Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ದೇವೇಗೌಡರ ಬಗ್ಗೆ ಮೋದಿ ಮಾತನಾಡಬೇಕೆಂದರೂ ನಾಲ್ಕು ಬಾರಿ ಯೋಚಿಸುತ್ತಾರೆ: ಎಚ್‌ಡಿಕೆ

Thursday, 20.09.2018, 3:46 PM       No Comments

ಹಾಸನ: ಪ್ರಧಾನಿ ಮೋದಿಯೇ ದೇವೇಗೌಡರ ಬಗ್ಗೆ ಮಾತನಾಡಬೇಕು ಅಂದರೆ ನಾಲ್ಕು ಬಾರಿ ಯೋಚನೆ ಮಾಡುತ್ತಾರೆ. ಆದರೆ, ಇವರು ರಾಜ್ಯದಲ್ಲಿ ನಮ್ಮ ಕುಟುಂಬದ ಮೇಲೆಯೇ ಆರೋಪ ಹೊರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಹೇಳಿದರು.

ಉದಯಪುರದಲ್ಲಿ ಭಾಷಣ ಮಾಡಿದ ಅವರು, ರಾಜ್ಯದಲ್ಲಿನ ನಾಯಕರು ನಮ್ಮ ಕುಟುಂಬವು ಲೂಟಿ ಮಾಡುತ್ತಿದೆ ಎನ್ನುತ್ತಾರೆ. ಅಲ್ಲದೆ, ರೇವಣ್ಣ ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಕೂಡಲೇ ಡಿಸಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳೇ ದಾಖಲೆ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

ಕಮಿಷನ್ ಜನಕ ನೀವೇ…

ನೀವು ಹಿರಿಯರಿದ್ದೀರಿ ನಮ್ಮ ಬಗ್ಗೆ ಮಾತನಾಡಿ. ಆದರೆ, ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ. ದೇವೇಗೌಡರಿಗೆ ಜನ್ಮ ನೀಡಿದ ಹರದನಹಳ್ಳಿ ಶಿವ ನಿಮಗೆ ಪಾಠ ಕಲಿಸುತ್ತಾನೆ. ಯಡಿಯೂರಪ್ಪನವರೇ ನಿಮ್ಮಂತೆ ಇನ್ಸ್‌ಟಿಟ್ಯೂಷನ್‌ಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಕಮಿಷನ್ ಅಂತ ದೂರುತ್ತಿರಾ? ಈ ಕಮಿಷನ್ ಜನಕ ನೀವೇ ಯಡಿಯೂರಪ್ಪ ನವರೇ ಎಂದು ಕಿಡಿಕಾರಿದರು.

ವರ್ಗಾವಣೆಯಲ್ಲಿ ನಾವು ದುಡ್ಡು ಮಾಡುವ ಪಾಪದ ಹಣ ನಮಗೆ ಬೇಡ. ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತಾಡಬೇಡಿ. ಹಳ್ಳಿಯಿಂದ ದೆಹಲಿಯ ಪ್ರಧಾನಮಂತ್ರಿ ಕೂತ ಸ್ಥಳ ನೋಡಿ ಬಂದಿರುವ ಕುಟುಂಬ ನಮ್ಮದು ಎಂದರು.

ಬಿಜೆಪಿ ಜತೆ ಮೈತ್ರಿಯಲ್ಲಿದ್ದಾಗಲೂ ಒತ್ತಡದಲ್ಲೇ ಕೆಲಸ ಮಾಡಿದ್ದೇನೆ. ಈಗಲೂ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದೇನೆ. ಆದರೂ ನನ್ನ ಕರ್ತವ್ಯದಿಂದ ಹಿಂದೆ ಸರಿಯಲ್ಲ. ನನ್ನ ಮೇಲೆ ಬಿಜೆಪಿ ನಾಯಕರು ಬಳ್ಳಾರಿಯಲ್ಲಿ ಕೊಲೆ ಆರೋಪ ಮಾಡಿದರು ಎಂದು ತಿಳಿಸಿದರು.
ನನ್ನ ತಂದೆಯನ್ನು ಕೆಂಪು ಕೋಟೆ ಮೇಲೆ ಬಾವುಟ ಹಾರಿಸುವಷ್ಟು ಎತ್ತರಕ್ಕೆ ಕೊಂಡೊಯ್ದಿದ್ದೀರಿ. ನಿಮ್ಮ ಋಣ ತೀರಿಸುವ ಹೊರೆ ನಮ್ಮ ಮೇಲಿದೆ ಎಂದರು.

ಹಾಸನ ಉದ್ಧಾರ ಮಾಡುವ ಆಸೆ ರೇವಣ್ಣದು

ನನ್ನ ತಂದೆ ಕೆಲ ತಿಂಗಳು ಅಧಿಕಾರ ಹೊಂದಿದ್ದರು. ರಾಜಕೀಯದ ಬಹುತೇಕ ರಾಜಕೀಯ ಜೀವನವನ್ನು ವಿರೋಧ ಪಕ್ಷದಲ್ಲೇ ಕಳೆದರು. ವಿರೋಧ ಪಕ್ಷದಲ್ಲಿದ್ದರೂ ನನ್ನ ತಂದೆಗೆ ಶಕ್ತಿ ತುಂಬಿದವರು ಹಾಸನದ ಜನತೆ. ರೇವಣ್ಣನವರಿಗೆ ಬೇಗ ಬೇಗ ಕೆಲಸ ಮಾಡುವ ಆತುರ. ಹತ್ತು ವರ್ಷದಲ್ಲಿ ಅಧಿಕಾರದಲ್ಲಿ ಇಲ್ಲದ ಕಾರಣ ಒಂದೇ ರಾತ್ರಿಯಲ್ಲಿ ಹಾಸನಕ್ಕೆ ಹೆಚ್ಚು ಕೆಲಸ ಮಾಡಿ ಉದ್ಧಾರ ಮಾಡಬೇಕು ಎನ್ನುವ ಆಸೆ ರೇವಣ್ಣನದ್ದು. ಕೇವಲ ಮೂವತ್ತು ಕೋಟಿ ಹಾಸನಕ್ಕೆ ಕೊಟ್ಟಿದಕ್ಕೆ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಮೇಜು ಕುಟ್ಟಿ ವ್ಯಂಗ್ಯ ಮಾಡಿದ್ದೀರಿ. ಇಂದು ಹಾಸನದಲ್ಲಿ ಅಂತಹ ಬಿಜೆಪಿ ವ್ಯಕ್ತಿಯನ್ನು ಗೆಲ್ಲಿಸಿದ್ದಿರಿ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top