Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಬಾಹುಬಲಿಯ ಸಹಾನುಭೂತಿಯ ಮುಖಭಾವ ನನಗೆ ಕಾಣಿಸುತ್ತಿದೆ: ರಾಮನಾಥ ಕೋವಿಂದ್​

Wednesday, 07.02.2018, 2:12 PM       No Comments

ಹಾಸನ: ಶಾಂತಿ, ಅಹಿಂಸೆ, ಮೈತ್ರಿ ಹಾಗೂ ತ್ಯಾಗಗಳು ಇಡೀ ವಿಶ್ವ ಶಾಂತಿಗೆ ಅಗತ್ಯವಾದ ಸಂದೇಶಗಳಾಗಿವೆ. ಈ ವಿದ್ಯಮಾನಗಳೆಡೆಗೆ ಸಹಾನುಭೂತಿ ಹೊಂದಿರುವ ಬಾಹುಬಲಿಯ ಮುಖಭಾವ ನನಗೆ ಕಾಣಿಸುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರು ಸಂದೇಶ ಸಾರಿದ್ದಾರೆ.

88ನೇ ಐತಿಹಾಸಿಕ ಮಹಾಮಸ್ತಕಾಭಿಷೇಕ ಮಹೋತ್ಸವ ಉದ್ಘಾಟಿಸಿ, ಸಹೋದರ, ಸಹೋದರಿಯರೇ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ಕರ್ನಾಟಕದ ಜನರಲ್ಲಿನ ಆತಿಥ್ಯ ಪದೇ ಪದೇ ಬರುವಂತೆ ಪ್ರೇರೇಪಿಸುತ್ತದೆ. ರಾಜ್ಯಕ್ಕೆ ಇದು ನನ್ನ ಮೂರನೇ ಭೇಟಿ ಎಂದು ಪ್ರಶಂಸಿಸಿದರು.

ಬಾಹುಬಲಿ ದರ್ಶನದಿಂದ ಅಪಾರ ಪ್ರಸನ್ನತಾ ಭಾವ ಅನುಭವವಾಗುತ್ತಿದೆ. ಬಾಹುಬಲಿ ಮಾನವತೆಯ ಕಲ್ಯಾಣಕ್ಕಾಗಿ ಹಲವು ಸಂದೇಶ ನೀಡಿದ್ದಾರೆ. ಅದರ ಕಾರಣಕ್ಕಾಗಿ ಶ್ರವಣಬೆಳಗೊಳ ಇಂದು ಆಕರ್ಷಣೆಯ ಕೇಂದ್ರವಾಗಿದೆ ಎಂದರು.

ಉಜ್ಜಯಿನಿಯಿಂದ ಬಂದ ಭದ್ರಬಾಹು ಹಾಗೂ ಸಾಮ್ರಾಟ ಚಂದ್ರಗುಪ್ತ ಕೂಡ ಇಲ್ಲಿಗೆ ಬಂದು ದೇಹತ್ಯಾಗ ಮಾಡಿದ್ದಾರೆ. ಅಂತಹ ರಾಷ್ಟ್ರ ನಿರ್ಮಾತೃಗಳು ಶಾಂತಿ, ನೆಮ್ಮದಿ ಹಾಗೂ ತ್ಯಾಗದ ಪ್ರತೀಕವಾಗಿದ್ದಾರೆ. ಜೈನ ಸಿದ್ಧಾಂತ ಇಡೀ ದೇಶವನ್ನು ಒಂದುಗೂಡಿಸಿದೆ ಎಂದು ಹೇಳಿದರು.

ಸಾವಿರ ವರ್ಷದ ಹಿಂದೆ ಮೂರ್ತಿ ಕೆತ್ತಿದ ಶಿಲ್ಪಿ ಕಲ್ಲಿಗೆ ಜೀವ ತುಂಬಿದ್ದಾರೆ. ಜೈನ ಧರ್ಮ ಪಕೃತಿಯನ್ನ ಕಾಪಾಡುವ ಸಂದೇಶ ಸಾರಿದೆ. ಬಾಹುಬಲಿಯ ವಿಶೇಷ ಪ್ರತಿಮೆ ಭಾರತೀಯ ಕಲೆ ಮತ್ತು ವಾಸ್ತುಶಿಲ್ಪಿಯ ಹಿರಿಮೆಗೆ ಒಂದು ಉದಾಹಾರಣೆ. ಜೈನಧರ್ಮದ ಮಹಾಮಜ್ಜನ ಮಹೋತ್ಸವದಲ್ಲಿ ಭಾಗಿಯಾದ ಸಂತೋಷ ನನ್ನದಾಗಿದೆ. ಮಹಾಮಸ್ತಕಾಭಿಷೇಕ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.

Leave a Reply

Your email address will not be published. Required fields are marked *

Back To Top