Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಕಾರಿನ ಮೇಲೆ ಬಿದ್ದ ಬೃಹತ್​ ಮರ: ಕೂದಲೆಳೆ ಅಂತರದಲ್ಲಿ ಮಗು ಬಚಾವ್​

Sunday, 20.08.2017, 5:05 PM       No Comments

ಹಾಸನ: ಮಳೆಯ ರಭಸಕ್ಕೆ ಬುಡಮೇಲಾಗಿ ಕಾರಿನ ಮೇಲೆ ಬಿದ್ದ ಮರದ ಅವಘಡದಿಂದ ಕೂದಲೆಳೆ ಅಂತರದಲ್ಲಿ ಮಗು ಮತ್ತು ಚಾಲಕ ಬದುಕುಳಿದಿರುವ ಘಟನೆ ಇಂದು ಭಾನುವಾರ ಹಾಸನದ ಹರ್ಷ ಮಹಲ್​ ಬಳಿ ನಡೆದಿದೆ.

ಹಾಸನದಲ್ಲಿ ಸುರಿದ ಮಳೆಯಿಂದಾಗಿ ಹಳೇ ಕಾಲದ ಭಾರಿ ಮರವೊಂದು ಬುಡಮೇಲಾಗಿ ಇನ್ನೋವಾ ಕಾರಿನ ಮೇಲೆ ಉರುಳಿದೆ. ಭಾರಿ ಗಾತ್ರದ ಮರ ಬಿದ್ದಿದ್ದರಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಇನ್ನು ಈ ದುರಂತದಿಂದ ಕೂದಲೆಳೆ ಅಂತರದಲ್ಲಿ ಮಗು ಮತ್ತು ಚಾಲಕ ಪಾರಾಗಿದ್ದಾರೆ. ಕಾರಿನ ಎಡಬದಿಯ ಕಿಟಕಿ ಬಳಿ ಕುಳಿತಿದ್ದ ಮಗು, ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದೆ.

4 ವರ್ಷದ ಲಯನ್ ಗೌಡ ಎಂಬ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಚನ್ನರಾಯಪಟ್ಟಣದ ಒಟ್ಟು ನಾಲ್ವರು ಹಬ್ಬದ ಖರೀದಿಗಾಗಿ ಹಾಸನಕ್ಕೆ ಬಂದಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಅದೃಷ್ಟವಶಾತ್​ ಮಗು ದುರಂತದಿಂದ ಪಾರಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top