೊಡೆಯಲು ಮೆಗಾ ಪ್ಲಾನ್​-ನಕಲಿ ಲೆಟರ್​​​​​ಹೆಡ್​​​ ಮೂಲಕ ಲಕ್ಷ ಲಕ್ಷ ಗುಳುಂ-26 ಲಕ್ಷ ನುಂಗಿದ ಭೂಪ ಪೊಲೀಸರ ವಶಕ್ಕೆ        ರಂಗೇರಿತು ಉಪಚುನಾವಣೆ ಅಖಾಡ-ಇಂದು ಪಂಚ ಕ್ಷೇತ್ರಗಳಲ್ಲೂ ನಾಯಕರ ಪ್ರಚಾರ-ದೋಸ್ತಿಗೆ ಹುರುಪು ತಂದ ಗುರು-ಶಿಷ್ಯರ ಮಿಲನ        ಮಡಿಕೇರಿ ಸಂತ್ರಸ್ತರಿಗೆ ಮಾದರಿ ಮನೆಗಳ ನಿರ್ಮಾಣ-5 ರಿಂದ 10 ಲಕ್ಷದೊಳಗೆ ಮೂರು ರೀತಿಯ ಮನೆ-ಜನರು ಕೇಳಿದ ಮನೆ ಎರಡು ತಿಂಗಳೊಳಗೆ ರೆಡಿ       
Breaking News

ಪ್ರಧಾನಿ ಅಭ್ಯರ್ಥಿಯಲ್ಲ… ಚುನಾವಣೆಗೇ ನಿಲ್ಲಲು ಆಸಕ್ತಿ ಇಲ್ಲ; ಹಾಸನಕ್ಕೆ ಪ್ರಜ್ವಲ್​ ಅಭ್ಯರ್ಥಿ ಎಂದ ದೇವೇಗೌಡ

Monday, 13.08.2018, 8:02 AM       No Comments

ಹಾಸನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ನಾನು ಸ್ಪರ್ಧಿಸುವ ಸಾಧ್ಯತೆಗಳು ಕಡಿಮೆ. ಹೀಗಾಗಿ, ರೇವಣ್ಣ ಪುತ್ರ ಪ್ರಜ್ವಲ್​ ಅವರನ್ನು ಚುನಾವಣೆಗೆ ನಿಲ್ಲಿಸಲು ನಾನು ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಅವರು ತಿಳಿಸಿದ್ದಾರೆ.

ಹಲವು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲು ಸೋಮವಾರ ಹಾಸನಕ್ಕೆ ಆಗಮಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ನರೇಂದ್ರ ಮೋದಿಗೆ ವಿರೋಧ ಪಕ್ಷಗಳ ಮೈತ್ರಿ ಕೂಟದಿಂದ ದೇವೇಗೌಡರು ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದಾರೆ ಎಂಬ ವ್ಯಾಖ್ಯಾನಗಳು ದೇಶದ ರಾಜಕೀಯದಲ್ಲಿ ಕೇಳಿಬರುತ್ತಿವೆ. ಈ ಬಗ್ಗೆ ಏನು ಹೇಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ” ನಾನು ಈ ಬಾರಿ ಚುನಾವಣೆಗೆ ನಿಲ್ಲಲು ಇನ್ನೂ ನಿರ್ಣಯವನ್ನೇ ಮಾಡಿಲ್ಲ. ಹಾಸನದಿಂದ ಲೋಕಸಭೆ ಸ್ಪರ್ಧಿಸಲು ಬೇರೆ ಅಭ್ಯರ್ಥಿಗಳಿಲ್ಲ. ಹೀಗಾಗಿ ಪ್ರಜ್ವಲ್​ ಅವರನ್ನು ನಿಲ್ಲಿಸಲು ಆಸಕ್ತಿ ಹೊಂದಿದ್ದೇನೆ. ಪ್ರಜ್ವಲ್​ ಯುವಕನಿದ್ದಾನೆ. ವಿದ್ಯಾವಂತ. ಆತನನ್ನು ಇಲ್ಲಿ ನಿಲ್ಲಿಸಬೇಕೆಂಬುದೇ ನನ್ನ ಅಭಿಪ್ರಾಯ. ಈ ಬಗ್ಗೆ ಪೂರ್ಣ ತೀರ್ಮಾನ ತೆಗೆದುಕೊಂಡಿದ್ದೇನೆ,” ಎಂದರು. ಆ ಮೂಲಕ ತಾವು ಪ್ರಧಾನಿ ಅಭ್ಯರ್ಥಿಯಾಗುವ ನಿಲುವು ಹೊಂದಿಲ್ಲ ಎಂದು ತಿಳಿಸಿದರು.
ಒಂದು ವೇಳೆ ಹಾಸನದಿಂದ ಪ್ರಜ್ವಲ್​ ಸ್ಪರ್ಧಿಸಿದರೆ, ತಾವು ಮಂಡ್ಯದಿಂದ ಸ್ಪರ್ಧಿಸುವಿರೇ ಎಂದು ಕೇಳಲಾದ ಪ್ರಶ್ನೆಗೆ, “ನಿಲ್ಲುವವನಿದ್ದರೆ ನನ್ನ ಸ್ವಂತ ಊರು ಹಾಸನದಿಂದಲೇ ನಿಲ್ಲುತ್ತೇನೆ. ಮಂಡ್ಯಕ್ಕೆ ಹೋಗುವ ಯಾವುದೇ ಉದ್ದೇಶವಿಲ್ಲ,” ಎಂದು ತಿಳಿಸಿದರು.

ವಿರೋಧ ಪಕ್ಷಗಳ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಕೇಳಿ ಬರುತ್ತಿರುವ ಹೊಸ ಹೊಸ ಹೆಸರುಗಳ ಕುರಿತು ಮಾತನಾಡಿ,”ನಾವಂತೂ ರಾಹುಲ್​ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತೇವೆ. ಸಾರ್ವಜನಿಕವಾಗಿಯೇ ಈ ಮಾತನ್ನು ನಾನು ಹೇಳಿದ್ದೇನೆ,” ಎಂದರು.

ಇತ್ತೀಚೆಗೆ ಸಂಭವಿಸಿದ ಗ್ರಹಣಗಳ ಹಿನ್ನೆಲೆಯಲ್ಲಿ ಕೋಡಿ ಮಠದ ಸ್ವಾಮೀಜಿಗಳು ಹೇಳಿದ್ದ, ದೊರೆಯ ಸೋದರ ಅಧಿಕಾರ ಹಿಡಿಯಲಿದ್ದಾನೆ ಎಂಬ ಮಾತನ್ನು ಎಚ್​.ಡಿ ರೇವಣ್ಣ ಅವರಿಗೆ ಅನ್ವಯಿಸಿ ಮಾತನಾಡಲಾಗುತ್ತಿದೆ ಎಂಬದರ ಕುರಿತು ಪ್ರತಿಕ್ರಿಯಿಸಿದ ಅವರು, ” ಒಂದು ವೇಳೆ ಕುಮಾರಸ್ವಾಮಿ ಅವರು ದೆಹಲಿ ರಾಜಕಾರಣಕ್ಕೆ ಹೋದರೆ ರೇವಣ್ಣ ಇಲ್ಲಿ ಅವರ ಸ್ಥಾನ ತುಂಬುತ್ತಾರೆ. ಆದರೆ, ಈಗ ಯಾಕೆ ಅವರು ದೆಹಲಿ ರಾಜಕಾರಣಕ್ಕೆ ಹೋಗುತ್ತಾರೆ? ಸದ್ಯಕ್ಕಂತೂ ಹೋಗುವುದಿಲ್ಲ. ಭವಿಷ್ಯದಲ್ಲಿ ಬಂದರೂ ಬರಬಹುದು,” ಎಂದರು.

ಸರ್ಕಾರವನ್ನು ಉರುಳಿಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಮಾತನಾಡುವವರು ಮಾತನಾಡಿಕೊಳ್ಳಲಿ. ಅದು ಅವರವರಿಗೆ ಬಿಟ್ಟ ವಿಚಾರ. ಇನ್ನು ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ದಕ್ಕೆಯಾಗದಂತೆ ನಡೆದುಕೊಳ್ಳುವುದೇ ಎರಡೂ ಪಕ್ಷಗಳ ಉದ್ದೇಶ. ಕಾಂಗ್ರೆಸ್​ ಕೂಡ ಮೈತ್ರಿಗೆ ಧರ್ಮ ಪಾಲಿಸುತ್ತದೆ. ಆ ಬಗ್ಗೆ ಕಾಂಗ್ರೆಸ್​ ನಾಯಕರಿಗೆ ಸ್ಪಷ್ಟ ಅರಿವಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back To Top